ಈ ಆಟಗಾರನಿಗಾಗಿ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು ಧೋನಿ: ಬಯಲಾಯ್ತು ರಹಸ್ಯ!


Updated:September 14, 2018, 5:43 PM IST
ಈ ಆಟಗಾರನಿಗಾಗಿ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು ಧೋನಿ: ಬಯಲಾಯ್ತು ರಹಸ್ಯ!

Updated: September 14, 2018, 5:43 PM IST
ಮುಂಬೈ(ಸೆ.14): ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್​ ಕೀಪರ್​ ಮತ್ತು ಬ್ಯಾಟ್ಸ್​ಮನ್​ ಮಹೇಂದ್ರ ಸಿಂಗ್​ ಧೋನಿ ಮಾತನಾಡುತ್ತಾ ಮುಂದಿನ ವಿಶ್ವಕಪ್​ ಪಂದ್ಯದಲ್ಲಿ ತನ್ನ ಉತ್ತರಾಧಿಕಾರಿಗೆ ಸೂಕ್ತ ತಂಡ ರಚಿಸುವ ಅವಕಾಶ ಸಿಗಬೇಕೆಂದು ತಾನು ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಧೋನಿ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ, ಟೆಸ್ಟ್​ ಪಂದ್ಯಕ್ಕೂ ನಿವೃತ್ತಿ ಘೋಷಿಸಿದ್ದರು, ತನ್ನ ನಾಯಕತ್ವದಲ್ಲಿ ಅವರು ಭಾರತಕ್ಕೆ 2007ರ ಟಿ 20 ವಿಶ್ವಕಪ್​ ಹಾಗೂ 2013ರಲ್ಲಿ ಚಾಂಪಿಯನ್ಸ್​ ಟ್ರೋಫಿ ತಂದುಕೊಟ್ಟ ಬಳಿಕ ಕೇವಲ ಸೀಮಿತ ಓವರ್​ಗಳಿಗಷ್ಟೇ ನಾಯಕತ್ವ ಮುಂದುವರೆಸಿದ್ದರು. ಆದರೆ 2016ರ ಅಕ್ಟೋಬರ್​ನಲ್ಲಿ ಅವರು ಟಿ20 ಹಾಗೂ ಏಕದಿನ ಪಂದ್ಯದ ಕ್ಯಾಪ್ಟನ್ಸಿಯನ್ನೂ ತೊರೆದಿದ್ದರು. ಇದಾದ ಬಳಿಕ ವಿರಾಟ್​ ಕೊಹ್ಲಿ ಮೂರೂ ವಿಭಾಗಗಳ ಮುಂದಾಳತ್ವ ವಹಿಸಿಕೊಂಡಿದ್ದರು.

ಧೋನಿ ಏಷ್ಯಾ ಕಪ್​ನಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳುವ ಮೊದಲು ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ "2019ರ ವಿಶ್ವಕಪ್​ ಪಂದ್ಯಕ್ಕೆ ಹೊಸ ನಾಯಕನಿಗೆ ತಯಾರಿ ನಡೆಸಲು ಸೂಕ್ತ ಸಮಯ ಸಿಗಬೇಕೆಂಬ ನಿಟ್ಟಿನಲ್ಲಿ ನಾನು ಟೀಂ ಇಂಡಿಯಾ ಕ್ಯಾಪ್ಟನ್​ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಹೊಸ ನಾಯಕನಿಗೆ ಸೂಕ್ತ ಸಮಯ ನೀಡದೆ ಬಲಿಷ್ಟ ತಂಡ ಆಯ್ಕೆ ಮಾಡಲು ಕಷ್ಟವಾಗುತ್ತದೆ" ಎಂದಿದ್ದಾರೆ.

ವಿಶ್ವದ ನಂಬರ್​ 1 ಟೆಸ್ಟ್​ ತಂಡ ಭಾರತವು ಇತ್ತೀಚೆಗಷ್ಟೇ ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ 1-4ರ ಅಂತರದಲ್ಲಿ ಸೋಲನುಭವಿಸಿತ್ತು. ಧೋನಿ ಅನ್ವಯ ಅಭ್ಯಾಸ ಪಂದ್ಯಗಳಲ್ಲಿ ಆಡದಿರುವುದೇ ಟೀಂ ಇಂಡಿಯಾದ ಸೋಲಿಗೆ ಪ್ರಮುಖ ಕಾರಣವಾಗಿದೆ.

ಅಭ್ಯಾಸ ಪಂದ್ಯಗಳಿಲ್ಲದಿರುವುದೇ ಟೀಂ ಇಂಡಿಯಾ ಅದರಲ್ಲೂ ಪ್ರಮುಖವಾಗಿ ಬ್ಯಾಟ್ಸ್​ಮನ್​ಗಳು ವಿಫಲರಾಗಲು ಮುಖ್ಯ ಕಾರಣವಾಗಿದೆ. ತಂಡವು ಸೀರೀಸ್​ಗೂ ಮೊದಲು ಅಭ್ಯಾಸ ಪಂದ್ಯವನ್ನಾಡಲು ಎಡವಿತು. ಈ ಕಾರಣದಿಂದ ಬ್ಯಾಟ್ಸ್​ಮನ್​ಗಳಿಗೆ ಪಂದ್ಯವನ್ನೆದುರಿಸಲು ಕಷ್ಟವಾಯಿತು. ಆದರೆ ಇದೆಲ್ಲವೂ ಆಟದ ಭಾಗವಾಗಿದೆ. ಆದರೆ ನಾವಿನ್ನೂ ರ್ಯಾಂಕಿಂಗ್​ನಲ್ಲಿ ನಂಬರ್​ 1 ಸ್ಥಾನದಲ್ಲಿದ್ದೇವೆ ಎಂಬುವುದನ್ನು ನಾವು ಮರೆಯಬಾರದು.
ಎಂ. ಎಸ್​ ಧೋನಿ

Loading...

ಅದೇನಿದ್ದರೂ ಧೋನಿ ಒಂದು ಒಳ್ಳೆಯ ಉದ್ದೇಶದಿಂದ, ಅಂದರೆ ವಿಶ್ವಕಪ್​ ಪಂದ್ಯದಲ್ಲಿ ನಾಯಕ ವಿರಾಟ್​ ಕೊಹ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಬೇಕೆಂಬ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದರೆಂಬುವುದು ಸ್ಪಷ್ಟವಾಗಿದೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626