Thailand Open: ಥಾಯ್ಲೆಂಡ್ ಓಪನ್ ಗೆದ್ದು ಸಾತ್ವಿಕ್-ಚಿರಾಗ್ ಜೋಡಿ; ಇತಿಹಾಸ ಬರೆದ ಭಾರತೀಯರು

ಆರಂಭದಿಂದಲೂ ಬಹಳಟ್ಟು ಜಿದ್ದಾಜಿದ್ದಿನಿಂದ ಸಾಗಿದ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಮೊದಲ ಸೆಟ್ ಗೆದ್ದು ಬೀಗಿತು.

ಸಾತ್ವಿಕ್ ಹಾಗೂ ಚಿರಾಗ್ ಜೋಡಿ

ಸಾತ್ವಿಕ್ ಹಾಗೂ ಚಿರಾಗ್ ಜೋಡಿ

  • News18
  • Last Updated :
  • Share this:
ಬೆಂಗಳೂರು (ಆ. 04): 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದ ಯುವ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ, ಇದೇ ಮೊದಲ ಬಾರಿಗೆ ಥೈಲ್ಯಾಂಡ್ ಓಪನರ್ ಬ್ಯಾಡ್ಮಿಂಟನ್ ಕೂಟದ ಡಬಲ್ಸ್​ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಬಿಡಬ್ಲ್ಯು ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೀನಾದ ಲಿ ಜುನ್ ಹುಯಿ ಹಾಗೂ ಲಿಯೂ ಯೂ ಚೆನ್ ವಿರುದ್ಧ 21-19, 18-21 ಹಾಗೂ 21-18 ಅಂತರದ ಗೆದ್ದು ಇತಿಹಾಸ ಬರೆದಿದ್ದಾರೆ.

ಆರಂಭದಿಂದಲೂ ಬಹಳಟ್ಟು ಜಿದ್ದಾಜಿದ್ದಿನಿಂದ ಸಾಗಿದ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಮೊದಲ ಸೆಟ್ ಗೆದ್ದು ಬೀಗಿತು. ಬಳಿಕ ಎರಡನೇ ಸೆಟ್​​ನಲ್ಲಿ ಹಿನ್ನಡೆಯಾಯಿತಾದರು ಅಂತಿಮ ಸೆಟ್​ನಲ್ಲಿ ಮತ್ತೆ ಕಮ್​ಬ್ಯಾಕ್ ಮಾಡಿ ಥಾಯ್​​ನಲ್ಲಿ ಹೊಸ ಇತಿಹಾಸ ಬರೆದರು.

ವಿಂಡೀಸ್ ವಿರುದ್ಧ 2ನೇ ಟಿ-20; ಭಾರತ ತಂಡದಲ್ಲಿ ಪ್ರಮುಖ 2 ಬದಲಾವಣೆಯ ನಿರೀಕ್ಷೆ

 



ಶನಿವಾರ ನಡೆದ ಸೆಮೀಸ್​ನಲ್ಲಿಸಾತ್ವಿಕ್– ಚಿರಾಗ್‌ಶೆಟ್ಟಿ 22–20, 22–24, 21–9 ಗೇಮ್‌ಗಳಿಂದ ಕೊರಿಯಾದ ಕೊ ಸಂಗ್‌ ಹ್ಯುನ್‌– ಶಿನ್‌ ಬೇಕ್‌ ಚಿಯೊಲ್‌ ಜೋಡಿಯನ್ನು ಮಣಿಸಿ ಫೈನಲ್‌ ಪ್ರವೇಶ ಮಾಡಿತ್ತು.

 

First published: