PKL 8: ತೆಲುಗು ಟೈಟಾನ್ಸ್​ಗೆ 8ನೇ ಪಂದ್ಯದಲ್ಲೂ ಸಿಗದ ಜಯ; ಪಟ್ನಾ ಪೈರೇಟ್ಸ್ ಅಗ್ರಸ್ಥಾನಕ್ಕೆ

Pro Kabaddi League 2022: ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 40-22 ಅಂಕಗಳಿಂದ ಗೆಲುವು ಪಡೆದರೆ, ಯು ಮುಂಬಾ ತಂಡವನ್ನ ಪಟ್ನಾ ಪೈರೇಟ್ಸ್ 43-23 ಅಂಕಗಳಿಂದ ಸೋಲಿಸಿತು.

ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್

ತೆಲುಗು ಟೈಟಾನ್ಸ್ ಮತ್ತು ಗುಜರಾತ್ ಜೈಂಟ್ಸ್

  • News18
  • Last Updated :
  • Share this:
    ಬೆಂಗಳೂರು, ಜ. 11: ಬಾಹುಬಲಿ ಸಿದ್ಧಾರ್ಥ್ ದೇಸಾಯಿ ಇಲ್ಲದ ತೆಲುಗು ಟೈಟಾನ್ಸ್ ತಂಡದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಇಂದು ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಎದುರು ತೆಲುಗು ಟೈಟಾನ್ಸ್ 22-40 ಅಂಕಗಳ ಭಾರೀ ಅಂತರದಿಂದ ಸೋಲುಂಡಿತು. ರಾಕೇಶ್ ಅವರ ಅಮೋಘ ಆಟದ ನೆರವಿನಿಂದ ಗೆದ್ದ ಗುಜರಾತ್ ಜೈಂಟ್ಸ್ ತಂಡ ಅಂಕ ಪಟ್ಟಿಯಲ್ಲಿ 11ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಂಪ್ ಮಾಡಿದೆ.

    ಗುಜರಾತ್ ಗೆಲುವಿಗೆ ರಾಕೇಶ್ ಅವರ ಆಟದ ಜೊತೆಗೆ ಮಹೇಂದ್ರ ರಾಜಪೂತ್, ಕರ್ನಾಟಕದ ಕೆ ರತನ್ ಅವರ ಮಿಂಚಿನ ದಾಳಿಗಳೂ ಕಾರಣವಾದವು. ಹಾಗೆಯೇ, ಗುಜರಾತ್​ನ ಡಿಫೆನ್ಸ್ ಕೂಡ ಬಲಿಷ್ಠವಾಗಿ ತೋರಿತು.

    ತೆಲುಗು ಟೈಟಾನ್ಸ್ ತಂಡದ ರೇಡಿಂಗ್ ರಜನೀಶ್ ಅವರೊಬ್ಬರ ಮೇಲೆಯೇ ಅವಲಂಬಿತವಾಯಿತು. ಆದರ್ಶ್ ಮತ್ತು ಆಕಾಶ್ ಚೌಧರಿ ಅವರು ಡಿಫೆನ್ಸ್​ನಲ್ಲಿ ಬಲಿಷ್ಠವಾಗಿದ್ದರೂ ಗುಜರಾತ್ ತಂಡದ ದಾಳಿಯನ್ನ ಸಮರ್ಥವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗಲಿಲ್ಲ.

    ಪಟ್ನಾ ಪೈರೇಟ್ಸ್ ವಿರುದ್ಧ ಸೋತ ಯು ಮುಂಬಾ:

    ಮೂರು ಬಾರಿಯ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ತಂಡ 43-23 ಅಂಕಗಳಿಂದ ಯು ಮುಂಬಾ ತಂಡವನ್ನ ಮಣಿಸಿ ಅಂಕ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿತು. 20 ಅಂಕಗಳ ಭಾರೀ ಅಂತರದ ಗೆಲುವು ಕಂಡರೂ ಪಟ್ನಾ ಪೈರೇಟ್ಸ್ ತಂಡದಲ್ಲಿ ಯಾರೊಬ್ಬರೂ ಸೂಪರ್ 10 ಗಳಿಸಲಿಲ್ಲ. ರೇಡಿಂಗ್​ನ್ಲಲಿ ಪ್ರಶಾಂತ್ ಕುಮಾರ್, ಸಚಿನ್ ತಲಾ 7 ಅಂಕಗಳನ್ನ ಗಳಿಸಿದರೆ ಮೋನು 6 ಅಂಕ ಗಿಟ್ಟಿಸಿದರು.

    ಇದನ್ನೂ ಓದಿ: IND vs SA: ಬೆಂಕಿಯುಗುಳಿದ ರಬಡ; ಹೆಬ್ಬಂಡೆಯಾದ ಕೊಹ್ಲಿ; ಮೊದಲ ದಿನದ ಹೈಲೈಟ್

    ಪಟ್ನಾದ ಡಿಫೆಂಡರ್ ನೀರಜ್ ಕುಮಾರ್ 8 ಅಂಕ ಗಳಿಸಿ ಮಿಂಚಿದರು. ಇರಾನಿ ಆಟಗಾರ ಮೊಹಮ್ಮದ್ ರೆಜಾ ಚಿಯಾನೆ 5 ಅಂಕ ಗಳಿಸಿದರು.

    ಯು ಮುಂಬಾ ಪರ ಸ್ಟಾರ್ ರೇಡರ್ ಅಭಿಷೇಕ್ ಸಿಂಗ್ ಅವರೊಬ್ಬರೇ ತುಸು ಯಶಸ್ಸು ಕಂಡಿದ್ದು. ರಿಂಕು ಡಿಫೆನ್ಸ್​ನಲ್ಲಿ ಮಿಂಚಿದರು. ಉಳಿದಂತೆ ಯು ಮುಂಬಾ ಆಟಗಾರರು ನಿರಾಸೆಗೊಳಿಸಿದರು.

    ನಾಳೆಯ ಪಂದ್ಯಗಳು:

    1) ಹರ್ಯಾಣ ಸ್ಟೀಲರ್ಸ್ vs ಯು ಪಿ ಯೋದ್ಧಾ, ಸಮಯ ಸಂಜೆ 7:30ಕ್ಕೆ

    2) ದಬಂಗ್ ಡೆಲ್ಲಿ vs ಬೆಂಗಳೂರು ಬುಲ್ಸ್, ಸಮಯ ರಾತ್ರಿ 8:30ಕ್ಕೆ

    ಇದನ್ನೂ ಓದಿ: PKL 8: ಯೋದ್ಧಾ ಎದುರು ನಡೆಯದ ಪವನ್ ಆಟ, ಬೆಂಗಳೂರಿಗೆ ಭಾರೀ ಸೋಲಿನ ಶಾಕ್

    ದಬಂಗ್ ಡೆಲ್ಲಿ ಮತ್ತು ಬೆಂಗಳೂರು ಬುಲ್ಸ್ ನಡುವಿನ ಪಂದ್ಯ ನವೀನ್ ‘ಎಕ್ಸ್​ಪ್ರೆಸ್’ ಕುಮಾರ್ ವರ್ಸಸ್ ಹೈ ಫ್ಲಯರ್ ಪವನ್ ಶೆರಾವತ್ ನಡುವಿನ ಯುದ್ಧವಾಗಿದೆ. ನಿನ್ನೆ ದಬಂಗ್ ಡೆಲ್ಲಿ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ನವೀನ್ ಅವರನ್ನ ಮೀರಿಸುವಂತೆ ಅರ್ಜುನ್ ದೇಶವಾಲ್ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದು. ನಾಳೆ ಬೆಂಗಳೂರು ಬುಲ್ಸ್ ತಂಡದ ಪವನ್ ಶೆರಾವತ್ ಅವರಿಂದಲೂ ಅಂಥದ್ದೇ ಪ್ರದರ್ಶನದ ನಿರೀಕ್ಷೆ ಇದೆ.

    ಅಂಕ ಪಟ್ಟಿ (8 ಸುತ್ತುಗಳ ಬಳಿಕ):

    1) ಪಟ್ನಾ ಪೈರೇಟ್ಸ್: 34 ಅಂಕ
    2) ದಬಂಗ್ ಡೆಲ್ಲಿ: 32 ಅಂಕ
    3) ಬೆಂಗಳೂರು ಬುಲ್ಸ್: 28 ಅಂಕ
    4) ತಮಿಳ್ ತಲೈವಾಸ್: 27 ಅಂಕ
    5) ಯು ಮುಂಬಾ: 25 ಅಂಕ
    6) ಜೈಪುರ್ ಪಿಂಕ್ ಪ್ಯಾಂಥರ್ಸ್: 23 ಅಂಕ
    7) ಗುಜರಾತ್ ಜೈಂಟ್ಸ್: 20 ಅಂಕ
    8) ಯು ಪಿ ಯೋದ್ಧಾ: 20 ಅಂಕ
    9) ಹರ್ಯಾಣ ಸ್ಟೀಲರ್ಸ್: 20 ಅಂಕ
    10) ಬೆಂಗಾಲ್ ವಾರಿಯರ್ಸ್: 17 ಅಂಕ
    11) ಪುಣೇರಿ ಪಲ್ಟನ್: 16 ಅಂಕ
    12) ತೆಲುಗು ಟೈಟಾನ್ಸ್: 10 ಅಂಕ
    Published by:Vijayasarthy SN
    First published: