RCB: ಈ ಮೂರು ಕಾರಣಗಳು ಆರ್​ಸಿಬಿಗೆ ಮಾರಕವಾಗಲಿದ್ಯಂತೆ! ಸರಿಪಡಿಸಿಕೊಳ್ಳದಿದ್ರೆ ಈ ಬಾರಿಯ ಪ್ಲೇ ಆಫ್​ ಕನಸು ಭಗ್ನ?

ಆರ್​ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್​(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕನೊಂದಿಗೆ ಆರ್​ಸಿಬಿ ಕಣಕ್ಕಿಳಿಯಲಿದೆ. ಈ ಬಾರಿ ತಂಡ ಚೆನ್ನಾಗಿ ಆಡಬೇಕೆಂದರೆ, ಈ ಮೂರು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಆಡಬೇಕು.

ಫಾಫ್​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ

ಫಾಫ್​ ಡು ಪ್ಲೆಸಿಸ್​, ವಿರಾಟ್​ ಕೊಹ್ಲಿ

  • Share this:
ಆರ್​ಸಿಬಿ.. ಆರ್​ಸಿಬಿ.. ಆರ್​​ಸಿಬಿ(RCB).. ಕಳೆದ 14 ವರ್ಷಗಳಿಂದ ಬೆಂಗಳೂರಿಗರ ಹೃದಯ(Heart) ಬಡಿತಕ್ಕಿಂತ ಆರ್​ಸಿಬಿ ಅನ್ನುವುದೇ ಬಡಿದುಕೊಳ್ಳುತ್ತಿದೆ. ಬೆಂಗಳೂರಿಗರು ಅಷ್ಟು ಸುಲಭವಾಗಿ ಯಾರನ್ನು ನಂಬುವುದಿಲ್ಲ. ಒಮ್ಮೆ ನಂಬಿದರೆ ಪ್ರಾಣ ಹೋದರೂ ಅವರನ್ನು ಬಿಡುವುದಿಲ್ಲ. ಬೆಂಗಳೂರಿ(Bengaluru)ಗರಿಗೆ ಇರುವ ನಿಯತ್ತು ಯಾರಿಗೂ ಇಲ್ಲ ಎಂದು ಹೇಳಬಹುದು. ಕಳೆದ 14 ವರ್ಷದಿಂದ ಆರ್​ಸಿಬಿ ತಂಡ ಕಪ್(Cup)​ ಗೆಲ್ಲದಿದ್ದರು, ನಾವು ಅವರ ಕೈ ಮಾತ್ರ ಬಿಟ್ಟಿಲ್ಲ. ಇಂದಲ್ಲ, ನಾಳೆ ಅಥವಾ ಮುಂದೊಂದು ದಿನ ಅವರು ಗೆದ್ದೆ ಗೆಲ್ಲುತ್ತಾರೆ ಅನ್ನುವ ವಿಶ್ವಾಸದಲ್ಲಿ ಇದ್ದೇವೆ. ಆರ್​ಸಿಬಿ ಅನ್ನುವುದು ಕೇವಲ ತಂಡವಲ್ಲ. ಬೆಂಗಳೂರಿಗರ ಎಮೋಷನ್​(Emotion) ಅದು. ಈ ಬಾರಿ ಹೊಸ ಹುರುಪು, ಹೊಸ ನಾಯಕನೊಂದಿಗೆ ಆರ್​ಸಿಬಿ ಕಣಕ್ಕಿಳಿಯಲಿದೆ. ಈ ಬಾರಿ ತಂಡ ಚೆನ್ನಾಗಿ ಆಡಬೇಕೆಂದರೆ, ಈ ಮೂರು ಅಂಶಗಳನ್ನು ತಲೆಯಲ್ಲಿ ಇಟ್ಟುಕೊಂಡು ಆಡಬೇಕು. ಈ ಮೂರು ಕಾರಣಗಳಿಂದ ಈ ಬಾರಿ ಪ್ಲೇ ಆಫ್(Play Off)​ ಸೇರುವುದರಿಂದ ಆರ್​ಸಿಬಿ ವಂಚಿತರಾಗಬಹುದು..

ಡು ಪ್ಲೆಸಿಸ್​ ನಾಯಕತ್ವದಲ್ಲಿ ಕಣಕ್ಕೆ!

ಆರ್​ಸಿಬಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ತನ್ನ ಪಯಣವನ್ನು ಮಾರ್ಚ್ 27ರಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕ ಆರಂಭಿಸಲಿದ್ದು, ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹೌದು, ಕಳೆದ ಬಾರಿಯ ಐಪಿಎಲ್ ಆವೃತ್ತಿಯ ಮಧ್ಯದಲ್ಲಿಯೇ ಟೂರ್ನಿ ಮುಗಿದ ನಂತರ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಪ್ರಕಟಿಸಿದ್ದರು. ಹೀಗಾಗಿ ಈ ಬಾರಿಯ ಆಟಗಾರರ ಮೆಗಾ ಹರಾಜಿನಲ್ಲಿ ತಾನು ಖರೀದಿಸಿದ ಅನುಭವಿ ಫಾಫ್ ಡು ಪ್ಲೆಸಿಸ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ.

ಇದನ್ನೂ ಓದಿ: ಅತಿ ಹೆಚ್ಚು ಬಾರಿ ಐಪಿಎಲ್​ ನಲ್ಲಿ ಡಕೌಟ್​ ಆದವರು ಯಾರು ಗೊತ್ತಾ?, ಅಗ್ರಸ್ಥಾನದಲ್ಲಿದ್ದಾರೆ ಟೀಂ ಇಂಡಿಯಾದ ಆಟಗಾರ

1. ಆರ್​ಸಿಬಿಯಲ್ಲಿ ಭಾರತೀಯ ಅನುಭವಿ ಆಟಗಾರರ ಕೊರತೆ!

ಒಂದು ವೇಳೆ ಈ ಬಾರಿಯ ಐಪಿಎಲ್​​ನಲ್ಲಿ ಆರ್​ಸಿಬಿಗೆ ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಗಾಯದ ಸಮಸ್ಯೆಗೊಳಗಾದರೆ ಬದಲಿ ಆಟಗಾರರಾಗಿ ಕಣಕ್ಕಿಳಿಯಲು ಬೇಕಾದ ಭಾರತದ ಸ್ಟಾರ್ ಆಟಗಾರರು ತಂಡದಲ್ಲಿಲ್ಲ . ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ ರೀತಿಯ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ ಸಹ ಇವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿ ಮಿಂಚದೇ ಇರುವುದು ಹಾಗೂ ಹೆಚ್ಚು ಅನುಭವವಿಲ್ಲದಿರುವ ಅಂಶ ಸ್ಟಾರ್ ಆಟಗಾರರು ಗಾಯಕ್ಕೊಳಗಾದಾಗ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

2. ಇಬ್ಬರು ವಿದೇಶಿ ಆಟಗಾರರ ಮೇಲೆ ಹೆಚ್ಚಿನ ಹೊರೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿದೇಶಿ ಆಟಗಾರ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸಿದ್ದು ಹಾಗೂ ಮೆಗಾ ಹರಾಜಿನಲ್ಲಿ ಹತ್ತು ಕೋಟಿಗೆ ಖರೀದಿಸಿರುವ ವನಿಂದು ಹಸರಂಗ ಆಡುವ ಬಳಗದ ಖಾಯಂ ಸದಸ್ಯನಾಗುವುದು ಖಚಿತವಾಗಿದೆ. ತಂಡ ಕೇವಲ ಇಬ್ಬರು ವಿದೇಶಿ ಆಟಗಾರರ ಮೇಲೆ ಮಾತ್ರ ಪ್ರಯೋಗಗಳನ್ನು ಮಾಡಬಹುದಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಇಬ್ಬರು ವಿದೇಶಿ ಆಟಗಾರರನ್ನು ಬದಲಿಸಲು ಅವಕಾಶಗಳು ಇರಲಿದ್ದು, ಈ ಅಂಶ ಕೂಡ ತಂಡಕ್ಕೆ ಹಿನ್ನಡೆಯನ್ನುಂಟುಮಾಡಲಿದೆ.

ಇದನ್ನೂ ಓದಿ: ಗೀಟ್ ಎಳೆದಾಯ್ತು-ಗ್ರೌಂಡ್​ಗೆ ಇಳಿದಾಯ್ತು, ಈ ಸಲ ಕಪ್​ ಆರ್​ಸಿಬಿದೆ! ಏನೆಲ್ಲಾ ಸ್ಟ್ಯಾಟರ್ಜಿ ಮಾಡಿಕೊಂಡಿದ್ದಾರೆ ನೋಡಿ..

3. ಮಧ್ಯಮ ಕ್ರಮಾಂಕದಲ್ಲಿಲ್ಲ ಭರವಸೆಯ ಆಟಗಾರರು!

ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಮ್ರಾನ್ ಹೆಟ್ಮಾಯರ್, ಮೊಯಿನ್ ಅಲಿ ಹಾಗೂ ಮಾರ್ಕಸ್ ಸ್ಟಾಯಿನಿಸ್ ರೀತಿಯ ಆಟಗಾರರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತಾದರೂ ನಿರೀಕ್ಷಿಸಿದ್ದ ಯಶಸ್ಸನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ವನಿಂದು ಹಸರಂಗ ಅವರನ್ನು ಫಿನಿಶಿಂಗ್ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಲಿದ್ದು, ದೊಡ್ಡ ಮಟ್ಟದ ಐಪಿಎಲ್ ಅನುಭವವಿಲ್ಲದ ಹಸರಂಗ ಫಿನಿಶರ್ ಆಗಿ ಮಿಂಚುತ್ತಾರಾ ಎಂಬುದು ಅನುಮಾನ ಮೂಡಿಸಿದೆ. ಈ ಬಾರಿ ಮಧ್ಯಮ ಕ್ರಮಾಂಕದಲ್ಲಿ ಎಬಿಡಿ ಆಟ ಇಲ್ಲ. ಹೀಗಾಗಿ ಈ ಮೂರು ಕಾರಣಗಳಿಂದ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸುದರಿಂದ ವಂಚಿತರಾಗಬಹುದು.
Published by:Vasudeva M
First published: