• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಐಪಿಎಲ್ ಇತಿಹಾಸದಲ್ಲಿ ಬಂಗಾಳದ ದುಬಾರಿ ಕ್ರಿಕೆಟಿಗ, ಗಂಗೂಲಿ ರೆಕಾರ್ಡ್​ ಬ್ರೇಕ್ ಮಾಡಿದ ಯುವ ಪ್ಲೇಯರ್​

IPL 2023: ಐಪಿಎಲ್ ಇತಿಹಾಸದಲ್ಲಿ ಬಂಗಾಳದ ದುಬಾರಿ ಕ್ರಿಕೆಟಿಗ, ಗಂಗೂಲಿ ರೆಕಾರ್ಡ್​ ಬ್ರೇಕ್ ಮಾಡಿದ ಯುವ ಪ್ಲೇಯರ್​

ಮುಕೇಶ್ ಕುಮಾರ್

ಮುಕೇಶ್ ಕುಮಾರ್

IPl 2023: ಐಪಿಎಲ್​ನಲ್ಲಿ ಬಂಗಾಳದ ಪರ ಅತಿ ಹೆಚ್ಚು ಬಿಡ್ ಆದ ಆಟಗಾರನಾಗುವ ಮೂಲಕ ಮುಖೇಶ್ ಕುಮಾರ್ ಅವರು ಸೌರವ್ ಗಂಗೂಲಿ ದಾಖಲೆಯನ್ನೂ ಮೀರಿಸಿದ್ದಾರೆ.

  • Share this:

ಕೊಲ್ಕತ್ತಾ: ಇನ್ನೇನು ಕೆಲ ದಿನಗಳಲ್ಲಿಯೇ ಐಪಿಎಲ್​ 16ನೇ (IPL2023) ಸೀಸನ್​ ಅದ್ಧೂರಿಯಾಗಿ ಆರಂಭವಾಗಲಿದೆ. ಈಗಾಗಲೇ ಈ ಮೆಗಾ ಟೂರ್ನಿಗಾಗಿ ಎಲ್ಲಾ ತಂಡಗಳೂ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಇದರ ನಡುವೆ ಓವರ್ ಆಟಗಾರನ ಬಗ್ಗೆ ಸಖತ್​ ಚರ್ಚೆ ಆಗುತ್ತಿದೆ. ಹೌದು, ಶ್ರಮಪಟ್ಟರೆ ಯಾವ ಕನಸುಗಳಾದರೂ ನನಸಾಗುತ್ತವೆ. ಅದೇ ರೀತಿ ಮುಕೇಶ್ ಕುಮಾರ್ (Mukesh Kumar) ಅವರ ಕನಸು ಸಹ ಇನ್ನೇನು ಕೆಲ ದಿನಗಳಲ್ಲಿಯೇ ಈಡೇರಲಿದೆ. ಅವರ ತಂದೆ ಟ್ಯಾಕ್ಸಿ ಓಡಿಸುತ್ತಿದ್ದರು. ಮುಖೇಶ್ ಹರಾಜಿನಲ್ಲಿ ಬಂಗಾಳದ ಅತ್ಯಂತ ದುಬಾರಿ ಕ್ರಿಕೆಟಿಗರಾಗಿದ್ದಾರೆ, ಅವರು ಸೌರವ್ (Sourav Ganguly) ಅವರ ದಾಖಲೆಯನ್ನು ಸಹ ಮುರಿದಿದ್ದಾರೆ. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ (DC) 5 ಕೋಟಿ 50 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು.


ಗಂಗೂಲಿ ದಾಖಲೆ ಮುರಿದ ಮುಖೇಶ್:


ಇನ್ನು, ಐಪಿಎಲ್​ನಲ್ಲಿ ಬಂಗಾಳದ ಪರ ಅತಿ ಹೆಚ್ಚು ಬಿಡ್ ಆದ ಆಟಗಾರನಾಗುವ ಮೂಲಕ ಮುಖೇಶ್ ಕುಮಾರ್ ಅವರು ಸೌರವ್ ಗಂಗೂಲಿ ದಾಖಲೆಯನ್ನೂ ಮೀರಿಸಿದ್ದಾರೆ. ಐಪಿಎಲ್‌ನಲ್ಲಿ ಸೌರವ್ ಗಂಗೂಲಿ ಅವರು ಗರಿಷ್ಠ 4 ಕೋಟಿ 37 ಲಕ್ಷ ರೂಗೆ ಬಿಕರಿಯಾಗಿದ್ದರು. ಭಾರತ ಕ್ರಿಕೆಟ್ ತಂಡವನ್ನು ಪ್ರವೇಶಿಸುವುದು ಮುಖೇಶ್‌ಗೆ ಸುಲಭದ ಮಾತಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ ಲೆಜೆಂಡರಿ ವೇಗಿ ವಕಾರ್ ಯೂನಿಸ್ ಅವರನ್ನು ಮುಕೇಶ್ಕುಮಾರ್​ ಅವರನ್ನು ಮೆಚ್ಚಿದ್ದಾರೆ. ಗೋಪಾಲ್‌ಗಂಜ್‌ನ ನಿವಾಸಿಯಾಗಿರುವ ಮುಖೇಶ್‌ ಅವರ ತಂದೆ ತನ್ನ ಮಗ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ ಸೇರಬೇಕೆಂದು ಬಯಸಿದ್ದರಂತೆ.


ಸೇನೆಗೆ ಸೇರಲು ಬಯಸಿದ್ದರು:


ಹೌದು, ಮುಖೇಶ್ ಕುಮಾರ್​ ಅವರು ಸೈನ್ಯಕ್ಕೆ ಸೇರಲು ಬಯಸಿದ್ದರು. ಅವರು ಮೂರು ಬಾರಿ ಪ್ರಯತ್ನಿಸಿದರು ಆದರೆ ಕೊನೆಯಲ್ಲಿಯೂ ಅದು ಯಶಸ್ವಿಯಾಗಲಿಲ್ಲ. ಅಲ್ಲದೆ, ಅವರು ಅಂಡರ್ 19 ಮಟ್ಟದಲ್ಲಿ ಬಿಹಾರವನ್ನು ಪ್ರತಿನಿಧಿಸಿದ್ದರು. ಬಾಲ್ಯದಲ್ಲಿ, ಅವರು ಸೈನ್ಯಕ್ಕೆ ಸೇರುವ ಕನಸು ಕಂಡಿದ್ದರಂತೆ. ಆದರೆ 2015ರಲ್ಲಿ ಬಂಗಾಳದ ಹಿರಿಯರ ತಂಡದಲ್ಲಿ ಮುಖೇಶ್‌ಗೆ ಅವಕಾಶ ಸಿಕ್ಕಿತ್ತು. ಬಂಗಾಳ ಪರ ಸ್ಥಿರ ವೇಗದ ಬೌಲಿಂಗ್‌ಗಾಗಿ ಅವರು ಪ್ರಶಸ್ತಿ ಪಡೆದರು. ನ್ಯೂಜಿಲೆಂಡ್ 'ಎ' ತಂಡದ ವಿರುದ್ಧದ ಟೆಸ್ಟ್‌ನಲ್ಲಿ ಭಾರತ 'ಎ' ತಂಡಕ್ಕೆ ಆಯ್ಕೆಯಾಗಿ ಮೊದಲ ಟೆಸ್ಟ್‌ನಲ್ಲಿ 5 ವಿಕೆಟ್‌ ಪಡೆದು ಮಿಂಚಿದರು.


ಇದನ್ನೂ ಓದಿ: WTC Final 2023: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ-ಟೆಸ್ಟ್​ ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​ ಔಟ್​?


ಲಕ್ಷ್ಮಣ್ ಅವರಿಗೆ ಕೃತಜ್ಞತೆ:


ಇರಾನಿ ಕಪ್ ಸಮಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದರು. ಭಾರತ ಎ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಅವರಿಗೆ ಮುಖೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. ಒಮ್ಮೆ ಅವರು ಬಂಗಾಳದ ಬ್ಯಾಟಿಂಗ್ ಸಲಹೆಗಾರರಾಗಿದ್ದರು. ಅವರ ಸಲಹೆ ಫಲಕಾರಿಯಾಗಿದೆ ಎಂದು ಹೇಳಿದ್ದಾರೆ. ಅವರು ಶಿವಪುರ ಕ್ಲಬ್‌ನಲ್ಲಿ ಆಡುತ್ತಿದ್ದರು. ಅವರು 2015-16 ರ ರಣಜಿ ಟ್ರೋಫಿಯಲ್ಲಿ ಅಕ್ಟೋಬರ್ 30 ರಂದು ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಅವರು 2015-16 ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ 13 ಡಿಸೆಂಬರ್ 2015 ರಂದು ತಮ್ಮ ಲಿಸ್ಟ್ 'ಎ' ಗೆ ಪಾದಾರ್ಪಣೆ ಮಾಡಿದರು.
ರಾಷ್ಟ್ರೀಯ ತಂಡಕ್ಕಾಗಿ ವೇಟಿಂಗ್​:


ಅವರು 2015-16ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 6 ಜನವರಿ 2016 ರಂದು ತಮ್ಮ T20 ಚೊಚ್ಚಲ ಪಂದ್ಯವನ್ನು ಆಡಿದರು. ಡಿಸೆಂಬರ್ 2022ರಲ್ಲಿ, ಶ್ರೀಲಂಕಾ ವಿರುದ್ಧದ T20 ಅಂತರರಾಷ್ಟ್ರೀಯ (T20I) ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅವರ ಮೊದಲ ಆಡಿದರು. ಮುಖೇಶ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 34 ಪಂದ್ಯಗಳಲ್ಲಿ 130 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಒಂದು ಇನ್ನಿಂಗ್ಸ್‌ನಲ್ಲಿ 6 ಬಾರಿ 5 ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

top videos
    First published: