Roger Federer Retirement : ನಿವೃತ್ತಿ ಘೋಷಿಸಿದ ಟೆನಿಸ್‌ ಲೋಕದ ದಂತಕಥೆ ರೋಜರ್ ಫೆಡರರ್

Roger Federer: ಟೆನಿಸ್ ದಿಗ್ಗಜ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ (Roger Federer) ಟೆನಿಸ್ ಗೆ ವಿದಾಯ ಹೇಳಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್, ಮುಂದಿನ ವಾರ ಪ್ರಾರಂಭವಾಗುವ ರಾಡ್ ಲೇವರ್ ಕಪ್ (Rod Laver Cup) ಟೆನಿಸ್ ಪಂದ್ಯಾವಳಿಯು ತಮ್ಮ ವೃತ್ತಿಜೀವನದ ಕೊನೆಯ ಟೆನಿಸ್ ಪಂದ್ಯಾವಳಿಯಾಗಿದೆ ಎಂದು ಹೇಳಿದ್ದಾರೆ.

ರೋಜರ್ ಫೆಡರರ್

ರೋಜರ್ ಫೆಡರರ್

  • Share this:
ಟೆನಿಸ್ (Tennis) ಅಭಿಮಾನಿಗಳಿಗೆ ಈ ಸುದ್ದಿ ಕೇಳಿಬರುತ್ತಿದ್ದಂತೆ ಒಮ್ಮೆ ಬೇಸರವಾಗುವುದಂತೂ ಖಂಡಿತ. ಟೆನಿಸ್ ದಿಗ್ಗಜ ಸ್ವಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ (Roger Federer) ಟೆನಿಸ್ ಗೆ ವಿದಾಯ ಹೇಳಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್, ಮುಂದಿನ ವಾರ ಪ್ರಾರಂಭವಾಗುವ ರಾಡ್ ಲೇವರ್ ಕಪ್ (Rod Laver Cup) ಟೆನಿಸ್ ಪಂದ್ಯಾವಳಿಯು ತಮ್ಮ ವೃತ್ತಿಜೀವನದ ಕೊನೆಯ ಟೆನಿಸ್ ಪಂದ್ಯಾವಳಿಯಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಅವರು ಸುದೀರ್ಘವಾದ ಪತ್ರವನ್ನು ಬರೆದಿದ್ದು, ಟ್ವಿಟರ್​ನಲ್ಲಿ ಅದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಟೆನಿಸ್​ ಅಂಗಳದಲ್ಲಿ ಮಿಂಚಿನಂತೆ ಆಡುತ್ತಿದ್ದ ಆಟಗಾರನನ್ನು ಮಿಸ್​ ಮಾಡಿಕೊಳ್ಳುವುದಾಗಿ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ಟೆನಿಸ್​ಗೆ ಗುಡ್​ಬೈ ಹೇಳಿದ ಲೆಂಡ್​ ಆಟಗಾರ:

ರೋಜರ್ ಫೆಡರರ್ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ಪ್ರಸ್ತುತ ನಾದವ್ ಮತ್ತು ಜೊಕೊವಿಕ್ ನಂತರ ಹೆಚ್ಚು ಪ್ರಶಸ್ತಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಹಲವು ವರ್ಷಗಳ ಕಾಲ ವಿಂಬಲ್ಡನ್‌ನ ಗ್ರಾಸ್ ಕೋರ್ಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಇಂತಹ ಅದ್ಭುತ ಆಟಗಾರ ಇಂದು ತಮ್ಮ ಟೆನಿಸ್​ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡುವ ಮೂಲಕ ತಿಳಿಸಿದ್ದಾರೆ.





ಅಭಿಮಾನಿಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡ ಫೆಡರರ್:

ನನ್ನ ಟೆನಿಸ್ ಕುಟುಂಬಕ್ಕೆ ಮತ್ತು ಅದರಾಚೆಗೆ ಇರುವವರಿಗೆ ಧನ್ಯವಾದಗಳು. 24 ವರ್ಷಗಳಲ್ಲಿ ಟೆನಿಸ್ ನನಗೆ ನೀಡಿದ ಎಲ್ಲಾ ಉಡುಗೊರೆಗಳಲ್ಲಿ, ನಿಸ್ಸಂದೇಹವಾಗಿ, ನಾನು ದಾರಿಯುದ್ದಕ್ಕೂ ಭೇಟಿಯಾದ ಜನರು ನನ್ನ ಸ್ನೇಹಿತರು, ನನ್ನ ಸ್ಪರ್ಧಿಗಳು ಮತ್ತು ಕ್ರೀಡೆಗೆ ಅದರ ಜೀವನವನ್ನು ನೀಡುವ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂದು, ನಾನು ನಿಮ್ಮೆಲ್ಲರೊಂದಿಗೆ ಕೆಲವು ಸುದ್ದಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.





ನಿಮ್ಮಲ್ಲಿ ಅನೇಕರಿಗೆ ತಿಳಿದಿರುವಂತೆ, ಕಳೆದ ಮೂರು ವರ್ಷಗಳಿಂದ ನಾನು ಅನೇಕ ಗಾಯಗಳು ಮತ್ತು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದೇನೆ. ನಾನು ಸಂಪೂರ್ಣ ಸ್ಪರ್ಧಾತ್ಮಕ ರೂಪಕ್ಕೆ ಮರಳಲು ಶ್ರಮಿಸಿದ್ದೇನೆ. ಆದರೆ ನನ್ನ ದೇಹದ ಸಾಮರ್ಥ್ಯಗಳು ಮತ್ತು ಮಿತಿಗಳು ನನಗೆ ತಿಳಿದಿವೆ ಮತ್ತು ಇತ್ತೀಚೆಗೆ ನನಗೆ ಅದರ ಸಂದೇಶವು ಸ್ಪಷ್ಟವಾಗಿದೆ. ನನಗೆ 41 ವರ್ಷ. ನಾನು 24 ವರ್ಷಗಳಲ್ಲಿ 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ನಾನು ಕನಸು ಕಂಡಿದ್ದಕ್ಕಿಂತ ಟೆನಿಸ್ ನನ್ನನ್ನು ಹೆಚ್ಚು ಉದಾರವಾಗಿ ನಡೆಸಿಕೊಂಡಿದೆ ಮತ್ತು ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಾಗ ನಾನು ಗುರುತಿಸಬೇಕು ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟ; ಸ್ಟಾರ್​ ಬ್ಯಾಟ್ಸ್​ಮನ್ ಔಟ್, ​ಬೆಂಕಿ ಬೌಲರ್​ ಇನ್

ಫೆಡರರ್ ಗ್ರ್ಯಾಂಡ್ ಸ್ಲಾಮ್ ಖಜಾನೆಗಳು

ವಿಂಬಲ್ಡನ್ - 8
ಆಸ್ಟ್ರೇಲಿಯನ್ ಓಪನ್ - 6
ಅಮೇರಿಕನ್ ಓಪನ್ - 5
ಫ್ರೆಂಚ್ ಓಪನ್ - 1

ಟೆನಿಸ್​ ಲೋಕದ ಕಿಂಗ್​:

1998 ರ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್ ವೃತ್ತಿ ಆರಂಭಿಸಿದ ಫೆಡರರ್  2003ರಲ್ಲಿ 21ನೇ ವಯಸ್ಸಿನಲ್ಲಿ ಚೊಚ್ಚಲ ಗ್ರ್ಯಾನ್ ಸ್ಲಾಮ್ ಗೆದ್ದಿದ್ದರು. ಅಲ್ಲದೇ 14ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಮೂಲಕ ಪೀಟ್ ಸಾಂಪ್ರಾಸ್ ಅತಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿದ ದಾಖಲೆಯನ್ನು ಸರಿಗಟ್ಟಿದರು. ಇದಲ್ಲದೆ, ಫೆಡರರ್ 2018 ರಲ್ಲಿ 20 ನೇ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಮೊದಲ ಪುರುಷ ಆಟಗಾರರಾದರು. ನಡಾಲ್ 22 ಪ್ರಶಸ್ತಿಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನೊವಾಕ್ ಜೊಕೊವಿಕ್ 21 ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಫೆಡರರ್ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Team India: ಅಂದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಕ್ರಿಕೆಟಿಗ, ಇಂದು ದುಡ್ಡಿಲ್ಲದೇ ಎಮ್ಮೆ ಮೇಯಿಸುತ್ತಿದ್ದಾರೆ!

ಫೆಡರರ್ 310 ವಾರಗಳ ಕಾಲ ನಂಬರ್ ಒನ್ ಸ್ಥಾನದಲ್ಲಿದ್ದು, ದಾಖಲೆ ಬರೆದಿದ್ದರು. ಫೆಡರರ್ ಸತತ 237 ವಾರಗಳ ಕಾಲ ನಂಬರ್ ಒನ್ ಆಗಿದ್ದರು. ಈ ದಾಖಲೆಯನ್ನು ಟೆನಿಸ್​ ಅಂಗಳದಲ್ಲಿ ಈವರೆಗೂ ಯಾರ ಕೈಯಲ್ಲಿಯೂ ಮುರಿಯಲು ಸಾಧ್ಯವಾಗಲಿಲ್ಲ.
Published by:shrikrishna bhat
First published: