• Home
  • »
  • News
  • »
  • sports
  • »
  • IPL 2023: ಐಪಿಎಲ್ 2023ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ನ ಈ ಆಟಗಾರರಿಗೆ ಫುಲ್ ಡಿಮ್ಯಾಂಡ್

IPL 2023: ಐಪಿಎಲ್ 2023ರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ನ ಈ ಆಟಗಾರರಿಗೆ ಫುಲ್ ಡಿಮ್ಯಾಂಡ್

IPL 2023

IPL 2023

IPL 2023: ಐಪಿಎಲ್ 2023ರ ಹರಾಜಿಗೆ ಮುಂಚಿತವಾಗಿ ಮುಂಬೈ ಫ್ರಾಂಚೈಸಿ ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕಳೆದ ಆವೃತ್ತಿಯ ಐಪಿಎಲ್ ನಲ್ಲಿದ್ದಂತಹ 13 ಆಟಗಾರರನ್ನು ಕೈಬಿಟ್ಟಿದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ತಂಡವಾಗಿದ್ದು, ಐದು ಬಾರಿ ಐಪಿಎಲ್ ಟೂರ್ನಿಯನ್ನು ಗೆದ್ದುಕೊಂಡಿದೆ. ಆದಾಗ್ಯೂ, 15ನೇ ಆವೃತ್ತಿಯ IPL ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿಸುವಲ್ಲಿ ವಿಫಲವಾಗಿತ್ತು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (MI) ತಂಡವು ತಮ್ಮ ಗೆಲುವಿನ ಮಂತ್ರವನ್ನು ಮತ್ತೊಮ್ಮೆ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗಿದ್ದರು. ಇದರ ಪರಿಣಾಮವಾಗಿ, ಅವರು ಸ್ಪರ್ಧೆಯಲ್ಲಿ ಆಡಿದಂತಹ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರವೇ ಗೆದ್ದಿದ್ದರು.


ಈಗ ಮತ್ತೊಮ್ಮೆ ಐಪಿಎಲ್ ಸಿದ್ಧತೆಗಳೂ ಆರಂಭವಾಗಿದೆ. ಐಪಿಎಲ್ 2023ರ ಹರಾಜಿಗೆ ಮುಂಚಿತವಾಗಿ ಮುಂಬೈ ಫ್ರಾಂಚೈಸಿ ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕಳೆದ ಆವೃತ್ತಿಯ ಐಪಿಎಲ್ ನಲ್ಲಿದ್ದಂತಹ 13 ಆಟಗಾರರನ್ನು ಕೈಬಿಟ್ಟಿದೆ. ಮುಂಬೈ ಇಂಡಿಯನ್ಸ್ ತಂಡವು ಬಿಡುಗಡೆ ಮಾಡಿದ ಆಟಗಾರರಲ್ಲಿ, ಕೆಲವು ಆಟಗಾರರು ಟಿ20 ಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿರುವವರಾಗಿದ್ದು, ಮುಂಬರುವ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಪಡೆಯುವ ಹೆಚ್ಚಿನ ಅವಕಾಶವನ್ನು ಹೊಂದಿದ್ದಾರೆ.


ಹರಾಜಿನಲ್ಲಿ ಈ ಆಟಗಾರರಿಗೆ‌ ಫುಲ್ ಡಿಮ್ಯಾಂಡ್:


1. ಜಯದೇವ್ ಉನಾದ್ಕಟ್: ಜಯದೇವ್ ಉನಾದ್ಕಟ್ 2010ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಅವರು ಟಿ20 ಪಂದ್ಯಾವಳಿಯಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2017ರ ಋತುವಿನಲ್ಲಿ ಎಡಗೈ ವೇಗಿ 7.02ರ ಎಕಾನಮಿಯಲ್ಲಿ 12 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದರು. ಮುಂಬೈ ಇಂಡಿಯನ್ಸ್ ತನ್ನ ಬೌಲಿಂಗ್ ಲೈನ್ಅಪ್ ಅನ್ನು ಬಲಪಡಿಸಲು ವೇಗಿಯನ್ನು ಸೇರಿಸಿಕೊಂಡಿತು. ಆದಾಗ್ಯೂ, ಉನಾದ್ಕಟ್ ಅವರು ತಮ್ಮ ಪ್ರದರ್ಶನಗಳಿಂದ ತಂಡಕ್ಕೆ ಬಲ ನೀಡುವಲ್ಲಿ ವಿಫಲರಾದರು. ಹೀಗಾಗಿ ಮುಂದಿನ ಐಪಿಎಲ್ ನಲ್ಲಿ ಭಾರತೀಯ ವೇಗಿಯನ್ನು ಉಳಿಸಿಕೊಳ್ಳದಿರಲು ಮುಂಬೈ ತಂಡವು ನಿರ್ಧರಿಸಿದೆ ಮತ್ತು ಹೀಗಾಗಿ, ಅವರು 2023ರ ಆಟಗಾರರ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.


ಉನಾದ್ಕಟ್ ಅನುಭವಿ ಆಟಗಾರರಾಗಿದ್ದು ಮತ್ತು ಐಪಿಎಲ್ ನಲ್ಲಿ ಆಡಿದ ಪಂದ್ಯಗಳಲ್ಲಿ ಒಟ್ಟು 91 ವಿಕೆಟ್ ಗಳನ್ನು ಪಡೆದಿದ್ದಾರೆ. ಅಲ್ಲದೆ 31 ವರ್ಷದ ಜಯದೇವ್ ಅವರು ಎಡಗೈ ವೇಗಿಯಾಗಿದ್ದು, ತಂಡದ ಸೀಮ್ ದಾಳಿಗೆ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅನೇಕ ಫ್ರಾಂಚೈಸಿಗಳು ಮುಂಬರುವ ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡಲು ತುದಿಗಾಲಲ್ಲಿ ನಿಂತಿರಬಹುದು.


ಇದನ್ನೂ ಓದಿ: FIFA World Cup 2022: ಎಣ್ಣೆ ಹೊಡೆಯೊಲ್ಲ-ಸಿಗರೇಟ್​ ಸೇದಲ್ಲ, ಮದ್ವೆ ಆಗ್ದೇ 5 ಮಕ್ಕಳ ಅಪ್ಪ! ಇದು ಸಾವಿರ ಕೋಟಿ ಒಡೆಯನ ಕಲರ್‌ಫುಲ್ ಲೈಫ್​ಸ್ಟೈಲ್


2. ರಿಲೆ ಮೆರೆಡಿತ್: ಆಸ್ಟ್ರೇಲಿಯಾದ ಕ್ರಿಕೆಟ್ ನಲ್ಲಿ ತುಂಬಾನೇ ನಿರೀಕ್ಷೆ ಹುಟ್ಟಿಸಿದ ಆಟಗಾರ ರಿಲೆ ಮೆರೆಡಿತ್ ಅಂತ ಹೇಳಬಹುದು. ಅವರು ನಿರಂತರವಾಗಿ ಗಂಟೆಗೆ 145 ಕಿಲೋ ಮೀಟರ್ ಗಿಂತ ಹೆಚ್ಚಿನ ವೇಗವನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. 26ರ ಹರೆಯದ ಅವರು ಚುಟುಕು ಕ್ರಿಕೆಟ್ ನಲ್ಲಿ 63 ಪಂದ್ಯಗಳನ್ನಾಡಿದ್ದು, 8.39ರ ಎಕಾನಮಿಯಲ್ಲಿ 79 ವಿಕೆಟ್ ಗಳನ್ನು ಕಬಳಿಸಿದ್ದಾರೆ.


ಮುಂಬೈ ಇಂಡಿಯನ್ಸ್ ಪರ 2022ರಲ್ಲಿ ಐಪಿಎಲ್ ನಲ್ಲಿ ಆಡಿದ್ದು, ಎಂಟು ಪಂದ್ಯಗಳನ್ನು ಆಡಿದರು ಮತ್ತು 8.43 ಎಕಾನಮಿಯಲ್ಲಿ ಬೌಲ್ ಮಾಡಿ ಅನೇಕ ವಿಕೆಟ್ ಗಳನ್ನು ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಆದಾಗ್ಯೂ, ಆಸ್ಟ್ರೇಲಿಯಾದ ವೇಗದ ಬೌಲರ್ ಮುಂಬರುವ ಆವೃತ್ತಿಗೆ ಮುಂಚಿತವಾಗಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಅವರನ್ನು ಬಿಡುಗಡೆ ಮಾಡಿದ್ದರಿಂದ ಮುಂಬೈನ ತಂಡದ ಭಾಗವಾಗಿರುವುದಿಲ್ಲ. ಐಪಿಎಲ್ 2023 ರ ಹರಾಜಿನಲ್ಲಿ ಈ ವೇಗಿಗೆ ಭೇಡಿಕೆ ಹೆಚ್ಚಲಿದೆ.


3. ಡೇನಿಯಲ್ ಸ್ಯಾಮ್ಸ್: ಟಿ20 ಕ್ರಿಕೆಟ್ ನಲ್ಲಿ ತುಂಬಾನೇ ಸ್ಥಿರವಾದ ಪ್ರದರ್ಶನ ನೀಡಿದವರಲ್ಲಿ ಡೇನಿಯಲ್ ಸ್ಯಾಮ್ಸ್ ಸಹ ಒಬ್ಬರು ಅಂತ ಹೇಳಬಹುದು. 30 ವರ್ಷದ ಅವರು ಟಿ20 ಕ್ರಿಕೆಟ್ ನಲ್ಲಿ 109 ಪಂದ್ಯಗಳಲ್ಲಿ ಆಡಿ 8.74 ಎಕಾನಮಿಯಲ್ಲಿ 124 ವಿಕೆಟ್ ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅವರು 153.91 ಸ್ಟ್ರೈಕ್ ರೇಟ್ ನಲ್ಲಿ 1042 ರನ್ ಸಹ ಗಳಿಸಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಎಡಗೈ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಸ್ಯಾಮ್ಸ್ 11 ಪಂದ್ಯಗಳಲ್ಲಿ 8.81 ಎಕಾನಮಿಯಲ್ಲಿ 13 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.


ಆದಾಗ್ಯೂ, ಅವರು ಬ್ಯಾಟ್ ನೊಂದಿಗೆ ಅಷ್ಟೊಂದು ಉತ್ತಮ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್ ವಿಷಯಕ್ಕೆ ಬಂದರೆ 105.56 ಸ್ಟ್ರೈಕ್ ರೇಟ್ ನಲ್ಲಿ ಕೇವಲ 38 ರನ್ ಗಳನ್ನು ಗಳಿಸಿದ್ದರು. ಮುಂಬೈ ತಂಡವು ಮುಂಬರುವ ಐಪಿಎಲ್ 2023 ಹರಾಜಿಗೆ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡಿತು. ಸ್ಯಾಮ್ಸ್ ಆಟದ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಅಲ್ಲದೆ ಒಳ್ಳೆಯ ಬ್ಯಾಟ್ಸ್ಮನ್ ಸಹ ಆಗಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು