Rohit Sharma: ರೋಹಿತ್ ಟೆಸ್ಟ್ ಜೀವನದ ಕುರಿತು ಮಾತನಾಡಿದ ಕಾರ್ತಿಕ್, ಏನಂದ್ರು ನೋಡಿ

ರೋಹಿತ್ ಅವರ ಭರವಸೆಯ ಆರಂಭ ಮತ್ತು ಅದು ಹಳಿ ತಪ್ಪಿದ ರೀತಿಯ ಬಗ್ಗೆ ಹಿಂತಿರುಗಿ ನೋಡಿದಾಗ, ಭಾರತದ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ರೋಹಿತ್ ಅವರ ಬಗ್ಗೆ ಏನ್ ಹೇಳಿದ್ದಾರೆ ನೋಡಿ.

ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮ

ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮ

  • Share this:
2013 ರ ನವೆಂಬರ್ ತಿಂಗಳು ಅಂತ ಹೇಳಿದ ತಕ್ಷಣ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರ ಕ್ರಿಕೆಟ್ ಆಟದಿಂದ ನಿವೃತ್ತಿ ಘೋಷಿಸುವ ಮೊದಲು ಆಡಿದ ಕೊನೆಯ ಟೆಸ್ಟ್ ಸರಣಿ (Test series) ಕಣ್ಮುಂದೆ ಬರುತ್ತದೆ. ಈ ಟೆಸ್ಟ್ ಸರಣಿಯನ್ನು ಭಾರತವು (India) ವೆಸ್ಟ್ ಇಂಡೀಸ್ ತಂಡದ ವಿರುದ್ಧ ತವರಿನಲ್ಲಿ ಆಡುತ್ತಿದ್ದರು. ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡ ಸರಣಿ ಇದಾಗಿತ್ತು ಎಂದು ಎಲ್ಲರಿಗೂ ನೆನಪಿರುತ್ತದೆ. 24 ವರ್ಷಗಳ ಸುದೀರ್ಘ ವೃತ್ತಿಜೀವನವು ಕೊನೆಗೊಳ್ಳುವ ಹಂತದಲ್ಲಿತ್ತು ಮತ್ತು ಅಭಿಮಾನಿಗಳು ಭಾವನಾತ್ಮಕವಾಗಿ ತಮ್ಮ ನೆಚ್ಚಿನ ಆಟಗಾರನ ನಿವೃತ್ತಿಯ (retirement) ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ತೆಂಡೂಲ್ಕರ್ ಅವರ ವೃತ್ತಿಜೀವನದ ಕೊನೆಯ ಪಂದ್ಯ
ಕೋಲ್ಕತಾದ ಈಡನ್ ಗಾರ್ಡನ್ಸ್ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣವನ್ನು ತೆಂಡೂಲ್ಕರ್ ಅವರ ವೃತ್ತಿಜೀವನದ ಕೊನೆಯ ಪಂದ್ಯಕ್ಕೆ ಎರಡು ಸ್ಥಳಗಳಾಗಿ ಆಯ್ಕೆ ಮಾಡಲಾಗಿತ್ತು. ಕೋಲ್ಕತಾದಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ತೆಂಡೂಲ್ಕರ್ 10 ರನ್ ಗಳಿಸಿ ಔಟಾಗಿದ್ದರು. ಆದರೆ ಭಾರತದ ಪರ ತಮ್ಮ ಅಂತಿಮ ಪಂದ್ಯದಲ್ಲಿ ಅಮೋಘವಾದ 74 ರನ್ ಗಳನ್ನು ಬಾರಿಸಿದ್ದರು. ಅದೇ ಇನ್ನಿಂಗ್ಸ್ ನಲ್ಲಿ ಚೇತೇಶ್ವರ್ ಪೂಜಾರ ಶತಕ ಬಾರಿಸಿದ್ದರು. ಆದರೆ ಸಚಿನ್ ಗಳಿಸಿದ ಆ 74 ರನ್ ಗಳ ಬಗ್ಗೆ ಜನರು ಹೆಚ್ಚು ಮಾತನಾಡುತ್ತಿದ್ದರು.

ವೆಸ್ಟ್ ಇಂಡೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಗೆಲುವು ದಾಖಲಿಸಿತು ಮತ್ತು ಸೂರ್ಯಾಸ್ತದ ಸಮಯದಲ್ಲಿ ತೆಂಡೂಲ್ಕರ್ ಅವರನ್ನು ಆಟದ ಮೈದಾನದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಇದು ತೆಂಡೂಲ್ಕರ್ ಅವರ ಟೆಸ್ಟ್ ಕ್ರಿಕೆಟ್ ನ ಹಾದಿ ಅಂತ್ಯವಾದರೆ, ಅದೇ ಸರಣಿಯಲ್ಲಿ ಭಾರತದ ಇನ್ನೊಬ್ಬ ಅತ್ಯುನ್ನತ ಪ್ರತಿಭಾನ್ವಿತ ಬ್ಯಾಟ್ಸ್‌‌‌‌‍ಮನ್ ಟೆಸ್ಟ್ ವೃತ್ತಿಜೀವನ ಭರ್ಜರಿಯಾಗಿ ಆರಂಭಿಸಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಕೋಲ್ಕತಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ
ಹೌದು.. ಕೋಲ್ಕತಾದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ 177 ರನ್ ಬಾರಿಸಿ ಚೊಚ್ಚಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ 14ನೇ ಭಾರತೀಯ ಬ್ಯಾಟ್ಸ್‌‌‌‌‍ಮನ್ ಎನಿಸಿಕೊಂಡರು. ನಂತರ ಅವರು ಮುಂಬೈನಲ್ಲಿ ನಡೆದ ಟೆಸ್ಟ್ ನಲ್ಲಿ ಸಹ 111 ರನ್ ಗಳಿಸಿ ಅಜೇಯರಾಗಿ ಉಳಿದರು. ಇದು ರೋಹಿತ್ ಅವರ ಪಾಲಿಗೆ ಅದ್ಭುತ ಟೆಸ್ಟ್ ವೃತ್ತಿಜೀವನದ ಆರಂಭವಾಗಿತ್ತು.

ಇದನ್ನೂ ಓದಿ: IND vs PAK: ಎಲ್ಲಾ ಕಡೇನೂ ಹೆಣ್ಮಕ್ಕಳೇ ಸ್ಟ್ರಾಂಗ್​​ ಗುರೂ! ಸ್ಟಾರ್​ ನಟನಿದ್ರೂ, ನಟಿಗೇ ಜೂಮ್​ ಹಾಕಿದ ಕ್ಯಾಮರಾಮ್ಯಾನ್​

ಆಶ್ಚರ್ಯಕರವಾಗಿ, ರೋಹಿತ್ ಅವರ ಟೆಸ್ಟ್ ವೃತ್ತಿಜೀವನವು ಆ ಸರಣಿ ಆದ ನಂತರ ಅಷ್ಟೊಂದು ಚೆನ್ನಾಗಿ ಮುಂದುವರೆಯಲಿಲ್ಲ. ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಚೆತೇಶ್ವರ್ ಪೂಜಾರ ಅವರು ಭಾರತೀಯ ಟೆಸ್ಟ್ ಕ್ರಿಕೆಟ್ ನ ಮುಂದಿನ ಪ್ರಸಿದ್ಧ ಮಧ್ಯಮ ಕ್ರಮಾಂಕದವರಾಗುವುದರೊಂದಿಗೆ, ರೋಹಿತ್ ಕೆಲ ಕಾಲ ಸಾಂದರ್ಭಿಕ ಟೆಸ್ಟ್ ಆಟಗಾರನಾಗಿ ಉಳಿದಿದ್ದು, ನಂತರ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹ ಹೆಣಗಾಡಿದರು.

ರೋಹಿತ್ ಬಗ್ಗೆ ದಿನೇಶ್ ಕಾರ್ತಿಕ್ ಅವರು ಹೇಳಿದ್ದು ಹೀಗೆ
ರೋಹಿತ್ ಅವರ ಭರವಸೆಯ ಆರಂಭ ಮತ್ತು ಅದು ಹಳಿ ತಪ್ಪಿದ ರೀತಿಯ ಬಗ್ಗೆ ಹಿಂತಿರುಗಿ ನೋಡಿದಾಗ, ಭಾರತದ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ರೋಹಿತ್ ಅವರ ಬಗ್ಗೆ ಏನ್ ಹೇಳಿದ್ದಾರೆ ನೋಡಿ.

"ಭಾರತೀಯ ದೃಷ್ಟಿಕೋನದಿಂದ ಟೆಸ್ಟ್ ಕ್ರಿಕೆಟ್ ನಲ್ಲಿ ರೋಹಿತ್ ಅವರಷ್ಟು ಯಶಸ್ವಿ ಆರಂಭವನ್ನು ಪಡೆದ ಆಟಗಾರರು ಹೆಚ್ಚು ಜನ ಇರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ತಮ್ಮ ಮೊದಲ ಎರಡು ಪಂದ್ಯಗಳಲ್ಲಿ, ಅವರು ಶತಕಗಳನ್ನು ಗಳಿಸಿದರು ಮತ್ತು ನಂತರ ಎಲ್ಲರೂ ಸಚಿನ್ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗುತ್ತಿದ್ದಾರೆ, ರೋಹಿತ್ ನಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ” ಎಂದು ತಿಳಿದು ಕೊಂಡಿದ್ದೆವು. “ಆದರೆ ಜೀವನ ಮತ್ತು ಕ್ರೀಡೆಯು ನೀವು ಅಂದುಕೊಂಡಂತೆ ಎಂದಿಗೂ ನಿಖರವಾಗಿ ನಡೆಯೋದಿಲ್ಲ ಮತ್ತು ಕಾಲಾನಂತರದಲ್ಲಿ ರೋಹಿತ್ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಥಾನ ಪಡೆಯಲು ಸಹ ತುಂಬಾನೇ ಕಷ್ಟ ಪಡಬೇಕಾಯಿತು" ಎಂದು ಕಾರ್ತಿಕ್ ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿದರು.

ಏಕದಿನ ಕ್ರಿಕೆಟ್ ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್
ಟೆಸ್ಟ್ ಕ್ರಿಕೆಟ್ ನಲ್ಲಿ ರೋಹಿತ್ ತನ್ನ ಅವಕಾಶಗಳಿಗಾಗಿ ಕಾಯಬೇಕಾಗಿದ್ದರೆ, ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಅವರ ಸಾಧನೆಗಳು ಹೆಚ್ಚಾಗುತ್ತಾ ಹೋದವು. ಏಕದಿನ ಕ್ರಿಕೆಟ್ ನಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾದರು ಮತ್ತು ಟಿ20 ನಲ್ಲಿ ನಾಲ್ಕು ಶತಕಗಳನ್ನು ಗಳಿಸಿದರು. ರೋಹಿತ್ ಅವರ ವೈಟ್-ಬಾಲ್ ವೃತ್ತಿಜೀವನವು ಹೊಸ ಎತ್ತರವನ್ನು ತಲುಪಿತು, ಆದರೆ ಅವರು ಇನ್ನೂ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂಬ ಅಂಶವು ಅವರನ್ನು ಬಹುಶಃ ಟೆಸ್ಟ್ ಕ್ರಿಕೆಟ್ ಗಾಗಿ ಇವರು ಅಲ್ಲ ಅಂತ ನಂಬುವಂತೆ ಮಾಡಿತು.

ಇದನ್ನೂ ಓದಿ:  Sara Tendulkar: ಸಾರಾ-ಶುಭಮನ್​ ಗಿಲ್​ ಬ್ರೇಕಪ್​? ವೈರಲ್ ಆಯ್ತು ಇನ್ಸ್ಟಾಗ್ರಾಂ ಫೋಸ್ಟ್

2019 ರಲ್ಲಿ ರೋಹಿತ್ ಅವರನ್ನು ಭಾರತದ ಟೆಸ್ಟ್ ಓಪನರ್ ಆಗಿ ಮಾಡಿದಾಗ ಅವರು ಭಾರತದ ಆಲ್ ಫಾರ್ಮ್ಯಾಟ್ ನಾಯಕರಾಗಿ ಬದಲಾದರು.

"ರೋಹಿತ್ ಕೆಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದಾರೆ ಮತ್ತು ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಕಂಡುಕೊಂಡಿಲ್ಲ. ರೋಹಿತ್ ಯಾವಾಗಲೂ ಟೆಸ್ಟ್ ಕ್ರಿಕೆಟ್ ಗೆ ಏನಾದರೂ ಕೊಡುಗೆ ನೀಡುತ್ತಾರೆ ಎಂದು ನಂಬಿದ್ದರು. ಕೆಲವೊಮ್ಮೆ ಅವರು ಒಂದು ಅಥವಾ ಎರಡು ಅಜಾಗರೂಕ ಹೊಡೆತಗಳನ್ನು ಆಡಿದರೂ ಸಹ ಅವರು ಮತ್ತೆ ಅವರ ಲಯಕ್ಕೆ ಹಿಂತಿರುಗುತ್ತಾರೆ ಎಂದು ಅವರು ನಂಬಿದ್ದರು. ಆದರೆ ಅವರು ಹಿಂತಿರುಗಲಿಲ್ಲ ಮತ್ತು ಬಹುಶಃ ಇದು ಈಗ ಅವರಿಗೆ ವೈಟ್-ಬಾಲ್ ಕ್ರಿಕೆಟ್ ಆಗಲಿದೆ ಎಂಬ ಅಂಶಕ್ಕೆ ಅವರು ರಾಜೀನಾಮೆ ನೀಡಿದರು" ಎಂದು ಕಾರ್ತಿಕ್ ಹೇಳಿದರು.
Published by:Ashwini Prabhu
First published: