• Home
  • »
  • News
  • »
  • sports
  • »
  • National Games: ಅಗಲಿದ ಕೋಚ್​ಗೆ ಗೋಲ್ಡ್​ ಮೆಡಲ್ ಗೆದ್ದು ಅರ್ಪಿಸಿದ ಶಿಷ್ಯ

National Games: ಅಗಲಿದ ಕೋಚ್​ಗೆ ಗೋಲ್ಡ್​ ಮೆಡಲ್ ಗೆದ್ದು ಅರ್ಪಿಸಿದ ಶಿಷ್ಯ

ಕೋಚ್​ ಮತ್ತು ದುಬೆ

ಕೋಚ್​ ಮತ್ತು ದುಬೆ

ತನ್ನ ಮೆಚ್ಚಿನ ಕೋಚ್​ ನಿಧನಕ್ಕೆ ನಿಖಿಲ್​ ಬೇಸರ ವ್ಯಕ್ತಪಡಿಸಿದ್ದು, ನಾನು ಈ ಪದಕವನ್ನು ಗೌರವಿಸುತ್ತೇನೆ. ನನ್ನ ವೃತ್ತಿಜೀವನವನ್ನು ರೂಪಿಸಿದ್ದಕ್ಕಾಗಿ ನನ್ನ ತರಬೇತುದಾರರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಹೇಳುವ ಮೂಲಕ ಅಗಲಿದ ಕೋಚ್​ಗೆ ತಮ್ಮ ಪದಕವನ್ನು ಅರ್ಪಿಸಿದರು.

ಮುಂದೆ ಓದಿ ...
  • Share this:

ಬುಧವಾರ ಸೂರತ್‌ನಲ್ಲಿ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದ (National Games) ಅತ್ಯಂತ ಸ್ಪೂರ್ತಿದಾಯಕ ಮತ್ತು ಭಾವನಾತ್ಮಕ ಕ್ಷಣ ಒಂದನ್ನು ನಿಖಿಲ್ ದುಬೆ (Nikhil Dubey) ನಿರ್ಮಿಸಿದ್ದರು. ಮಹಾರಾಷ್ಟ್ರದ ಬಾಕ್ಸರ್ (Boxer) ಪುರುಷರ ಮಿಡಲ್‌ವೇಟ್ ವಿಭಾಗದಲ್ಲಿ ಚಿನ್ನ ಗೆದ್ದು ಬೀಗಿದರು. ಆದರೆ ಪದಕ ಗೆದ್ದರು ಯಾವುದೇ ಸಂತೋಷವಿಲ್ಲದೆ ವೇದಿಕೆಯ ಮೇಲೆ ಭಾವುಕರಾಗಿದ್ದರು. ವೇದಿಕೆ ಮೇಲೆ ನಿಖಿಲ್ ತಮ್ಮ ಕೋಚ್ ಮತ್ತು ಮಾರ್ಗದರ್ಶಕರಾದ ಧನಂಜಯ್ ತಿವಾರಿ (Dhananjay Tiwari) ಅವರಿಗೆ ಕೈಮುಗಿದು ಧನ್ಯವಾದ ಹೇಳಿದರು. ಗಾಂಧಿನಗರದ ಮಹಾತ್ಮ ಮಂದಿರ ಕಾಂಪ್ಲೆಕ್ಸ್‌ನ ಬಾಕ್ಸಿಂಗ್ ಅಖಾಡದಲ್ಲಿ ತಿವಾರಿ ಅವರು ತಮ್ಮ ಹೊಸ ಬಾಕ್ಸಿಂಗ್ ವೃತ್ತಿಜೀವನದ ಅತ್ಯಂತ ದೊಡ್ಡ ಪದಕ ಗೆದ್ದರೂ ಯಾವುದೇ ಸಂತಸಗೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಏಕೆಂದರೆ ನನ್ನ ಕೋಚ್​ ಮುಂಬೈನಿಂದ ಗುಜರಾತ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹೆದ್ದಾರಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.


ಕೋಚ್​ಗೆ ಪದಕವನ್ನು ಅರ್ಪಿಸಿದ ನಿಖಿಲ್:


ಇನ್ನು, ತನ್ನ ಮೆಚ್ಚಿನ ಕೋಚ್​ ನಿಧನಕ್ಕೆ ನಿಖಿಲ್​ ಬೇಸರ ವ್ಯಕ್ತಪಡಿಸಿದ್ದು, ನಾನು ಈ ಪದಕವನ್ನು ಗೌರವಿಸುತ್ತೇನೆ. ನನ್ನ ವೃತ್ತಿಜೀವನವನ್ನು ರೂಪಿಸಿದ್ದಕ್ಕಾಗಿ ನನ್ನ ತರಬೇತುದಾರರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ. ನಾನು ಅವರನ್ನು ಕಳೆದುಕೊಂಡಿದ್ದೇನೆ ಎಂದು ದುಬೆ ಹೇಳಿಕೊಂಡಿದ್ದಾರೆ. ಸೋಮವಾರದ ತನ್ನ ಕ್ವಾರ್ಟರ್‌ಫೈನಲ್ ಪಂದ್ಯವನ್ನು ಗೆದ್ದ ನಂತರ , ಸೆಮಿಸ್‌ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್ ಸುಮಿತ್ ಕುಂಡು ವಿರುದ್ಧದ ಪಂದ್ಯಕ್ಕೂ ಮುನ್ನ ದುಬೆ ತನ್ನ ಕೋಚ್‌ಗೆ ಕರೆ ಮಾಡಿದ್ದರು. ಹೀಗಾಗಿ ದುಬೆ ಅವರ ಪಂದ್ಯವನ್ನು ವೀಕ್ಷಿಸಲು ಕೋಚ್ ಮುಂಬೈನಿಂದ ಗಾಂಧಿನಗರಕ್ಕೆ ಬೈಕ್ ನಲ್ಲಿ ಹೊರಟಿದ್ದರು. ಆದರೆ ಅವರು ದಾರಿಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ನಿಧನರಾದರು ಎಂದು ತಿಳಿಸಿದ್ದಾರೆ.


ನಾನು ಚಿನ್ನದ ಪದಕಕ್ಕಾಗಿ ಹೋರಾಡಬೇಕು ಎಂಬುದು ಅವರ ಕನಸಾಗಿತ್ತು. ನಾನು ಸೋಮವಾರ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ನಾನು ಚಿನ್ನದ ಪದಕಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿದೆ. ಅವರು ತುಂಬಾ ಉತ್ಸುಕರಾಗಿದ್ದರು ಮತ್ತು ಅವರು ನನ್ನ ಪಂದ್ಯದ ವೇಳೆಗೆ ಬರುತ್ತಿರುವುದಾಗಿ ಹೇಳಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಅವಘಡ ಸಂಭವಿಸಿದೆ ಎಂದು ದುಬೆ ಭಾವುಕರಾಗಿದ್ದರು.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾದಲ್ಲಿ ಹೆಚ್ಚಿದ ಗಾಯಾಳುಗಳ ಸಮಸ್ಯೆ, ಯಾರು ಔಟ್​? ಯಾರು ಇನ್?


ಅವರು ಬೈಕ್​ ರೈಡ್​ ತುಂಬಾ ಎಂಜಾಯ್​ ಮಾಡುತ್ತಿದ್ದರು:


ಬುಧವಾರ ನಡೆದ ಫೈನಲ್‌ನಲ್ಲಿ 5-0 ಅಂತರದಲ್ಲಿ ಮಿಜೋರಾಂನ ಮಲ್ಸಾವ್ಮ್ಟ್ಲುವಾಂಗಾ ಅವರನ್ನು ಸೋಲಿಸಿ ತಮ್ಮ ಕೋಚ್‌ಗೆ ನೀಡಿದ ಭರವಸೆಯನ್ನು ದುಬೆ ಉಳಿಸಿಕೊಂಡರು. ಅವರ ನಿಧನ ನನಗೆ ದೊಡ್ಡ ಆಘಾತವಾಗಿದೆ. ಒಂದು ಹಂತದಲ್ಲಿ, ನಾನು ಫೈನಲ್‌ನಲ್ಲಿ ಹೇಗೆ ಹೋರಾಡುತ್ತೇನೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಆದರೆ ಅವರು ನನ್ನಿಂದ ಬಯಸಿದ್ದು ಇದನ್ನೇ ಎಂದು ದುಬೆ ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಕೋಚ್​ ತಿವಾರಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಈಗ ನೇರವಾಗಿ ಮುಂಬೈಗೆ ತೆರಳುವುದಾಗಿ ದುಬೆ ಹೇಳಿದ್ದಾರೆ. "ಅವರು ಬೈಕ್​ ರೈಡ್​ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಇದಕ್ಕಾಗಿ ಅವರು ತಮ್ಮ ಬುಲೆಟ್‌ನಲ್ಲಿ ದೂರದ ಪ್ರಯಾಣವನ್ನೂ ಸಹ ಮಾಡುತ್ತಿದ್ದರು. ಅವರು ಈ ಹಿಂದೆ ಅನೇಕ ಬಾರಿ ತಮ್ಮ ಬೈಕಿನಲ್ಲಿ ಗೋವಾಕ್ಕೆ ಹೋಗಿದ್ದರು.


ಇದನ್ನೂ ಓದಿ: T20 World Cup 2022: ಇಲ್ಲಿವರೆಗೂ ಆರಂಭಿಕರಾಗಿ ಕ್ರೀಸ್​ಗಿಳಿದು ಅಬ್ಬರಿಸಿರುವ ಬೆಸ್ಟ್ ಜೋಡಿ ಇವರೇ ಅಂತೆ!


ನಾನು ಬಾಕ್ಸಿಂಗ್​ ಪ್ರಾರಂಭಿಸಿದಾಗ ಅವರು ನನ್ನ ಹಿರಿಯರಾಗಿದ್ದರು, ಅವರು ರಿಂಗ್‌ನಲ್ಲಿ ಮಾತ್ರವಲ್ಲದೆ ನನ್ನ ಜೀವನದಲ್ಲಿಯೂ ನನಗೆ ಸಾಕಷ್ಟು ಬೆಂಬಲ ನೀಡಿದರು, ಏಕೆಂದರೆ ನನ್ನ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಅವರು ಎಂಟು ವರ್ಷಗಳ ಕಾಲ ನನ್ನೊಂದಿಗೆ ಇದ್ದರು. ನಾನು ಅವರ ಬಾಕ್ಸಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದೇನೆ ಎಂದು ದುಬೆ ಹೇಳಿದ್ದಾರೆ.

Published by:shrikrishna bhat
First published: