• Home
 • »
 • News
 • »
 • sports
 • »
 • Sports: ರನ್ನಿಂಗ್ ಮಾಡಿ, ಪೌಷ್ಟಿಕ ಆಹಾರ ಸೇವಿಸಿ 58 ಕೆಜಿ ತೂಕ ಇಳಿಸಿಕೊಂಡ್ರಂತೆ ಈ ಕೋಚ್!

Sports: ರನ್ನಿಂಗ್ ಮಾಡಿ, ಪೌಷ್ಟಿಕ ಆಹಾರ ಸೇವಿಸಿ 58 ಕೆಜಿ ತೂಕ ಇಳಿಸಿಕೊಂಡ್ರಂತೆ ಈ ಕೋಚ್!

ಶ್ರೇಯಸ್ ಕಾರ್ನಾಡ್

ಶ್ರೇಯಸ್ ಕಾರ್ನಾಡ್

ಹೆಚ್ಚಿನ ಜನರಿಗೆ ತೂಕವನ್ನು ಇಳಿಸಿಕೊಳ್ಳುವುದೇ ಒಂದು ದೊಟ್ಟ ಕೆಲಸವಾಗಿದೆ. ಅನೇಕರು ಹಲವಾರು ರೀತಿಯ ಪ್rರಯೋಗಗಳನ್ನು ಮಾಡುವುದರ ಮೂಲಕ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಇಲ್ಲಿಯೂ ಸಹ ಅಂತಹದೇ ಒಂದು ಸ್ಟೋರಿ 2012 ರಲ್ಲಿ ನಡೆದಿದೆ ನೋಡಿ. ಶ್ರೇಯಸ್ ಕಾರ್ನಾಡ್ ಎಂಬುವವರು ಮೊದಲಿಗೆ 120 ಕೆಜಿ ತೂಕ ಇದ್ದು, ಮೂರು ವರ್ಷಗಳ ಬಳಿಕ ಅವರ ತೂಕ ಬರೀ 62 ಕೆಜಿ ಇಳಿಕೆಯಾಗಿತ್ತಂತೆ.

ಮುಂದೆ ಓದಿ ...
 • Share this:

  ಈಗಂತೂ ದೇಹದಲ್ಲಿನ ಅತಿಯಾದ ತೂಕವು (Weight) ಅನೇಕರನ್ನು ಚಿಂತೆಗೀಡು ಮಾಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅನೇಕರು ಅನೇಕ ರೀತಿಯ ಕಠಿಣವಾದ ತಾಲೀಮುಗಳನ್ನು ಮಾಡುವುದರ ಮೂಲಕ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಇಂತಹ ಅನೇಕ ಸ್ಪೂರ್ತಿದಾಯಕ ಕಥೆಗಳನ್ನು (Inspirational Story) ನಾವು ನೋಡಿರುತ್ತೇವೆ ಮತ್ತು ಕೇಳಿಯೂ ಇರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ಸ್ಟೋರಿ 2012 ರಲ್ಲಿ ನಡೆದಿದೆ ನೋಡಿ. ಶ್ರೇಯಸ್ ಕಾರ್ನಾಡ್ (Shreyas Karnad) ಎಂಬುವವರು ಮೊದಲಿಗೆ 120 ಕೆಜಿ ತೂಕ ಇದ್ದು, ಮೂರು ವರ್ಷಗಳ ಬಳಿಕ ಅವರ ತೂಕ ಬರೀ 62 ಕೆಜಿ ಇಳಿಕೆಯಾಗಿತ್ತಂತೆ.


  ಈ ಅಗಾಧವಾದ ತೂಕದ ರೂಪಾಂತರದಿಂದ ಪ್ರಭಾವಿತರಾಗಿ ತಮ್ಮ ಕೆಲಸವನ್ನು ತೊರೆದು ಫಿಟ್ನೆಸ್ ಕೋಚ್ ಆಗಿ ಪ್ರಯಾಣ ಶುರು ಮಾಡಿದ್ರಂತೆ ನೋಡಿ.


  ತೂಕ ಇಳಿಸಿಕೊಳ್ಳುವುದಕ್ಕೆ ಶ್ರೇಯಸ್ ಮಾಡಿದ ಕಸರತ್ತೇನು?


  “ಪ್ರತಿದಿನ ಬೆಳಿಗ್ಗೆ ಓಡುವುದು ತೂಕ ನಿರ್ವಹಣೆಗೆ ಹೆಚ್ಚಿನ ಕೊಡುಗೆ ನೀಡಿದೆ ಮತ್ತು ಇದರಲ್ಲಿ ಅವರು ಸಾಂತ್ವನ ಕಂಡುಕೊಂಡರು” ಅಂತ ಶ್ರೇಯಸ್ ಅವರು ಹೇಳುತ್ತಾರೆ.


  "ನಾನು ಬೆಳಿಗ್ಗೆ ಎದ್ದು ಓಡುವುದನ್ನು ತುಂಬಾನೇ ಇಷ್ಟ ಪಡುತ್ತಿದ್ದೆ ಮತ್ತು ಅದನ್ನು ನನ್ನ ವೃತ್ತಿಯನ್ನಾಗಿ ಪರಿವರ್ತಿಸಿದರೆ ಹೇಗಿರುತ್ತದೆ ಅಂತ ನಾನು ಆಗಾಗ್ಗೆ ಯೋಚಿಸುತ್ತಿದ್ದೆ" ಎಂದು ಅವರು ದಿ ಬೆಟರ್ ಇಂಡಿಯಾ ಜೊತೆಗಿನ ಸಂಭಾಷಣೆಯಲ್ಲಿ ನೆನಪಿಸಿಕೊಳ್ಳುತ್ತಾರೆ.


  ಇದನ್ನೂ ಓದಿ: ಭಾರತ-ಶ್ರೀಲಂಕಾ ಪಂದ್ಯಕ್ಕೆ ರಜೆ ಘೋಷಣೆ, ಸರ್ಕಾರದ ಮಹತ್ವದ ನಿರ್ಧಾರ!


  ಇಂದು, ಹತ್ತು ವರ್ಷಗಳ ನಂತರ, ಬೆಂಗಳೂರು ಮೂಲದ ಶ್ರೇಯಸ್ ಈ ಕನಸನ್ನು ನನಸು ಮಾಡುತ್ತಿದ್ದಾರೆ.


  ಎಲ್ಲಾ ವಯೋಮಾನದ ಜನರಿಗೆ ಫಿಟ್ನೆಸ್ ತರಬೇತಿ ನೀಡುತ್ತಿರುವ ಶ್ರೇಯಸ್


  'ರನ್ನರ್ಸ್ 360' ಮೂಲಕ ಶ್ರೇಯಸ್ ಎಲ್ಲಾ ವಯೋಮಾನದ ಮತ್ತು ಹಿನ್ನೆಲೆಯ ಜನರಿಗೆ ಓಟ ಮತ್ತು ಫಿಟ್ನೆಸ್ ನಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಇವತ್ತು ಅವರು ಜಗತ್ತಿಗೆ ತಮ್ಮ ದೊಡ್ಡ ಕೊಡುಗೆಯನ್ನು ನೀಡುತ್ತಿದ್ದಾರೆ ಅಂತ ಹೇಳಬಹುದು. ಶ್ರೇಯಸ್ ನೆನಪಿಸಿಕೊಳ್ಳುವಂತೆ, ಅವರು ಓಡುವುದನ್ನು ಪ್ರಾರಂಭಿಸಿದಾಗ ಆ ಸಮಯದಲ್ಲಿ, ಅವರು ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಆಗಾಗ್ಗೆ ಕೆಲವು ಕೋಚಿಂಗ್ ತರಗತಿಗಳಿಗೆ ಭೇಟಿ ನೀಡುತ್ತಿದ್ದರು ಎಂದು ಹೇಳಿದರು.


  ಶ್ರೇಯಸ್ ಕಾರ್ನಾಡ್


  "ಈ ತರಬೇತಿಯ ಒಳ್ಳೆಯ ವಿಷಯವೆಂದರೆ ಜನರ ವಯಸ್ಸು ಮತ್ತು ಹಿನ್ನೆಲೆಯನ್ನು ಲೆಕ್ಕಿಸದೆ, ಎಲ್ಲರೂ ಒಟ್ಟಿಗೆ ಓಡಿದರು. ಯಾವುದೇ ಅಡೆತಡೆಗಳು ಇರಲಿಲ್ಲ, ಜನರು ಸುಮ್ಮನೆ ಓಡುತ್ತಿದ್ದರು. ಆ ಸಮಯದಲ್ಲಿ ಅದು ನನಗೆ ತುಂಬಾನೇ ಇಷ್ಟವಾಯಿತು ಮತ್ತು ಅದು ಜನರನ್ನು ಒಟ್ಟುಗೂಡಿಸಿತು” ಎಂದು ಹೇಳಿದರು. “ನಾನು ಸಹ ಈ ರೀತಿಯ ಏನನ್ನಾದರೂ ಮಾಡಲು ಬಯಸಿದ್ದೆ" ಎಂದು ಅವರು ಹೇಳುತ್ತಾರೆ.


  ಅದೇ ವರ್ಷ, ಶ್ರೇಯಸ್ ಭಾರತಕ್ಕೆ ಮರಳಿದರು ಮತ್ತು ಕಂಟೆಂಟ್ ಕ್ರಿಯೇಷನ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಗ ಅವರು ಬೆಳಿಗ್ಗೆ ಎದ್ದು ಓಡುವುದಕ್ಕೆ ಶುರು ಮಾಡಿದರು.


  ಶ್ರೇಯಸ್ ತರಬೇತಿ ನೀಡುವುದು ಹೇಗೆ ಶುರುವಾಯಿತು ಗೊತ್ತೇ?


  "2015 ರಲ್ಲಿ, ನಾನು ಬೆಂಗಳೂರಿನಿಂದ ಮೈಸೂರಿಗೆ 700 ಕಿಲೋ ಮೀಟರ್ ಸೈಕಲ್ ಟ್ರಿಪ್ ಮಾಡಿದ್ದನ್ನು ನೆನಪಿಸಿಕೊಳ್ಳುತ್ತೇನೆ, ಇದು ಗ್ರಾಮೀಣ ಭಾರತದಲ್ಲಿ ಶಿಕ್ಷಣಕ್ಕಾಗಿ ಹಣವನ್ನು ಸಂಗ್ರಹಿಸಲು ಇಶಾ ವಿದ್ಯಾ ಸ್ಥಾಪಿಸಿದ ಚಟುವಟಿಕೆಯಾಗಿತ್ತು. ಅದೇ ವರ್ಷದ ಕೊನೆಯಲ್ಲಿ, ಇಶಾ ಫೌಂಡೇಶನ್ ಅವರನ್ನು ಕುರಿತು ಕೋಯಂಬತ್ತೂರಿಗೆ ಬಂದು ಸಂಸ್ಥೆಗೆ ಸಂಬಂಧಿಸಿದ ಜನರಿಗೆ ಓಟ ಮತ್ತು ಫಿಟ್ನೆಸ್ ನಲ್ಲಿ ತರಬೇತಿ ನೀಡುವಂತೆ ನನ್ನನ್ನು ಕೇಳಿತು. ನಾನು ಅದಕ್ಕೆ ಒಪ್ಪಿದೆ" ಎಂದು ಶ್ರೇಯಸ್ ಹೇಳುತ್ತಾರೆ.


  ಆದಾಗ್ಯೂ, ಇದರ ನಂತರ, ಅವರು ಬೈಕ್ ಅಪಘಾತಕ್ಕೆ ಒಳಗಾದರು ಮತ್ತು ತಿಂಗಳುಗಳ ಕಾಲ ತಮ್ಮ ಹಾಸಿಗೆಗೆ ಸೀಮಿತವಾಗಿದ್ದರು. ಈ ಸಮಯವನ್ನು ಅವರು ಅತ್ಯಂತ ಕಠಿಣವಾದ ಸಮಯ ಎಂದು ನೆನಪಿಸಿಕೊಳ್ಳುತ್ತಾರೆ. ಅದೇ ಸಮಯದಲ್ಲಿ ಶ್ರೇಯಸ್, ಓಟವು ತನ್ನನ್ನು ಎಷ್ಟು ಸಂತೋಷವಾಗಿಸಿತು ಎಂದು ಯೋಚಿಸಿದರು ಮತ್ತು ಅವರು ಗುಣವಾದಾಗ ಮತ್ತೆ ಇಶಾ ಫೌಂಡೇಶನ್ ಜೊತೆಗೆ 2016 ರಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾಗ ಸೇರಿಕೊಂಡರು.


  "ಇಲ್ಲಿ ನಾನು ಜನರಿಗೆ ಓಡಲು ವೃತ್ತಿಪರವಾಗಿ ತರಬೇತಿ ನೀಡಲು ಪ್ರಾರಂಭಿಸಿದೆ, ಹೇಗೆ ವಾರ್ಮ್ ಅಪ್ ಮಾಡಬೇಕು, ಅವರು ಎಷ್ಟು ಓಡಬೇಕು ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದೆ" ಎಂದು ಅವರು ಹೇಳುತ್ತಾರೆ. ಅವರು ಮುಂದೆ ಕಾರವಾರದಲ್ಲಿನ ಕಡಲತೀರದಲ್ಲಿ ಓಡಲು 2,000 ಜನರನ್ನು ಹೊಂದಿಸಿದರು ಎಂದು ಅವರು ಹೇಳುತ್ತಾರೆ. ಇದರ ನಂತರ ಅವರು ತಮ್ಮ ಕೆಲಸವನ್ನು ತೊರೆಯಲು ನಿರ್ಧರಿಸಿದರಂತೆ.


  ತರಬೇತಿ ನೀಡಲು ಶುರು ಮಾಡಿದ ಶ್ರೇಯಸ್ ಹಿಂತಿರುಗಿ ನೋಡಲಿಲ್ಲ.


  "ನಾನು ತರಬೇತಿ ನೀಡಲು ಮತ್ತು ಭಾರತದಾದ್ಯಂತ ಪ್ರಯಾಣಿಸಲು ಪ್ರಾರಂಭಿಸಿದೆ, ಈ ಕಾರ್ಯಾಗಾರಗಳ ಮೂಲಕ ಸಮುದಾಯ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಮತ್ತು ನಡೆಸಲು ಕಾರ್ಯಾಗಾರಗಳನ್ನು ಮಾಡಲು ಪ್ರಾರಂಭಿಸಿದೆ. ಇದು ಒಂದು ಸುಂದರವಾದ ಭಾವನೆ" ಎಂದು ಅವರು ಹೇಳುತ್ತಾರೆ.


  ಶ್ರೇಯಸ್ ಕಾರ್ನಾಡ್


  "ಜನರ ಪ್ರಯಾಣ ಮತ್ತು ಅವರ ಬದ್ಧತೆ ಮತ್ತು ಸಮರ್ಪಣೆಯನ್ನು ನೋಡುವುದು ಅದ್ಭುತವಾಗಿದೆ. ನನ್ನ ತರಬೇತಿಯ ಮೂಲಕ, ನಾವು ಆಗಾಗ್ಗೆ ಜನರ ಬಗ್ಗೆ ಪೂರ್ವಗ್ರಹಪೀಡಿತ ಕಲ್ಪನೆಗಳನ್ನು ಹೊಂದಿದ್ದೇವೆ ಎಂದು ನಾನು ಅರಿತುಕೊಂಡಿದ್ದೇನೆ. ನೀವು ಓಡಲು ಬೇಕಾಗಿರುವುದು ಮನಸ್ಥಿತಿಯೇ ಹೊರತು ವಯಸ್ಸಲ್ಲ” ಅಂತ ಹೇಳಿದರು.


  ರನ್ನರ್ಸ್ 360 ಮೂಲಕ ಅವರು ಐಎಎಸ್ ಅಧಿಕಾರಿಗಳು, ಸಿಎಫ್ಒಗಳು ಮತ್ತು ಸಾಧಾರಣ ಹಿನ್ನೆಲೆಯಿಂದ ಬಂದ ಜನರಿಗೂ ಸಹ ತರಬೇತಿ ನೀಡುತ್ತಾರೆ ಎಂದು ಶ್ರೇಯಸ್ ವಿವರಿಸುತ್ತಾರೆ.


  "ಕಳೆದ ಏಳು ವರ್ಷಗಳಲ್ಲಿ, ನಾವು 1,000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದೇವೆ. ಜನರು ಉತ್ತಮವಾಗಿ ಓಡಲು ನಾವು ಸಹಾಯ ಮಾಡಲು ಬಯಸುತ್ತೇವೆ.


  ಅವರು ತಮ್ಮ ತಂತ್ರವನ್ನು ಪರಿಷ್ಕರಿಸಬೇಕು ಮತ್ತು ಸರಿಯಾದ ಮನಸ್ಥಿತಿಯಿಂದ ಅವರನ್ನು ಸಶಕ್ತಗೊಳಿಸಬೇಕು ಎಂದು ನಾವು ಬಯಸುತ್ತೇವೆ" ಎಂದು ಅವರು ಹೇಳುತ್ತಾರೆ.


  36ರ ಹರೆಯದ ಈ ತರಬೇತುದಾರ ತನ್ನ ಪಯಣವನ್ನು ಹಿಂತಿರುಗಿ ನೋಡಿದಾಗ, ಅದು ತುಂಬಾನೇ ಬದಲಾವಣೆ ಮತ್ತು ಸಕಾರಾತ್ಮಕತೆಯಿಂದ ತುಂಬಿದೆ ಎಂದು ಅವರು ಹೇಳುತ್ತಾರೆ.

  Published by:Prajwal B
  First published: