CM Bommai: ಸಿಎಂ ಬೊಮ್ಮಾಯಿ ಸನ್ಮಾನ ತಿರಸ್ಕರಿಸಿದ ಖ್ಯಾತ ಟೆನಿಸ್​ ಆಟಗಾರ

ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

CM Bommai: ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ತಡವಾಗಿ ಆಗಮಿಸಿದ ಕಾರಣ ಟೆನಿಸ್​ ದಿಗ್ಗಜ ಆಟಗಾರ ಜಾರ್ನ್ ಬೋರ್ಗ್ ಅವರು ತಮ್ಮ ಸನ್ಮಾನವನ್ನು ನಯವಾಗಿ ತಿರಸ್ಕರಿಸಿದ ಘಟನೆ ನಡೆದಿದೆ.

  • Share this:

ಭಾರತೀಯ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಸರಿಯಾದ ಸಮಯಕ್ಕೆ ಕಾರ್ಯಕ್ರಮಗಳಿಗೆ ಹಾಜಾರಾಗುವುದು ಕಡಿಮೆ ಎನ್ನಬಹುದು. ಆದರೆ ಇದೇ ರೀತಿ ಇದೀಗ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ (CM Basavaraj Bommai ) ಅವರು ಒಂದು ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ಸ್ವೀಡಿಷ್ (Swedish ) ಟೆನಿಸ್ ದಂತಕಥೆ ಜಾರ್ನ್ ಬೋರ್ಗ್ (Björn Borgಅವರು ಅಭಿನಂದನೆಯನ್ನು ನಯವಾಗಿ ನಿರಾಕರಿಸಿದ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (Karnataka State Lawn Tennis Association) ​​11 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತ ಮತ್ತು ಭಾರತದ ಮಾಜಿ ಸ್ಟಾರ್ ವಿಜಯ್ ಅಮೃತರಾಜ್ ಅವರನ್ನು ಸನ್ಮಾನಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಸನ್ಮಾನ ನಿರಾಕರಿಸಿದ ಟೆನಿಸ್ ಆಟಗಾರ:


ಹೌದು, ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಅವರು ತಡವಾಗಿ ಆಗಮಿಸಿದ ಕಾರಣ ಟೆನಿಸ್​ ದಿಗ್ಗಜ ಆಟಗಾರ ಜಾರ್ನ್ ಬೋರ್ಗ್ ಅವರು ತಮ್ಮ ಸನ್ಮಾನವನ್ನು ನಯವಾಗಿ ತಿರಸ್ಕರಿಸಿದ ಘಟನೆ ನಡೆದಿದೆ. ಮೊದಲಿಗೆ 9.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಕೊನೆ ಗಳಿಗೆಯಲ್ಲಿ 10.15ಕ್ಕೆ ಮುಂದೂಡಲಾಯಿತು. ಆದರೆ ಜಾರ್ನ್ ಬೋರ್ಗ್ ಅವರ ಮಗ ಲಿಯೋ ಸಹ ಟೆನಿಸ್​ ಆಟಗಾರನಾಗಿದ್ದು, ಅವರ ಪಂದ್ಯವೂ ಸಹ ಬೆಳಿಗ್ಗೆ 11 ಗಂಟೆ ನಡೆಯಲಿತ್ತು. ಆದರೆ ಮಗನ ಪಂದ್ಯವನ್ನು ಮಿಸ್​ ಮಾಡಿಕೊಳ್ಳಲು ಇಚ್ಚಿಸದ ಜಾರ್ನ್ ಬೋರ್ಗ್ ಅವರು ಬೊಮ್ಮಾಯಿ ತಡವಾಗಿ ಬಂದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಸಿಎಂ ಅವರು ಅಂತಿಮವಾಗಿ ಕಾರ್ಯಕ್ರಮಕ್ಕೆ 11.15 ರ ಸುಮಾರಿಗೆ ಆಗಮಿಸಿದ್ದರು.


ಈ ಕುರಿತು ಸ್ಪಷ್ಟನೆ ನೀಡಿರುವ ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು, ‘ಮುಖ್ಯಮಂತ್ರಿ ಅವರ ಇತರ ಕೆಲವು ಬದ್ಧತೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ವಿಳಂಬವಾಯಿತು‘ ಎಂದು ಹೇಳಿದ್ದಾರೆ. ಆದರೆ ಜಾರ್ನ್ ಬೋರ್ಗ್ ತನ್ನ ಮಗನ ಆಟವನ್ನು vಈಕ್ಷಿಸುವ ಸಲುವಾಗಿ ಅಭಿನಂದನಾ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ: Virat Kohli: RCB ಎಂದು ಕೂಗಿದ ಫ್ಯಾನ್ಸ್​​ಗೆ ಕೊಹ್ಲಿ ಖಡಕ್ ಉತ್ತರ! ವಿರಾಟ್​ ನಡೆಗೆ ಅಭಿಮಾನಿಗಳು ಫಿದಾ


ಇವರುಗಳು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ:


ಆದರೆ ನಂತರ ಮಾಧ್ಯಮ ಸಂವಾಧದಲ್ಲಿ ಮಾತನಾಡಿದ ಜಾರ್ನ್ ಬೋರ್ಗ್, ‘ಟೆನಿಸ್​ ಲೋಕದ ದಿಗ್ಗಜರಾದ ರೋಜರ್ ಫೆಡರರ್‌, ರಫೆಲ್ ನಡಾಲ್‌ ಮತ್ತು ನೊವಾಕ್ ಜೊಕೊವಿಕ್​ ತಮ್ಮ ಆತ್ಮಬಲದಿಂದಾಗಿ ಟೆನಿಸ್​ ಲೋಕದಲ್ಲಿ ಕಳೆದ ಒಂದು ದಶಕದಿಂದ ಉತ್ತಮ ಆಟವಾಡಿಕೊಂಡು ಬರುತ್ತಿದ್ದಾರೆ. ಈ ಮೂವರು ಆಟಗಾರರು ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ ಈ ಯುವ ಪೀಳಿಗೆಯ ಆಟಗಾರರನ್ನು ಬೆಳೆಸುವ ಕೆಲಸವನ್ನು ಮಾಧ್ಯಮ ಲೋಕ ಮಾಡಬೇಕು. ಜೊತೆಗೆ ಅನೇಕ ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು. ಟೆನಿಸ್​ ಅಂಗಳದ ಕನಸನ್ನು ದೊಡ್ಡದಾಗಿ ನೋಡಿ‘ ಎಂದಿದ್ದಾರೆ.
ಇನ್ನು, ಟೆನಿಸ್​ ಲೋಕದಿಂದ ಫೆಡರರ್‌ ಸದ್ಯ ನಿವೃತ್ತರಾಗಿದ್ದಾರೆ. ಅಲ್ಲದೇ ಜೊಕೊವಿಚ್‌ ಒಂದೆರಡು ಗ್ರ್ಯಾನ್‌ಸ್ಲಾಮ್ ಗೆಲ್ಲಬಹುದು. ನಡಾಲ್ ಸಹ ಇನ್ನೆಷ್ಟು ವರ್ಷ ಆಡುತ್ತಾರೊ ಎನ್ನುವುದು ತಿಳಿದಿಲ್ಲಾದರೆ ಇವರುಗಳು ನಮ್ಮನ್ನು ಬರೋಬ್ಬರಿ 15 ವರ್ಷಕ್ಕೂ ಹೆಚ್ಚಿನ ಕಾಲ ತಮ್ಮಅದ್ಭುತ ಆಟದಿಂದ ರಂಜಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಟೆನಿಸ್​ ದಿಗ್ಗಜ ಜಾರ್ನ್ ಬೋರ್ಗ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 11 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಅಲ್ಲದೇ ಟೆನಿಸ್​ ಲೋಕದಿಮದ ನಿವೃತ್ತಿ ಹೊಂದಿದರೂ ಸಹ ವಿಶ್ವ ರ‍್ಯಾಂಕಿಂಗ್‌ನಲ್ಲೂ ಉತ್ತಮ ಸ್ಥಾನದಲ್ಲಿದ್ದಾರೆ.

Published by:shrikrishna bhat
First published: