Sunil Chhetri: ಫೋಟೋಗಾಗಿ ಭಾರತ ತಂಡದ ನಾಯಕನನ್ನೇ ಪಕ್ಕಕ್ಕೆ ತಳ್ಳಿದ ರಾಜ್ಯಪಾಲ, ಇದೆಂಥಾ ದುರ್ವರ್ತನೆ ಎಂದ ನೆಟ್ಟಿಗರು

Sunil Chhetri: ಡುರಾಂಡ್ ಕಪ್ ಫೈನಲ್ ಪಂದ್ಯದ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬೆಂಗಳೂರು FC ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಪಶ್ಛಿಮ ಬಂಗಾಳ ಮತ್ತು ಮಣಿಪುರದ ರಾಜ್ಯಪಾಲರಾದ ಲಾ ಗಣೇಶನ್ ಅವರು ಪಕ್ಕಕ್ಕೆ ತಳ್ಳಿದ್ದಾರೆ.

ಸುನಿಲ್‌ ಛೆತ್ರಿ

ಸುನಿಲ್‌ ಛೆತ್ರಿ

  • Share this:
ದೇಶದ ಪರ ಆಟವಾಡುವ ಕ್ರೀಡಾಪಟುಗಳು ಎಂದರೆ ದೇಶದ ಜನತೆಗೆ ಅದರಲ್ಲಿಯೂ ಭಾರತೀಯರಿಗೆ ಸ್ವಲ್ಪ ಹೆಚ್ಚು ಒಲವು ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಕ್ರಿಕೆಟ್​ ಆಟಗಾರರು ಎಂದರೆ ಸಾಕು ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಕೆಲವರಂತೂ ಅವರನ್ನು ದೇವರಂತೆ ಪೂಜಿಸುತ್ತಾರೆ. ಆದರೆ ನಮ್ಮಲ್ಲಿ ಫುಟ್ಬಾಲ್ (Football)​ ಬಗ್ಗೆಯೂ ಅಷ್ಟಾಗಿ ಕ್ರೇಜ್​ ಇಲ್ಲದಿದ್ದರೂ ಭಾರತ ತಂಡದ ನಾಯಕ ಸುನೀಲ್​ ಛೆಟ್ರಿ (Sunil Chhetri) ಎಂದರೆ ಎಲ್ಲರಿಗೂ ತಿಳಿದಿರುವ ಹೆಸರು. ದೇಶ ಮಟ್ಟದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಇವರ ಆಟಕ್ಕೆ ಅಭಿಮಾನಿಗಳಿದ್ದಾರೆ. ರೋನಾಲ್ಡೊ (Ronaldo), ಮೆಸ್ಸಿಯಂತಹ ದಿಗ್ಗಜ ಆಟಗಾರರ ಸಾಲಿನಲ್ಲಿ ನಿಲ್ಲುವ ನಮ್ಮ ದೇಶದ ಹೆಮ್ಮಯ ಛೆಟ್ರಿ ಅವರಿಗೆ ಇದೀಗ ರಾಜ್ಯಪಾಲರಿಂದ ಅವಮಾನವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಅಂತಹ ಘಟನೆ ಏನಾಯಿತು ಎಂದು ನೋಡೋಣ ಬನ್ನಿ.

ಫೋಟೋಗಾಗಿ ಛೆಟ್ರಿಯನ್ನು ಪಕ್ಕಕ್ಕೆ ತಳ್ಳಿದ ರಾಜ್ಯಪಾಲರು:

ಹೌದು, ಡುರಾಂಡ್ ಕಪ್ ಫೈನಲ್ ಪಂದ್ಯದ ಬಳಿಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಬೆಂಗಳೂರು FC ತಂಡದ ನಾಯಕ ಸುನಿಲ್ ಛೆಟ್ರಿ ಅವರನ್ನು ಪಶ್ಛಿಮ ಬಂಗಾಳ ಮತ್ತು ಮಣಿಪುರದ ರಾಜ್ಯಪಾಲರಾದ ಲಾ ಗಣೇಶನ್ ಅವರು ಪಕ್ಕಕ್ಕೆ ತಳ್ಳಿದ್ದಾರೆ. ಪ್ರಶಸ್ತಿ ಪಡೆಯುವಾಗ ಅವರು ಫೋಟೋದಲ್ಲಿ ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಛೆಟ್ರಿ ಅವರನ್ನು ಪಕ್ಕಕ್ಕೆ ಸರಿಸಿರುವಂತೆ ಇದು ಬಿಂಬಿತವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ.

ಕೋಲ್ಕತ್ತಾದ ಸಾಲ್ಟ್ ಲೇಖ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸುನೀಲ್​ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್​ಸಿ 2-1 ಗೋಲ್​ಗಳಿಂದ ಮುಂಬೈ ಸಿಟಿ ಎಫ್​ಸಿ ತಂಡವನ್ನು ಸೋಲಿಸಿ ಟ್ರೋಫಿಯನ್ನು ಗೆದ್ದಿದೆ. ಇದಾದ ಬಳಿಕ ಪ್ರಶಸ್ತಿಯನ್ನು ಪಡೆಯುವಾಗ ಬೆಂಗಳೂರು ಎಫ್ಇ ತಂಡದ ನಾಯಕ ಛೆಟ್ರಿಯನ್ನು ಕೇವಲ ಫೋಟೊಗಾಗಿ ಪಕ್ಕಕ್ಕೆ ತಳ್ಳಿರುವುದರ ಬಗ್ಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಇದು ಮಾತ್ರವಲ್ಲದೇ ಮತ್ತೊಬ್ಬ ಆಟಗಾರರಾದ ಶಿವಶಕ್ತಿ ನಾರಾಯಣ್​ ಅವರನ್ನೂ ಸಹ ಫೋಟೋಗಾಗಿ ಪಕ್ಕಕ್ಕೆ ಸರಿಸಲಾಗಿದೆ.

ಇದನ್ನೂ ಓದಿ: IND vs AUS: ನಾಳೆ ಭಾರತ-ಆಸ್ಟ್ರೇಲಿಯಾ ಮೊದಲ ಪಂದ್ಯ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್ 11

ಛೆಟ್ರಿ ಪರ ಟ್ವೀಟ್​ ಮಾಡಿದ ಉತ್ತಪ್ಪ:

ಭಾರತದ ಮಾಜಿ ಆಟಗಾರ ರಾಬಿನ್​ ಉತ್ತಪ್ಪ ಸಹ ಛೆಟ್ರಿ ಪರ ನಿಂತಿದ್ದು, ಈ ಕುರಿತು ಟ್ವೀಟ್​ ಮಾಡಿದ್ದು, ‘ಇದು ಎಲ್ಲಾ ರೀತಿಯಲ್ಲಿಯೂ ತಪ್ಪು!! ಕ್ಷಮಿಸಿ @chetrisunil11 ನೀವು ಇದಕ್ಕಿಂತ ಎಷ್ಟೋ ಉತ್ತಮರು ಮತ್ತು ಅರ್ಹರು!!‘ ಎಂದು ಬರೆದುಕೊಂಡಿದ್ದಾರೆ.

ಈ ದುರ್ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ನೆಟ್ಟಿಗರು ರಾಜ್ಯಪಾಲ ಲಾ ಗಣೇಶನ್ ಅವರ ನಡೆಯನ್ನು ಖಂಡಿಸಿದ್ದು, ರಾಜ್ಯಪಾಲರು ಸುನಿಲ್ ಛೆಟ್ರಿ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನು ಗಮನಿಸಿಯಾದರೂ ರಾಜ್ಯಪಾಲರೂ ತಮ್ಮ ತಪ್ಪನ್ನು ತಿಳಿದು ಸುನೀಲ್​ ಛೆಟ್ರಿ ಅವರಲ್ಲಿ ಕ್ಷಮೆ ಕೇಳುತ್ತಾರೆಯೇ ಎಂದು ನೋಡಬೇಕಿದೆ.
Published by:shrikrishna bhat
First published: