India vs Zimbabwe 3rd ODI: ಇಂದು ಭಾರತ-ಜಿಂಬಾಬ್ವೆ ಅಂತಿಮ ಏಕದಿನ ಪಂದ್ಯ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

ಇಂದು ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವೆ 3ನೇ ಮತ್ತು ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಟೂರ್ನಿಯಲ್ಲಿ 2-0 ಮುನ್ನಡೆ ಸಾಧಿಸಿರುವ ರಾಹುಲ್ ಪಡೆ ಇಂದಿನ ಪಂದ್ಯ ಗೆದ್ದು ಜಿಂಬಾಬ್ವೆಯನ್ನು ವೈಟ್​ವಾಶ್​ ಮಾಡಲು ಹವಣಿಸುತ್ತಿದೆ.

IND vs ZIM

IND vs ZIM

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ 3ನೇ ಮ್ಯಾಚ್​ ಇಂದು ಜಿಂಬಾಬ್ವೆಯ ಹರಾರೆ ಮೈದಾನದಲ್ಲಿ ನಡೆಯಲಿದೆ. ಮೊದಲ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದು ಜಿಂಬಾಬ್ವೆ ತಂಡವನ್ನು ವೈಟ್​ವಾಶ್​​ ಮಾಡುವ ತವಕದಲ್ಲಿದೆ. ಈ ಸರಣಿ ಗೆಲುವು ಕನ್ನಡಿಗೆ ಕೆಎಲ್ ರಾಹುಲ್  (KL Rahul) ಮೊದಲ ಜಯವಾಗಿದೆ. ಈಗಾಗಲೇ ರಾಹುಲ್​ ಅವರನ್ನು ಭವಿಷ್ಯದ ಟೀಂ ಇಂಡಿಯಾ ನಾಯಕ ಎಂದು ಬಿಂಬಿಸಲಾಗುತ್ತಿದೆ. ಹೀಗಾಗಿ ಈ ಸರಣಿ ಅವರಿಗೆ ಬಹಳ ಮಹತ್ವದ್ದಾಗಿತ್ತು ಎಂದರೂ ತಪ್ಪಾಗಲಾರದು. ಇದರ ನಡುವೆ ಮುಂಬರುವ ಏಷ್ಯಾ ಕಪ್​ 2022 (Asia Cup 2022) ಮತ್ತು ಐಸಿಸಿ ಟಿ20 ವಿಶ್ವಕಪ್​ನ ಪೂರ್ವಭಾವಿ ಪಂದ್ಯವಾಗಿ ಗುರುತಿಸಿಕೊಂಡಿದೆ. ಯುವ ತಂಡವಾಗಿರುವುದಿರಂದ ಇಂದಿನ ಪಂದ್ಯದಲ್ಲಾದರೂ ಬಹಳಷ್ಟು ಆಟಗಾರರ  ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇಂದಿನಿಂದ ಹರಾರೆ ಸ್ಪೋರ್ಟ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ.  ಭಾರತೀಯ ಕಾಲಮಾನ ಮಧ್ಯಾಹ್ನ 12:45ಕ್ಕೆ ಪ್ರಾರಂಭವಾಗಲಿದೆ. ಇನ್ನು, ಭಾರತ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯು ಸೋನಿ ಚಾನೆಲ್​ ನೇರಪ್ರಸಾರ ಮಾಡಲಿದೆ.  ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು.

ರಾಹುಲ್ ನಾಯಕತ್ವದಲ್ಲಿ ಮೊದಲ ಸರಣಿ ಜಯ:

ಹೌದು, ಕೆಎಲ್ ರಾಹುಲ್ ನಾಯಕತ್ವದಲ್ಲಿ ಇದು ಮೊದಲ ಸರಣಿ ಜಯವಾಗಿದೆ. ಹೀಗಾಗಿ ಇಂದಿನ ಪಂದ್ಯದ ಮೂಲಕ ಮತ್ತೊಂದು ಗೆಲುವು ದಾಖಲಿಸಿದರೆ, ವೈಟ್​ವಾಶ್​ ಮಾಡುವ ಅವಕಾಶ ದೊರಕಲಿದೆ. ಸರಿಸುಮಾರು 6 ವರ್ಷಗಳ ನಂತರ ಜಿಂಬಾಬ್ವೆ ಸರಣಿ ಆಡುತ್ತಿರುವ ಟೀಂ ಇಂಡಿಯಾವು ಈ ಸಾಧನೆ ಮಾಡುವ ಮೂಲಕ ಮುಂಬರುವ ಮೆಗಾ ಟೂರ್ನಿಗಳಿಗೆ ಸಿದ್ಧತೆ ನಡೆಸಿದಂತಾಗಿದೆ. ಸರಣಿಯ ಕೊನೆಯ ಪಂದ್ಯವಾಗಿರುವುದರಿಂದ  ಯುವ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದ್ದು, ಯಾವೆಲ್ಲಾ ಆಟಗಾರರು ಇಂದು ಕಣಕ್ಕಿಳಿಯುತ್ತಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: Sanju Samson: ಟೀಂ ಇಂಡಿಯಾ ದಿಗ್ಗಜ ಆಟಗಾರರಿಗೂ ಸಾಧ್ಯವಾಗದ ಸಾಧನೆ ಮಾಡಿದ ಸಂಜು ಸ್ಯಾಮ್ಸನ್

ಪಿಚ್​ ವರದಿ:

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿರುವ ಪಿಚ್ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಸಮತೋಲಿತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವೇಗಿಗಳು ಹೆಚ್ಚುವರಿ ಬೌನ್ಸ್ ಪಡೆಯುವ ಸಾಧ್ಯತೆಯಿದೆ.  ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಕೇವಲ 200 ರನ್ ಮತ್ತು 2ನೇ ಬ್ಯಾಟಿಂಗ್​ ಮಾಡುವ ತಂಡಕ್ಕೆ ಪಿಚ್​ ಹೆಚ್ಚು ಸಹಾಯಕವಾಗಿರಲಿದೆ. ಹೀಗಾಗಿ ನಾಳೆ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Asia Cup 2022: ಟೀಂ ಇಂಡಿಯಾಗೆ ಸಿಹಿ ಸುದ್ದಿ, ಆದ್ರೆ ಪಾಕ್​ ತಂಡಕ್ಕೆ ಬಿಗ್ ಶಾಕ್!

ZIM vs IND ಸಂಭಾವ್ಯ ತಂಡ:

ಸಂಭಾವ್ಯ ಭಾರತ ತಂಡ:  ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಹಾರ್, ಕುಲದೀಪ್ ಯಾದವ್, ಪ್ರಸಿದ್ಧ್‌ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್

ಸಂಭಾವ್ಯ ಜಿಂಬಾಬ್ವೆ ತಂಡ: ತಡಿವಾನಾಸೆ ಮರುಮಣಿ, ತಕುಡ್ಜ್ವಾನಾಸೆ ಕೈಟಾನೊ, ಇನೋಸೆಂಟ್ ಕಯಾ, ವೆಸ್ಲಿ ಮಾಧೆವೆರೆ, ಸಿಕಂದರ್ ರಜಾ, ರೆಗಿಸ್ ಚಕಬಾವಾ (ನಾಯಕ), ಟೋನಿ ಮುನ್ಯೊಂಗಾ, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯುಚಿ, ತನಕಾ ಚಿವಾಂಗಾ.
Published by:shrikrishna bhat
First published: