Maria Sharapova: ಶರಪೋವಾ ಮನೆಗೆ ಹೊಸ ಅತಿಥಿ ಆಗಮನ, ಗಂಡು ಮಗುವಿಗೆ ಜನ್ಮ ನೀಡಿದ ಮಾಜಿ ಟೆನಿಸ್​ ತಾರೆ

ವಿಶ್ವದ ಮಾಜಿ ನಂಬರ್ ಒನ್ ಟೆನಿಸ್​ ಆಟಗಾರ್ತಿ ಹಾಗೂ 5 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮರಿಯ ಶರಪೋವಾ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೌದು, ಮರಿಯ ಶರಪೋವಾ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ.

ಮರಿಯಾ ಶರಪೋವಾ ದಂಪತಿ

ಮರಿಯಾ ಶರಪೋವಾ ದಂಪತಿ

  • Share this:
ವಿಶ್ವದ ಮಾಜಿ ನಂಬರ್ ಒನ್ ಟೆನಿಸ್ (Tennis)​ ಆಟಗಾರ್ತಿ ಹಾಗೂ 5 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮರಿಯ ಶರಪೋವಾ (Maria Sharapova) ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಹೌದು, ಮರಿಯ ಶರಪೋವಾ ಗಂಡು ಮಗುವಿಗೆ (Baby Boy) ಜನ್ಮ ನೀಡಿರುವುದಾಗಿ ಘೋಷಿಸಿದ್ದಾರೆ. ಈ ವಿಷಯವನ್ನು ಮರಿಯ ಶರಪೋವಾ ಸ್ವತಃ ಇನ್ಸ್ಟಾಗ್ರಾಂ ನಲ್ಲಿ (Instagram) ಅಭಿಮಾನಿಗಳ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಮುದ್ದಾದ ಗಂಡು ಮಗುವಿಗೆ ಥಿಯೋಡರ್ (Theodore ) ಎಂದು ಹೆಸರಿಟ್ಟಿದ್ದು, ರಷ್ಯಾದ ಟೆನಿಸ್ ತಾರೆ ಮತ್ತು ಬ್ರಿಟಿಷ್ ಉದ್ಯಮಿ ಅಲೆಕ್ಸಾಂಡರ್ ಗಿಲ್ಕೆಸ್ ದಂಪತಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮರಿಯ ಶರಪೋವಾ ತಮ್ಮ 35 ನೇ ಹುಟ್ಟುಹಬ್ಬದಂದು ಎರಡು ತಿಂಗಳ ಹಿಂದೆ ತನ್ನ ಗರ್ಭಧಾರಣೆಯನ್ನು ಘೋಷಿಸಿದ್ದರು.

ಗಂಡು ಮಗುವಿಗೆ ಜನ್ಮ ನೀಡಿದ ಮರಿಯ ಶರಪೋವಾ:

ಮಾಜಿ ಟೆನಿಸ್​ ತಾರೆ ಮರಿಯ ಶರಪೋವಾ ತಾಯಿ ಆಗಿರುವ ಸಂತಸದಲ್ಲಿದ್ದಾರೆ ಹೌದು,  5 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮರಿಯ ಶರಪೋವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿಯನ್ನು ಅವರು ತಮ್ಮ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ  ಮೂಲಕ ಬಹಿರಂಗಪಡಿಸಿದ್ದಾರೆ. ಗಂಡು ಮಗುವಿಗೆ ಥಿಯೋಡರ್ ಎಂದು ಹೆಸರಿಟ್ಟಿದ್ದಾಗಿ ಬರೆದುಕೊಂಡಿದ್ದಾರೆ. ಇನ್ನು, ಶರಪೋವಾ ಅವರ ಅಭಿಮಾನಿಗಳು ಹಾಗೂ ಗಣ್ಯರು ಅವರ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ.






ಎರಡು ವರ್ಷದ ಡೇಟಿಂಗ್​ ನಲ್ಲಿದ್ದ ಜೋಡಿ:

ಇನ್ನು, ಮರಿಯ ಶರಪೋವಾ ಮತ್ತು ಪ್ರಿಯಕರ ಬ್ರಿಟಿಷ್ ಉದ್ಯಮಿ ಅಲೆಕ್ಸಾಂಡರ್ ಗಿಲ್ಕೆಸ್ ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2020 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಶರಪೋವಾ ಈ ವರ್ಷದ ಏಪ್ರಿಲ್‌ನಲ್ಲಿ ತಾನು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದರು. ಶುಕ್ರವಾರ ಜನಿಸಿದ ಗಂಡು ಮಗುವಿಗೆ ಜನ್ಮ ನೀಡಿದ್ದು ಥಿಯೋಡರ್ ಎಂದು ಹೆಸರಿಡಲಾಗಿದೆ ಎಂದು ಹೇಳಿಕೊಂಡಿದ್ದು, ಶರಪೋವಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ನಮ್ಮ ಪುಟ್ಟ ಕುಟುಂಬಕ್ಕೆ ಒಂದು ಉತ್ತಮ ಬಹುಮಾನದ ಉಡುಗೊರೆ ಬಂದಿದೆ' ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Unbreakable Records: ಟೆಸ್ಟ್ ಕ್ರಿಕೆಟ್‌ನಲ್ಲಿ ಮುರಿಯಲಾಗದ 10 ದಾಖಲೆಗಳು, 5 ಗಂಟೆ 53 ನಿಮಿಷದ ಟೆಸ್ಟ್ ಪಂದ್ಯದ ಬಗ್ಗೆ ಗೊತ್ತಾ?

ಮರಿಯ ಶರಪೋವಾ ವೃತ್ತಿ ಜೀವನದ ಸಾಧನೆ:

ಮರಿಯ ಶರಪೋವಾ ಫೆಬ್ರವರಿ 2020ರಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತರಾದರು. ಶರಪೋವಾ ತಮ್ಮ ವೃತ್ತಿಜೀವನದಲ್ಲಿ ಗ್ರ್ಯಾನ್ ಸ್ಲಾಮ್ ಪೂರ್ಣಗೊಳಿಸಿದ ಆಟಗಾರ್ತಿ. ಶರಪೋವಾ ಎರಡು ಬಾರಿ ರೋಲ್ಯಾಂಡ್ ಗ್ಯಾರೋಸ್ ಚಾಂಪಿಯನ್ ಆಗಿದ್ದಾರೆ. ಅವರು ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಯುಎಸ್ ಓಪನ್ ಗೆದ್ದಿದ್ದಾರೆ. ಅಲ್ಲದೆ ಶರಪೋವಾ, ಎಲ್ಲಾ 4 ಪ್ರಮುಖ ಸಿಂಗಲ್ಸ್ ಕಿರೀಟಗಳನ್ನು ಧರಿಸುವ ಮೂಲಕ ಗ್ರ್ಯಾಂಡ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಕೇವಲ 10 ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ: Virat Kohli: ಕೊಹ್ಲಿಯನ್ನು ಬಲಿಪಶು ಮಾಡಬೇಡಿ, ವಿರಾಟ್ ಪರ ಬ್ಯಾಟ್​ ಬೀಸಿದ ಮಾಜಿ ಪಾಕ್ ನಾಯಕ

2004 ರಲ್ಲಿ, ಶರಪೋವಾ ತಮ್ಮ 17ನೇ ವಯಸ್ಸಿನಲ್ಲಿ ವಿಂಬಲ್ಡನ್‌ನಲ್ಲಿ ತನ್ನ ಮೊದಲ ಪ್ರಮುಖ ಪ್ರಶಸ್ತಿಯನ್ನು ಗೆದ್ದರು ಮತ್ತು ನಂತರ 2006 ಯುಎಸ್ ಓಪನ್, 2008 ಆಸ್ಟ್ರೇಲಿಯನ್ ಓಪನ್ ಮತ್ತು 2012 ಮತ್ತು 2014 ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿದರು. ಅವರು 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ವಶಪಡಿಸಿಕೊಂಡರು, ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಸೋತರು. ಇದಲ್ಲದೇ ಕೆಲ ವರ್ಷಗಳ ವರೆಗೆ ಟೆನಿಸ್​ ಲೋಕದ ರಾಣಿಯಾಗಿ ವಿಶ್ವದ ನಂಬರ್ 1 ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದರು.
Published by:shrikrishna bhat
First published: