Pakistan Cricketer: ಸಾವಿನ ದವಡೆಯಿಂದ ಪಾರಾಗಿ ಬಂದ ಪಾಕ್ ಕ್ರಿಕೆಟಿಗ! ಘಟನೆ ಬಗ್ಗೆ ವೈದ್ಯರು ಹೇಳಿದ್ದೇನು?

ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಮೊಹಮ್ಮದ್ ರಿಜ್ವಾನ್ ಅವರ ಆಗಿನ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಸ್ಟಾರ್ ಆಟಗಾರ ತನ್ನ ಧೈರ್ಯ ಮತ್ತು ದೃಢ ನಿಶ್ಚಯಕ್ಕಾಗಿ ಅನೇಕರಿಂದ ಪ್ರಶಂಸೆಗಳನ್ನು ಗಳಿಸಿದರು.

ಮೊಹಮ್ಮದ್ ರಿಜ್ವಾನ್

ಮೊಹಮ್ಮದ್ ರಿಜ್ವಾನ್

  • Share this:
ಪಾಕಿಸ್ತಾನ ಕ್ರಿಕೆಟ್ (Pakistan cricket)  ತಂಡದ ವಿಕೆಟ್ ಕೀಪರ್ (Wicket-keeper) ಮತ್ತು ಬ್ಯಾಟ್ಸ್‌ಮನ್(Batsman) ಮೊಹಮ್ಮದ್ ರಿಜ್ವಾನ್ (Mohammed Rizwan) ಅವರು ಕಳೆದ ವರ್ಷ ಟಿ20 ವಿಶ್ವಕಪ್ ಸೆಮಿಫೈನಲ್ ಗೆ (World Cup semifinal) ಮೊದಲು ಎರಡು ದಿನಗಳ ಕಾಲ ಆಸ್ಪತ್ರೆಯ (Hospital) ಐಸಿಯುನಲ್ಲಿದ್ದರಂತೆ (ICU). ನಂತರ ಆಸ್ಟ್ರೇಲಿಯಾ (Australia) ವಿರುದ್ಧ ನಿರ್ಣಾಯಕ 67 ರನ್ ಗಳನ್ನು ಗಳಿಸಿದರು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ಅವರ ಆಗಿನ ಫೋಟೋವೊಂದು (Photo) ಅಂತರ್ಜಾಲದಲ್ಲಿ (Internet) ವೈರಲ್ (Viral) ಆದ ನಂತರ ಸ್ಟಾರ್ ಆಟಗಾರ ತನ್ನ ಧೈರ್ಯ ಮತ್ತು ದೃಢ ನಿಶ್ಚಯಕ್ಕಾಗಿ ಅನೇಕರಿಂದ ಪ್ರಶಂಸೆಗಳನ್ನು ಗಳಿಸಿದರು.

ದುರದೃಷ್ಟವಶಾತ್, ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ತನ್ನ ಜೀವನದ ಅತ್ಯುತ್ತಮವಾದ ಇನ್ನಿಂಗ್ಸ್ ಆಡಿದ್ದರಿಂದ ರಿಜ್ವಾನ್ ಅವರ ವೀರೋಚಿತ ಆಟವು ಪಾಕಿಸ್ತಾನಕ್ಕೆ ಸೋಲಿನ ದವಡೆಯಿಂದ ಪಾರು ಮಾಡಲು ಸಹಾಯ ಮಾಡಲಿಲ್ಲ.

ತೀವ್ರ ಎದೆಯ ಸೋಂಕು
ಆರು ಪಂದ್ಯಗಳಲ್ಲಿ 281 ರನ್ ಗಳಿಸುವ ಮೂಲಕ ಟಿ20 ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಕೊನೆಗೊಂಡ ರಿಜ್ವಾನ್ ಅವರಿಗೆ ತೀವ್ರ ಎದೆಯ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ವೈದ್ಯ ನಜೀಬುಲ್ಲಾ ಸೂಮ್ರೊ ಅವರು ರಿಜ್ವಾನ್ ಅನುಭವಿಸಿದ 'ಅಗ್ನಿಪರೀಕ್ಷೆ'ಯನ್ನು ಈಗ ನೆನಪಿಸಿಕೊಂಡರು ಮತ್ತು ಆಟಗಾರನಿಗೆ 'ನಿಷೇಧಿತ' ವಸ್ತುವನ್ನು ಚುಚ್ಚುವ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯಿಂದ ಅನುಮತಿ ಪಡೆದರು ಎಂದು ಹೇಳಿದ್ದಾರೆ.

"ನಿಮಗೆ ಉಸಿರಾಡಲು ಸಾಧ್ಯವಾಗಲಿಲ್ಲ ಮತ್ತು ನೀವು ಚೇತರಿಸಿಕೊಳ್ಳಲು ಸಹಾಯ ಮಾಡಲು ಆ ಔಷಧಿಯನ್ನು ನಿಮಗೆ ನೀಡಲು ನಾನು ಐಸಿಸಿಯಿಂದ ಅನುಮತಿ ಪಡೆಯಬೇಕಾಗಿತ್ತು. ಸಾಮಾನ್ಯವಾಗಿ, ಕ್ರೀಡಾಪಟುಗಳಿಗೆ ಇದನ್ನು ನಿಷೇಧಿಸಲಾಗಿದೆ, ಆದರೆ ಬೇರೆ ಯಾವುದೇ ಆಯ್ಕೆ ಲಭ್ಯವಿಲ್ಲದ ಕಾರಣ, ಆ ಔಷಧಿಯನ್ನು ಚುಚ್ಚಲು ನಾವು ಐಸಿಸಿಯಿಂದ ಅನುಮತಿ ಪಡೆಯಬೇಕಾಗಿತ್ತು" ಎಂದು ಸಂದರ್ಶನದಲ್ಲಿ ಡಾ.ಸೂಮ್ರೊ ಅವರು ಹೇಳಿದ್ದಾರೆ.

ಇದನ್ನೂ ಓದಿ:  Bride and Groom: ಅನಕ್ಷರಸ್ಥ ವರ ಬೇಡ ಅಂತ ಮಂಟಪದಲ್ಲೇ ಹಾರ ಕಿತ್ತೆಸದ ವಧು! ವಿಡಿಯೋ ವೈರಲ್

ರಿಜ್ವಾನ್ ಆಸ್ಪತ್ರೆಗೆ ದಾಖಲಾಗುವ ಮೊದಲು 3 ರಿಂದ 5 ದಿನಗಳಿಂದ ನಿರಂತರ ಜ್ವರ, ನಿರಂತರ ಕೆಮ್ಮು ಮತ್ತು ಎದೆ ಬಿಗಿತದಿಂದ ಬಳಲುತ್ತಿದ್ದರು. ಪರೀಕ್ಷೆಗಳನ್ನು ನಡೆಸಿದ ನಂತರ, ಫಲಿತಾಂಶಗಳು ರಿಜ್ವಾನ್ ತೀವ್ರವಾದ ಗಂಟಲು ಸೋಂಕನ್ನು ಹೊಂದಿದ್ದು, ಇದು ಅನ್ನನಾಳದ ಸೆಳೆತ ಮತ್ತು ಬ್ರಾಂಕೋಸ್ಪಾಸ್ಮ್ ಗೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದರು.

ರಿಜ್ವಾನ್ ಪ್ರಸ್ತುತ ಇಂಗ್ಲಿಷ್ ಕೌಂಟಿ ಸಸೆಕ್ಸ್ ಪರ ಆಡುತ್ತಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ನ ಕೆಂಪು ಚೆಂಡಿನ ಕೌಂಟಿ ಚಾಂಪಿಯನ್‌ಷಿಪ್ ಎರಡನೇ ಡಿವಿಷನ್ ನಲ್ಲಿ ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅವರೊಂದಿಗೆ ಶತಕದ ಜೊತೆಯಾಟವನ್ನು ಹಂಚಿಕೊಂಡ ನಂತರ ಮತ್ತೊಮ್ಮೆ ಸುದ್ದಿಯಲ್ಲಿ ಬಂದರು. ರಿಜ್ವಾನ್ ಅವರು ಸೌತ್ ಕೋಸ್ಟ್ ಕ್ಲಬ್ ಪರ ಚೊಚ್ಚಲ ಪಂದ್ಯವನ್ನಾಡಿ 79 ರನ್ ಗಳಿಸಿ ಮತ್ತು ನಂತರ ಮಿಡಲ್ಸೆಕ್ಸ್ ವಿರುದ್ಧ 31 ರನ್ ಗಳಿಸಿದರು.

ಗಾಯದ ಗಂಭೀರತೆಯ ವಿವರಗಳನ್ನು ಹಂಚಿ ಕೊಂಡ ಕ್ರಿಕೆಟಿಗ
ಇದಕ್ಕೂ ಮುನ್ನ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಗಾಯದ ಗಂಭೀರತೆಯ ವಿವರಗಳನ್ನು ಹಂಚಿ ಕೊಂಡಿದ್ದರು, ಅವರು ಆಸ್ಪತ್ರೆಗೆತಲುಪಿದ ವೇಳೆ ಅವರಿಗೆ ಉಸಿರಾಡುಲು ಸಹ ಆಗುತ್ತಿರಲಿಲ್ಲ ಎಂದು ಹೇಳಿದ್ದರು.

"ನಾನು ಆಸ್ಪತ್ರೆಯನ್ನು ತಲುಪಿದಾಗ, ನನಗೆ ಚೆನ್ನಾಗಿ ಉಸಿರಾಡಲು ಆಗುತ್ತಿರಲಿಲ್ಲ ಮತ್ತು ನನ್ನ ಶ್ವಾಸನಾಳಗಳು ಉಸಿರುಗಟ್ಟಿವೆ ಎಂದು ನರ್ಸ್ ಗಳು ನನಗೆ ಹೇಳಿದರು. ನಾನು ಬೆಳಿಗ್ಗೆಯ ಹೊತ್ತಿಗೆ ಸುಧಾರಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ನನಗೆ ತಿಳಿಸಲಾಯಿತು. ಮಧ್ಯಾಹ್ನದ ಸಮಯದಲ್ಲಿ, ನನ್ನನ್ನು ಸಂಜೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ನನಗೆ ತಿಳಿಸಲಾಯಿತು.

ಇದನ್ನೂ ಓದಿ:  Duplicate Salman Khan: ಶರ್ಟ್​ಲೆಸ್ ಆಗಿ ರೋಡ್​ನಲ್ಲಿ ಡ್ಯಾನ್ಸ್, ಇದೆಂಥಾ ಹುಚ್ಚಾಟ?

"ಆದ್ದರಿಂದ, ನಾನು ಅಲ್ಲೇ ಇರುವ ನರ್ಸ್ ವೊಬ್ಬರನ್ನು ಕೇಳಿದಕ್ಕೆ ಅವರು 20 ನಿಮಿಷ ತಡವಾಗಿ ಆಸ್ಪತ್ರೆಗೆ ಬಂದಿದ್ದರೆ, ನಿಮ್ಮ ಎರಡೂ ಶ್ವಾಸನಾಳಗಳು ಒತ್ತಡದಿಂದ ಒಡೆದು ಹೋಗುತ್ತಿದ್ದವು ಎಂದು ನನಗೆ ತಿಳಿಸಲಾಯಿತು. ನೀವು ಎರಡು ರಾತ್ರಿಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇಲ್ಲಿ ಇರಬೇಕಾಗುತ್ತದೆ" ಎಂದು ರಿಜ್ವಾನ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಗೆ ತಿಳಿಸಿದ್ದರು.

ವೈದ್ಯರ ಉತ್ತೇಜನವೇ ನಂಗೆ ಚೇತರಿಸಿಕೊಳ್ಳಲು ಸಾಧ್ಯವಾಯಿತು
"ಪಾಕಿಸ್ತಾನಕ್ಕಾಗಿ ನಾನು ಸೆಮಿಫೈನಲ್ ಆಡಬೇಕೆಂದು ಅವರು ಬಯಸುತ್ತಾರೆ ಎಂದು ವೈದ್ಯರು ನನಗೆ ಹೇಳಿದ್ದು ನನಗೆ ತುಂಬಾನೇ ಉತ್ತೇಜನ ನೀಡಿತು. ಆದರೆ ನಂತರ, ಅವರು 'ರಿಜ್ವಾನ್, ನೀವು ಆಡುವ ಸ್ಥಿತಿಯಲ್ಲಿಲ್ಲ' ಎಂದು ಹೇಳಿದಾಗ ನನಗೆ ಬೇಸರ ಆಯ್ತು. ಅದೃಷ್ಟವಶಾತ್, ಆರೋಗ್ಯವು ಸುಧಾರಿಸಲು ಪ್ರಾರಂಭಿಸಿತು ಮತ್ತು ನಾನು ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು" ಎಂದು ರಿಜ್ವಾನ್ ಹೇಳಿದರು.
Published by:Ashwini Prabhu
First published: