• Home
  • »
  • News
  • »
  • sports
  • »
  • T20 World Cup 2022: ನನ್ನ ಮನೆಗೆ ಈಗ ಯಾರೂ ಕಲ್ಲು ಎಸೆಯುವುದಿಲ್ಲ, ಟೀಂ ಇಂಡಿಯಾ ಆಟಗಾರನ ಶಾಕಿಂಗ್​ ಹೇಳಿಕೆ!

T20 World Cup 2022: ನನ್ನ ಮನೆಗೆ ಈಗ ಯಾರೂ ಕಲ್ಲು ಎಸೆಯುವುದಿಲ್ಲ, ಟೀಂ ಇಂಡಿಯಾ ಆಟಗಾರನ ಶಾಕಿಂಗ್​ ಹೇಳಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಪಾಕ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಕೊನೆಯ ವಿನ್ನಿಂಗ್​ ಶಾಟ್​ ಹೊಡೆದರು. ಆಗ 140 ಕೋಟಿ ಭಾರತೀಯರ ನಿರೀಕ್ಷೆ ಅವರ ಮೇಲಿತ್ತು. ಈ ಎಲ್ಲಾ ಕ್ಷಣಗಳ ರೋಚಕತೆಯನ್ನು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

  • Share this:

ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನವನ್ನು (IND vs PAK) ಸೋಲಿಸಿ ಟಿ20 ವಿಶ್ವಕಪ ನಲ್ಲಿ ಭರ್ಜರಿ ಆರಂಭ ಮಾಡಿದೆ. ಆದರೆ ಭಾರತ ತಂಡ ಈ ಪಂದ್ಯದ ಬಳಿಕ ಲೆಜೆಂಡರಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ವಿಚಿತ್ರ ಹೇಳಿಕೆ ನೀಡಿದ್ದಾರೆ. ಅಶ್ವಿನ್ ಕೊನೆಯ ಎಸೆತವನ್ನು ಆಡಲು ಕ್ರೀಸ್​ಗೆ ಬಂದಿದ್ದರು. ಆಗ ಭಾರತಕ್ಕೆ ಗೆಲುವಿಗೆ 1 ಎಸೆತದಲ್ಲಿ 2 ರನ್ ಬೇಕಿತ್ತು. ಆದರೆ ಅದೇ ಸಮಯದಲ್ಲಿ ಪಾಕಿಸ್ತಾನದ ಮೊಹಮ್ಮದ್ ನವಾಜ್ (Mohammad Nawazವೈಡ್ ಬಾಲ್ ಎಸೆದರು. ಆ ವೈಡ್ ಬಾಲ್ ನಂತರ, ಆ ಒಂದು ಎಸೆತದಿಂದ ಟೈ ಮಾಡಿದ್ದರಿಂದ ಅಶ್ವಿನ್ ದೇವರಿಗೆ ಧನ್ಯವಾದ ಹೇಳಿದ್ದಾರೆ.


ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ವಿಚತ್ರ ಹೇಳಿಕೆ:


ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಎರಡೂ ದೇಶಗಳ ಆಟಗಾರರಿಗೆ ತುಂಬಾ ಒತ್ತಡದ ಪಂದ್ಯ ಎಂದರೂ ತಪ್ಪಾಗಲಾರದು. ಆ ಸಮಯದಲ್ಲಿ ಮೆಲ್ಬೋರ್ನ್ ಮೈದಾನದಲ್ಲಿಯೇ ಸುಮಾರು ತೊಂಬತ್ತು ಸಾವಿರ ಪ್ರೇಕ್ಷಕರಿದ್ದರು. ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಪಂದ್ಯವನ್ನು ನೇರಪ್ರಸಾರ ವೀಕ್ಷಿಸುತ್ತಿದ್ದರು. 1 ಎಸೆತ 2 ರನ್‌ಗಳ ಬಿಗುವಿನ ಪರಿಸ್ಥಿತಿಯಲ್ಲಿ ಅಶ್ವಿನ್ ಮೈದಾನದಲ್ಲಿದ್ದರು. ಆಗ 140 ಕೋಟಿ ಭಾರತೀಯರ ನಿರೀಕ್ಷೆ ಅವರ ಮೇಲಿತ್ತು. ಈ ಎಲ್ಲಾ ಕ್ಷಣಗಳ ರೋಚಕತೆಯನ್ನು ಅಶ್ವಿನ್ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, 'ವೈಡ್ ಬಾಲ್ ನಂತರ, ನನ್ನ ಮನೆಗೆ ಯಾರೂ ಕಲ್ಲು ಎಸೆಯುವುದಿಲ್ಲ ಎಂದು ನಾನೇ ಹೇಳಿದ್ದೆ. ಅವರು ಮೊದಲ ಎಸೆತವನ್ನು ಲೆಗ್ ಸೈಡ್‌ಗೆ ಬೌಲ್ಡ್ ಮಾಡಿದರು. ನನಗೆ ಒಳ್ಳೆಯದಾಯಿತು. ನಾನೇ ಹೇಳಿಕೊಂಡೆ, ಧನ್ಯವಾದಗಳು. ಅದು ವೈಡ್ ಬಾಲ್ ಆಗಿತ್ತು. ನಾನು ಅದನ್ನು ಆಡಿಲ್ಲ. ಚೆಂಡು ವಿಕೆಟ್‌ ಕೀಪರ್‌ಗೆ ಹೋಗಿ ಬಿಡುವುದನ್ನು ನಾನು ನೋಡಿದೆ. ಆಗ ನನ್ನ ಮನೆಗೆ ಯಾರೂ ಕಲ್ಲು ಎಸೆಯುವುದಿಲ್ಲ ಎಂದು ನಾನೇ ಹೇಳಿಕೊಂಡೆ.' ಅಶ್ವಿನ್ ಮುಂದಿನ ಎಸೆತವನ್ನು ಲಾಂಗ್ ಆಫ್ ಕಡೆಗೆ ಹೊಡೆದರು ಮತ್ತು ಭಾರತವು ಪಾಕಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಮೆಲ್ಬೋರ್ನ್‌ನಲ್ಲಿ ಟೀಂ ಇಂಡಿಯಾ ತ್ರಿವರ್ಣ ಧ್ವಜ ಹಾರಿಸಿತು.


ಇದನ್ನೂ ಓದಿ: T20 WC 2022 IND vs PAK: ಟಿ20 ವಿಶ್ವಕಪ್​ನಲ್ಲಿ ಮತ್ತೆ ಭಾರತ-ಪಾಕ್​ ಪಂದ್ಯ, ಯಾವಾಗ?


ಅಶ್ವಿನ್ ಪ್ರದರ್ಶನ ಅಸಾಧಾರಣ; ಕೊಹ್ಲಿ ಗುಣಗಾನ


ಪಂದ್ಯದ ನಂತರ ಕೊಹ್ಲಿ ಅಶ್ವಿನ್ ಕೆಚ್ಚೆದೆಯ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅಶ್ವಿನ್ ಪಂದ್ಯದಲ್ಲಿ ಮೆರೆದ ಅಸಾಧಾರಣ ಬುದ್ಧಿವಂತಿಕೆಗೆ ಬೆರಗಾಗಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ನಿಮಗೆ 15 ಅಥವಾ 16 ರನ್ ರೇಟ್ ಬೇಕಾದಾಗ ಎರಡು ಬಾಲ್‌ಗಳಲ್ಲಿ ಎರಡು ರನ್ ದೊರೆಯುತ್ತದೆ ಹಾಗಿದ್ದಾಗ ಜನರು ಪಂದ್ಯ ಮುಕ್ತಾಯಗೊಂಡಿತು ಇನ್ನೇನು ಮಾಡುವ ಅಗತ್ಯವಿಲ್ಲ ಎಂದೇ ಭಾವಿಸುತ್ತಾರೆ.ಇದೇ ಸಮಯದಲ್ಲಿ ದಿನೇಶ್ ಕಾರ್ತಿಕ್ ಔಟಾದರು. ಆಗ ನಾನು ಅಶ್ವಿನ್‌ಗೆ ಓವರ್ ನೀಡಲು ಹೇಳಿದ್ದೆ ಆದರೆ ಅವರು ಹೆಚ್ಚಿನ ಬುದ್ಧಿವಂತಿಕೆಯನ್ನು ತೋರಿಸಿದರು. ಲೈನ್‌ನ ಒಳಗೆ ಬಂದು ವೈಡ್ ಬಾಲ್‌ ನೀಡಿದರು. ಇದೇ ಅಂತರದಲ್ಲಿ ಬಾಲ್ ಅನ್ನು ಪಡೆದಾಗ ನಾವು ಪಂದ್ಯವನ್ನು ಗೆಲ್ಲುತ್ತೇವೆ ಎಂಬುದು ಶತಸಿದ್ಧವಾಗಿತ್ತು ಎಂದು ವಿರಾಟ್ ತಿಳಿಸಿದರು.

Published by:shrikrishna bhat
First published: