‘ಮ್ಯಾನೇಜರ್ ಮದುವೆ ಆದ್ರೆ ಸಮಸ್ಯೆ ಖಂಡಿತ’: ಹೆಂಡತಿ ಬಗ್ಗೆ ಇನ್​ಸ್ಟಾದಲ್ಲಿ ರೋಹಿತ್ ಶರ್ಮಾ ಪೋಸ್ಟ್

news18
Updated:July 30, 2018, 11:00 PM IST
‘ಮ್ಯಾನೇಜರ್ ಮದುವೆ ಆದ್ರೆ ಸಮಸ್ಯೆ ಖಂಡಿತ’: ಹೆಂಡತಿ ಬಗ್ಗೆ ಇನ್​ಸ್ಟಾದಲ್ಲಿ ರೋಹಿತ್ ಶರ್ಮಾ ಪೋಸ್ಟ್
news18
Updated: July 30, 2018, 11:00 PM IST
ನ್ಯೂಸ್ 18 ಕನ್ನಡ

ಮುಂಬೈ (ಜುಲೈ. 30): ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳಿರುವ ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಅವರು ಫುಲ್​ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಪತ್ನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆದರೀಗ ದಿಢೀರ್ ಅಂತ ರೋಹಿತ್​ಗೆ ಗೊಂದಲ ಶುರುವಾಗಿದೆಯಂತೆ. ಲ್ಯಾಪ್​ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಿರುವ ಪತ್ನಿ ರಿತಿಕಾ ಸಜ್ದೆ ಅವರ ಫೋಟೋವನ್ನು ರೋಹಿತ್ ಅವರು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್ ಮಾಡಿದ್ದಾರೆ. ಫೋಟೋ ಹಾಕಿ ‘ಮ್ಯಾನೇಜರ್ ಮದುವೆ ಆದರೆ ಸಮಸ್ಯೆ ಖಂಡಿತ’ ಎಂದು ಅಡಿ ಬರಹ ನೀಡಿ ರಿತಿಕಾ ಅವರ ಕಾಲೆಳೆದಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದು, ಎಂ . ಎಸ್. ಧೋನಿ ಅವರ ಪತ್ನಿ ಸಾಕ್ಷಿ ಧೋನಿ, ಯುವರಾಜ್ ಸಿಂಗ್ ಸೇರಿದಂತೆ ಅನೇಕರು ಕಾಮೆಂಟಿಸಿದ್ದಾರೆ.

ಈ ಹಿಂದೆ ಮದುವೆಗೂ ಮುನ್ನ ರಿತಿಕಾ ಅವರು ರೋಹಿತ್​ ಶರ್ಮಾರ ಮ್ಯಾನೇಜರ್​ ಆಗಿದ್ದರು. ಬಳಿಕ ಇವರ ಸ್ನೇಹ ಪ್ರೇಮಕ್ಕೆ ತಿರುಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...