ಏಷ್ಯನ್​ ಗೇಮ್ಸ್​ನ ಈ ಒಂದು ಫೋಟೋ ಭಾರತ ಮತ್ತು ಪಾಕಿಸ್ತಾನದ ಹೃದಯ ಗೆದ್ದಿದೆ!

 • News18
 • Last Updated :
 • Share this:
  -ನ್ಯೂಸ್​ 18 ಕನ್ನಡ

  ಇಂಡೂನೇಷ್ಯಾ,(ಆ.31): ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18 ನೇ ಏಷ್ಯನ್​  ಗೇಮ್ಸ್​ನ ಈ ಒಂದು ಅಭೂತಪೂರ್ವ ಫೋಟೋ ಭಾರತ ಮತ್ತು ಪಾಕಿಸ್ತಾನದ ಎಲ್ಲರ ಹೃದಯ ಗೆದ್ದಿದೆ.

  ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಮಡಿಲಿಗೆ ಮತ್ತೊಂದು ಚಿನ್ನದ ಪದಕ ಬಂದಿದೆ. ಜಾವೆಲಿನ್​ ಥ್ರೋ(ಭರ್ಜಿ ಎಸೆತ) ಕ್ರೀಡೆಯಲ್ಲಿ ನೀರಜ್​ ಚೋಪ್ರಾ ಮೊದಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

  ಇವರ ಗೆಲುವಿನ ಕ್ಷಣದ ಫೋಟೋ ಇದೀಗ ಭಾರೀ ವೈರಲ್​ ಆಗಿದೆ. ಆದರೆ ದೇಶದ ಕೀರ್ತಿ ಪತಾಕೆ ಹಾರಿಸಿರುವ ನೀರಜ್​ ಚೋಪ್ರಾ ಗೆಲುವನ್ನು ಇಂಟರ್​ನೆಟ್​​​ ಆಚರಣೆ ಮಾಡಿಲ್ಲ. ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನದ ಅರ್ಷದ್​​ ನದೀಂ ಜೊತೆ ನೀರಜ್​ ಚೋಪ್ರಾ ಕೈ ಕುಲುಕುವ ಫೋಟೋವೊಂದು ಇದೀಗ ವೈರಲ್​ ಆಗಿದೆ.   

  ಭಾರತದ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಟ್ವಿಟ್ಟರ್​ನಲ್ಲಿ ಈ ಅಭೂತಪೂರ್ವ ಕ್ಷಣದ ಪೋಟೋ ಶೇರ್​ ಮಾಡಿ, ನೀರಜ್​ ಚೋಪ್ರಾ ಗೆಲುವಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. 'ಮಗುವಿಗೆ ಒದಗಿಸುವ ಅತ್ಯುತ್ತಮ ಶಿಕ್ಷಣ ಕ್ರೀಡೆ' ಎಂದು ಹೇಳಿದ್ದಾರೆ.

  ನಾನು ಯಾವಾಗಲೂ  'ಕ್ರೀಡೆ ಒಂದು ಅತ್ಯುತ್ತಮ ಶಿಕ್ಷಣ' ಎಂದು ಹೇಳುವುದು ಇದೇ ಕಾರಣದಿಂದ.   ಕ್ರೀಡೆಯು ನಿಮ್ಮ ಮಗುವಿಗೆ  ಸಮಾನತೆ, ಗೌರವ ಮತ್ತು ಮುಖ್ಯವಾಗಿ ಮಾನವೀಯತೆಯನ್ನು ಕಲಿಸುತ್ತದೆ. ನಮ್ಮ ಚಾಂಪಿಯನ್ ಕ್ರೀಡಾಪಟುಗಳಿಂದ ಮಾತ್ರ ಈ ವಿಶಿಷ್ಟ ಗುಣಗಳು ಬರುತ್ತವೆ ಎಂದು ಹೇಳಿದ್ದಾರೆ.  ಪಾಕಿಸ್ತಾನದ ವೇಗಿ ಹಸ್ಸಾನ್​ ಅಲಿ ಈ ಇಬ್ಬರು ಆಟಗಾರರು ತೋರಿರುವ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ವೈರಲ್​ ಆಗಿರುವ ಈ ಫೋಟೋ ಭಾರತ ಮತ್ತು ಪಾಕಿಸ್ತಾನದ  ಹೃದಯಗಳನ್ನು ಗೆದ್ದಿದೆ.

  First published: