Oneday Cricket: ಏಕದಿನ ಕ್ರಿಕೆಟಿನ ಭವಿಷ್ಯ ಅಳಿದು ಹೋಗುವ ಅಪಾಯದಲ್ಲಿದೆ, ಆತಂಕ ವ್ಯಕ್ತಪಡಿಸಿದ ಹಿರಿಯ ಕ್ರಿಕೆಟಿಗರು

50 ಓವರ್ ಗಳ ಏಕದಿನ ಪಂದ್ಯವನ್ನು ಈಗ ಜನರು ನಿಧಾನವಾಗಿ ಮರೆಯುತ್ತಿದ್ದಾರೆ ಅಥವಾ ಅದರ ಮೇಲಿರುವ ಆಸಕ್ತಿ ಕಡಿಮೆ ಆಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈ ಮಾತಿಗೆ ಪುಷ್ಠಿ ಸಿಗುವಂತೆ ಕಳೆದ ವಾರವಷ್ಟೆ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಬೆನ್ ಸ್ಟೋಕ್ಸ್ ಅವರು ಕೊಟ್ಟ ಹೇಳಿಕೆ ಈ ರೀತಿಯ ಅನುಮಾನವನ್ನು ಹುಟ್ಟು ಹಾಕುತ್ತಿದೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಕ್ರಿಕೆಟ್ ಆಟದಲ್ಲಿ (Cricket Match) ತುಂಬಾನೇ ಹೊಸ ಹೊಸ ಬದಲಾವಣೆಗಳು ಬಂದಿದ್ದು, ಮೊದಲೆಲ್ಲಾ ಜನರು ತುಂಬಾನೇ ಕುತೂಹಲದಿಂದ ಕುಳಿತುಕೊಂಡು ನೋಡುತ್ತಿದ್ದಂತಹ 50 ಓವರ್ ಗಳ ಏಕದಿನ ಪಂದ್ಯವನ್ನು ಈಗ ಜನರು ನಿಧಾನವಾಗಿ ಮರೆಯುತ್ತಿದ್ದಾರೆ ಅಥವಾ ಅದರ ಮೇಲಿರುವ ಆಸಕ್ತಿ (Interest) ಕಡಿಮೆ ಆಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಈ ಮಾತಿಗೆ ಪುಷ್ಠಿ ಸಿಗುವಂತೆ ಕಳೆದ ವಾರವಷ್ಟೆ ಏಕದಿನ ಕ್ರಿಕೆಟ್ ಗೆ (One Day Cricket) ನಿವೃತ್ತಿ ಘೋಷಿಸಿದ ಇಂಗ್ಲೆಂಡ್ (England) ತಂಡದ ನಾಯಕನಾಗಿದ್ದ ಬೆನ್ ಸ್ಟೋಕ್ಸ್ ಅವರು ಕೊಟ್ಟ ಹೇಳಿಕೆ ಈ ರೀತಿಯ ಅನುಮಾನವನ್ನು ಹುಟ್ಟು ಹಾಕುತ್ತಿದೆ ನೋಡಿ.

ಸ್ಟೋಕ್ಸ್ ಅವರು ತೆಗೆದುಕೊಂಡ ನಿರ್ಧಾರ ತಜ್ಞರು ಮತ್ತು ವಿಮರ್ಶಕರನ್ನೇ ಗೊಂದಲಕ್ಕೀಡು ಮಾಡಿದ್ದೇಕೆ?
ಪ್ರಸ್ತುತ ವಿಶ್ವದ ಪ್ರಮುಖ ಕ್ರಿಕೆಟಿಗ ಮತ್ತು ನಾಯಕನಾಗಿ ನೇಮಕಗೊಂಡ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದ ಸ್ಟೋಕ್ಸ್ ಅವರು ತೆಗೆದುಕೊಂಡ ನಿರ್ಧಾರ ಮಾತ್ರ ತಜ್ಞರು ಮತ್ತು ವಿಮರ್ಶಕರನ್ನು ಇದಕ್ಕೆ ಕಾರಣ ಏನಿರಬಹುದು ಅಂತ ಉತ್ತರ ಹುಡುಕಲು ತಡಕಾಡುವಂತೆ ಮಾಡಿದೆ.

ಕೆಲವು ವಾರಗಳ ಹಿಂದೆ, ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಆದಂತಹ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಮೈಕೆಲ್ ವಾನ್ ಮತ್ತು ಫಿಲ್ ಟಫ್ನೆಲ್ ಅವರೊಂದಿಗೆ ಪಾಡ್ಕಾಸ್ಟ್ ನಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಏಕದಿನ ಪಂದ್ಯಗಳ ಪ್ರಸ್ತುತತೆಯನ್ನು ಪ್ರಶ್ನಿಸಿದ್ದರು.

ಈ ಕುರಿತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಹೇಳಿದ್ದು ಹೀಗೆ
ಬೆನ್ ಸ್ಟೋಕ್ಸ್ ತಮ್ಮ ನಿರ್ಧಾರವನ್ನು ತೆಗೆದುಕೊಂಡ ಕೆಲವು ದಿನಗಳ ನಂತರ, ವಾನ್ ಮತ್ತು ಟಫ್ನೆಲ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರನ್ನು ಸಂದರ್ಶಿಸಿದರು, ಅವರು ಸಹ ಈ 50 ಓವರ್ ಗಳ ಏಕದಿನ ಪಂದ್ಯದ ಸ್ವರೂಪವು ಅರ್ಥಹೀನವಾಗಿದೆ ಎಂದು ಸ್ಟೋಕ್ಸ್ ಅವರು ನಿವೃತ್ತಿ ಘೋಷಿಸಿದ್ದನ್ನು ಬೆಂಬಲಿಸಿದರು. ಒಬ್ಬ ವೀಕ್ಷಕ ವಿವರಣೆಗಾರನಾಗಿಯೂ ಒಂದು ದಿನದ ಆಟವು ನನಗೆ ತುಂಬಾನೇ ಆಯಾಸ ಎಂದೆನಿಸುತ್ತದೆ ಎಂದು ಅಕ್ರಂ ಹೇಳಿದರು.

ಏಕದಿನ ಪಂದ್ಯವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆಯಂತೆ 
ವಾಸ್ತವ ವಿಚಾರ ಎಂದರೆ ಏಕದಿನ ಪಂದ್ಯಗಳು ಸುಮಾರು ಎರಡು ದಶಕಗಳಿಂದ ಒತ್ತಡದಲ್ಲಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸುಮಾರು ಅರ್ಧ ಶತಕದ ಕಾಲ ಕ್ರಿಕೆಟ್ ಅನ್ನು ಆಳಿದಂತಹ ಏಕದಿನ ಪಂದ್ಯವು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 2009 ರಲ್ಲಿಯೇ ಹೇಳಿದ್ದರು.

ಇದನ್ನೂ ಓದಿ:  ASIA CUP 2022: ಏಷ್ಯಾ ಕಪ್ ಪ್ರೋಮೋ ರಿಲೀಸ್, ಭಾರತ-ಪಾಕ್ ಮುಖಾಮುಖಿಗೆ ಡೇಟ್​ ಫಿಕ್ಸ್

ಏಕದಿನ ಪಂದ್ಯಗಳು ಊಹಿಸಲಾಗದಷ್ಟು ಕಡಿಮೆಯಾಗಿವೆ ಎಂದು ತೆಂಡೂಲ್ಕರ್ ಅವರು ಹೇಳಿದ್ದರು. ಏಕದಿನ ಪಂದ್ಯಗಳಲ್ಲಿ ಪವರ್ ಪ್ಲೇನ ಮೊದಲ 10 ಓವರ್ ಗಳು ಮತ್ತು ದೊಡ್ಡ ಹೊಡೆತದ ಕೊನೆಯ 10 ಓವರ್ ಗಳು ಹೊರತು ಪಡಿಸಿದರೆ ಮಧ್ಯೆ ಇರುವ ಆ ಓವರ್ ಗಳು ಅಭಿಮಾನಿಗಳನ್ನಾಗಲೀ ಅಥವಾ ಆಟಗಾರರನ್ನು ತೊಡಗಿಸಿಕೊಳ್ಳಲು ವಿಫಲವಾಗುವ ಒಂದು ಮಾದರಿಯನ್ನು ಅನುಸರಿಸಿದೆ ಎಂದು ಹೇಳಲಾಗುತ್ತಿದೆ.

50 ಓವರ್ ಗಳ ಏಕದಿನ ಪಂದ್ಯವನ್ನು ಎರಡೂ ತಂಡಗಳಿಗೆ 25 ಓವರ್ ಗಳ ಎರಡು ಇನ್ನಿಂಗ್ಸ್ ಗಳಾಗಿ ವಿಂಗಡಿಸಬೇಕು ಎಂಬುದು ತೆಂಡೂಲ್ಕರ್ ಅವರ ಸಲಹೆಯಾಗಿತ್ತು. ಆಟಕ್ಕೆ ಹೆಚ್ಚು ಸ್ಪರ್ಧಾತ್ಮಕ ಹರಿವನ್ನು ನೀಡಲು ಕ್ಷೇತ್ರ ನಿರ್ಬಂಧಗಳು, ಚೆಂಡುಗಳ ಬದಲಾವಣೆ ಇತ್ಯಾದಿಗಳ ಬಗ್ಗೆ ಅವರು ಇದಕ್ಕೆ ಕೆಲವು ಇತರ ಅಂಶಗಳನ್ನು ಸೇರಿಸಿದ್ದರು.

ಇಂಗ್ಲೆಂಡ್ ನ ಮಾಜಿ ನಾಯಕ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ಟೋನಿ ಗ್ರೇಗ್, ತೆಂಡೂಲ್ಕರ್ ಅವರಂತೆ ಏಕದಿನ ಪಂದ್ಯವನ್ನು ಎರಡು ಇನ್ನಿಂಗ್ಸ್ ಗಳ ಪಂದ್ಯವಾಗಿ ವಿಭಜಿಸಲು ಪ್ರಸ್ತಾಪಿಸಿದ್ದರು. 2012ರಲ್ಲಿ ಗ್ರೇಗ್ ಅವರು "ಏಕದಿನ ಪಂದ್ಯವು ಸ್ತಬ್ಧವಾಗಿದೆ, 2011 ರ ವಿಶ್ವಕಪ್ ಭಾರತದಲ್ಲಿ ಆಡಿದ್ದರಿಂದ ಅದು ಯಶಸ್ವಿಯಾಗಿತ್ತು, ಆದರೆ ಈ ಮಾದರಿ ಇನ್ಮುಂದೆ ಉಳಿಯುವುದನ್ನು ನಾನು ನೋಡಲು ಸಾಧ್ಯವಿಲ್ಲವೇನೋ" ಎಂದು ಅವರು ಹೇಳಿದರು.

ಆಡಳಿತ ಮಂಡಳಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದ ಸ್ಟೋಕ್ಸ್ ಅವರ ಹಠಾತ್ ನಿವೃತ್ತಿ
ಒಟ್ಟಿನಲ್ಲಿ ಹೇಳುವುದಾದರೆ ಸ್ಟೋಕ್ಸ್ ಅವರ ಹಠಾತ್ ನಿವೃತ್ತಿಯು ಆಡಳಿತ ಮಂಡಳಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದು ದೊಡ್ಡ ದೊಡ್ಡ ಆಟಗಾರರ ಅಕಾಲಿಕ ನಿವೃತ್ತಿಯ ಅಲೆಯನ್ನು ಪ್ರಚೋದಿಸುತ್ತದೆಯೇ ಎಂದು ಕಳವಳವನ್ನು ಮಂಡಳಿ ವ್ಯಕ್ತಪಡಿಸಿದೆ.

ಟಿಟ್ವೆಂಟಿ ಕ್ರಿಕೆಟ್ ನ ಉದಯ, ವಿಶೇಷವಾಗಿ ವಿಶ್ವದಾದ್ಯಂತ ಬೆಳೆಯುತ್ತಿರುವ ಲೀಗ್ ಗಳು ಆಟಗಾರರಲ್ಲಿ ಏಕದಿನ ಪಂದ್ಯಗಳತ್ತ ಆಕರ್ಷಣೆ ಕಡಿಮೆಯಾಗಲು ದೊಡ್ಡ ಕಾರಣವಾಗಿದೆ. ಟಿ20 ಪಂದ್ಯಗಳು ಹೆಚ್ಚಿನ ಅಭಿಮಾನಿಗಳನ್ನು ಹೊಂದಿವೆ ಮತ್ತು ಹೆಚ್ಚು ಲಾಭದಾಯಕವಾಗಿವೆ.

ಇದನ್ನೂ ಓದಿ:  IND vs WI: ಸಚಿನ್​ ಹೆಸರಿನಲ್ಲಿದ್ದ ದಾಖಲೆ ಮುರಿದ ಯುವ ಆಟಗಾರ! 2 ವರ್ಷ ಬಿಟ್ಕೊಂಡು ಬಂದ್ರೂ ಅದೇ ಖದರ್

ಎಲ್ಲಾ ಮೂರು ಸ್ವರೂಪಗಳಲ್ಲಿ ಒಂದನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಿರುವ ಸ್ಟೋಕ್ಸ್, ಕೆಲಸದ ಹೊರೆಯು ಸಮರ್ಥನೀಯವಲ್ಲ ಎಂದು ಕಂಡು ಕೊಂಡರು, ಕನಿಷ್ಠ ಒಂದು ಸ್ವರೂಪದ ತ್ಯಾಗದ ಅಗತ್ಯವಿದೆ ಎಂದು ಹೇಳಿದರು. ಅವರು ಏಕದಿನ ಪಂದ್ಯಗಳನ್ನು ತ್ಯಜಿಸಲು ನಿರ್ಧರಿಸಿದರು. ಟೆಸ್ಟ್ ಕ್ರಿಕೆಟ್ ಅತ್ಯಂತ ಮಹತ್ವದ್ದಾಗಿದೆ ಎಂದು ಸ್ಟೋಕ್ಸ್ ಪುನರುಚ್ಚರಿಸಿದರು.
Published by:Ashwini Prabhu
First published: