The Undertaker: WWEಗೆ ನಿವೃತ್ತಿ ಘೋಷಿಸಿದ ಡೆಡ್ ಮ್ಯಾನ್ ಅಂಡರ್ ಟೇಕರ್

Undertaker WWE Retirement: ನೇರ ಕುಸ್ತಿಗೆ ಹೆಸರುವಾಸಿಯಾಗಿದ್ದ ಅಂಡರ್ ಟೇಕರ್ ಶೈಲಿಗೆ ಕೋಟ್ಯಂತರ ಕುಸ್ತಿ ರಸಿಕರು ಮಾರು ಹೋಗಿದ್ದರು. 6.10 ಅಡಿ ಇದ್ದ ಈ ಅಜಾನುಬಾಹು ಕುಸ್ತಿ ಅಖಾಡಕ್ಕೆ ಕಾಲಿರಿದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.

news18-kannada
Updated:June 22, 2020, 10:34 AM IST
The Undertaker: WWEಗೆ ನಿವೃತ್ತಿ ಘೋಷಿಸಿದ ಡೆಡ್ ಮ್ಯಾನ್ ಅಂಡರ್ ಟೇಕರ್
ಅಂಡರ್ ಟೇಕರ್
  • Share this:
WWE  ಕುಸ್ತಿ ಪಟುಗಳ ಪೈಕಿ ವಿಶ್ವದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವವರಲ್ಲಿ ಪ್ರಮುಖರಾಗಿರುವ 52 ವರ್ಷದ ಅಂಡರ್ ಟೇಕರ್ ತಮ್ಮ 30 ವರ್ಷದ ಕುಸ್ತಿ ಪಯಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಇವರು, ಅಂಡರ್ ಟೇಕರ್; ದಿ ಲಾಸ್ಟ್​ ರೈಡ್ ಡಾಕ್ಯುಮೆಂಟರಿಯಲ್ಲಿ ತಿಳಿಸಿದ್ದಾರೆ.

ಅಂಡರ್ ಟೇಕರ್ ಅವರ ಮೂಲ ಹೆಸರು ಮಾರ್ಕ್ ವಿಲಿಯಂ ಕ್ಯಾಲವೆ. ಅಮೆರಿಕಾದ ಟೆಕ್ಸಾಸ್​ನ ಹೂಸ್ಟನ್​ನಲ್ಲಿ 1965 ಮಾರ್ಚ್ 24 ರಂದು ಜನಿಸಿದ್ದ ಇವರು ತಮ್ಮ ಪದವಿ ಪೂರ್ಣಗೊಳಿಸಿದ ನಂತರ  ವಿಶ್ವದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಹೆವಿವೈಟ್ ಚಾಂಪಿಯನ್​ಷಿಪ್ ರಂಗಕ್ಕೆ ಪದರ್ಪಣೆ ಮಾಡಿದ್ದರು.

ಸಚಿನ್​ ಕ್ರಿಕೆಟ್​ಗೆ ವಿದಾಯ ಹೇಳಿದಾಗ ಕಣ್ಣೀರು ಸುರಿಸಿದ್ದರು ವೆಸ್ಟ್​ ಇಂಡೀಸ್​ನ ಈ ಸ್ಟಾರ್​​ ಕ್ರಿಕೆಟಿಗ​!

ತಮ್ಮ 33 ವರ್ಷಗಳ ಫೈಟಿಂಗ್ ಪಯಣದಲ್ಲಿ ಹಲವು ಬಾರಿ ಚಾಂಪಿಯನ್ ಆಗಿದ್ದರು. ನೇರ ಕುಸ್ತಿಗೆ ಹೆಸರುವಾಸಿಯಾಗಿದ್ದ ಇವರ ಶೈಲಿಗೆ ಕೋಟ್ಯಂತರ ಕುಸ್ತಿ ರಸಿಕರು ಮಾರು ಹೋಗಿದ್ದರು. 6.10 ಅಡಿ ಇದ್ದ ಈ ಅಜಾನುಬಾಹು ಕುಸ್ತಿ ಅಖಾಡಕ್ಕೆ ಕಾಲಿರಿದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.

 ನನಗೆ ಜಯಿಸಲು ಏನೂ ಉಳಿದಿಲ್ಲ. ನಾನು ಸಾಧಿಸಲು ಏನೂ ಉಳಿದಿಲ್ಲ. ಈಗಿನ ಆಟ ಬದಲಾಗಿದೆ. ಹೊಸ ಆಟಗಾರರು ಅಖಾಡದಲ್ಲಿ ಮಿಂಚಲು ತಯಾರಾಗಿದ್ದಾರೆ. ಇದು ನನ್ನ ನಿವೃತ್ತಿಯ ಸಮಯ ಎಂಬುದು ಗೋಚರಿಸುತ್ತಿದೆ. ಮತ್ತೆ ಅಖಾಡಕ್ಕೆ ಇಳಿಯುವ ಆಸೆ ನನಗಿಲ್ಲ ಎಂದು ಅಂಡರ್ ಟೇಕರ್ ಹೇಳಿದ್ದಾರೆ.

IPL ಆಯೋಜನೆಗೆ ಭಾರತೀಯನಿಂದಲೇ ಅಡ್ಡಗಾಲು..?

ಅಂಡರ್ ಟೇಕರ್ 1990 ರಲ್ಲಿ ಸರ್ವೈವರ್ ಸರಣಿಯ ಮೂಲಕ ತಮ್ಮ WWE ಜೀವನಕ್ಕೆ ಕಾಲಿಟ್ಟರು. ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್‌ಶಿಪ್, WWF / WWE ಚಾಂಪಿಯನ್‌ಶಿಪ್ 4 ಬಾರಿ, ಒಂದು ಬಾರಿ WWF ಹಾರ್ಡ್‌ಕೋರ್ ಚಾಂಪಿಯನ್‌ಶಿಪ್, ಆರು ಬಾರಿ WWF ವರ್ಲ್ಡ್ ಟ್ಯಾಗ್ ಟೀಂ ಚಾಂಪಿಯನ್‌ಶಿಪ್ ಮತ್ತು 2007 ರಲ್ಲಿ ರಾಯಲ್ ರಂಬಲ್ ಗೆದ್ದ ಸಾಧನೆ ಮಾಡಿದ್ದರು.

ಅಂಡರ್ ಟೇಕರ್ 2002 ರಲ್ಲಿ ಪ್ರೊ ವ್ರೆಸ್ಲಿಂಗ್ ಇಲ್ಲಸ್ಟ್ರೇಟೆಡ್ 500 ಪಟ್ಟಿಯ ಅಗ್ರ 500 ಸಿಂಗಲ್ಸ್ ಕುಸ್ತಿಪಟುಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು.
First published:June 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading