News18 India World Cup 2019

ಏಷ್ಯನ್ ಗೇಮ್ಸ್ 2018: ಶಾಟ್ ಪುಟ್​ನಲ್ಲಿ ಚಿನ್ನ; 7ನೇ ದಿನ 4 ಪದಕ ಬಾಜಿಕೊಂಡ ಭಾರತ

news18
Updated:August 25, 2018, 8:16 PM IST
ಏಷ್ಯನ್ ಗೇಮ್ಸ್ 2018: ಶಾಟ್ ಪುಟ್​ನಲ್ಲಿ ಚಿನ್ನ; 7ನೇ ದಿನ 4 ಪದಕ ಬಾಜಿಕೊಂಡ ಭಾರತ
news18
Updated: August 25, 2018, 8:16 PM IST
ನ್ಯೂಸ್ 18 ಕನ್ನಡ

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್​ನ 7 ದಿನದಾಟದಲ್ಲಿ ಭಾರತ 1 ಚಿನ್ನದ ಪದಕ ಸೇರಿದಂತೆ 3 ಕಂಚಿನ ಪದಕವನ್ನ ತನ್ನದಾಗಿಸಿಕೊಂಡಿದೆ. ಪುರುಷರ ಶಾಟ್ ಪುಟ್ ಎಸೆತದಲ್ಲಿ ತಾಜಿಂದೇಪಾಲ್ ಸಿಂಗ್ ಟೂರ್ ದಾಖಲೆಯ ಎಸೆತದ ಜೊತೆಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 20.75 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ನೂತನ ದಾಖಲೆ ಬರೆದಿದ್ದಾರೆ. ತನ್ನ 5ನೇ ಪ್ರಯತ್ನದಲ್ಲಿ ತೆಜೀಂದರ್ ಅವರು ಗೆದ್ದು ಚಿನ್ನಕ್ಕೆ ಮುತ್ತಿಕ್ಕಿದರು.

ದಿನದ ಆರಂಭದಲ್ಲಿ ಸ್ಕ್ವಾಶ್ ತಾರೆ ದೀಪಿಕಾ ಪಲ್ಲಿಕಲ್  ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್​​ನಲ್ಲಿ ಸೋಲುವ ಮೂಲಕ  ಕಂಚಿನ ಪದಕಕ್ಕೆ ಕೊರಳೊಡ್ಡಿದರು. ನಂತರದಲ್ಲಿ ಜೋಶ್ನಾ ಚಿನ್ನಪ್ಪ ಕೂಡ ಕಂಚಿಗೆ ತೃಪ್ತಿಪಟ್ಟರು. ಪುರುಷರ ಸಿಂಗಲ್ಸ್ ಸ್ಕ್ವಾಷ್ ಫೈಟ್​ನಲ್ಲೂ ಸೌರವ್ ಘೋಷಾಲ್ ಹಾಂಕಾಂಗ್ ಆಟಗಾರ ಔ ಚುನ್ ಮಿಂಗ್ ಲಿಯೋ ವಿರುದ್ಧ 2-3ರ ಅಂತರದಲ್ಲಿ ಸೋಲನ್ನ ಅನುಭವಿಸಿದರು. ಪರಿಣಾಮ ಸೌರವ್ ಘೋಷಾಲ್ ಕೂಡ ಕಂಚಿನ ಪದಕಕ್ಕೆ ಕೊರಳೊಡ್ಡುವಂತಾಯಿತು. ಈ ಮೂಲಕ ಭಾರತ 7ನೇ ದಿನದಲ್ಲಿ ಮೂರು ಕಂಚಿನ ಪದಕಗಳನ್ನ ಸ್ಕ್ವಾಷ್​​ನಲ್ಲಿ ಗೆದ್ದುಕೊಂಡಿದೆ. ಪುರುಷರ ಬ್ಯಾಡ್ಮಿಂಟನ್ ನಂತೆ ವೆಯ್ಟ್​​ಲಿಫ್ಟಿಂಗ್​​ನಲ್ಲಿ ಭಾರತದ ಕ್ರೀಡಾಪಟುಗಳು ಒಂದೂ ಪದಕ ಗೆಲ್ಲದೆ ಅಭಿಯಾನ ಮುಗಿಸಿ ನಿರಾಸೆ ಮೂಡಿಸಿದರು.

ಇನ್ನು ಬ್ಯಾಡ್ಮಿಂಟನ್​​ನ ಮಹಿಳೆಯರ ಸಿಂಗಲ್ಸ್​ನಲ್ಲಿ ಭಾರತದ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. 21-6, 21-14 ಅಂತರದಿಂದ ಫಿಟ್ರಿಯಾನಿ ವಿರುದ್ಧ ನೆಹ್ವಾಲ್ ಜಯ ಗಳಿಸಿದರು. ಜೊತೆಗೆ ಪಿ. ವಿ ಸಿಂಧು ಕೂಡ ಕ್ವಾರ್ಟರ್ ಫೈನಲ್​​ಗೆ ಪ್ರವೇಶ ಪಡೆದಿದ್ದಾರೆ. ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕ ಜಂಗ್ ವಿರುದ್ಧ ಸಿಂಧು ಅವರು 21-12, 21-15 ಅಂತರದಲ್ಲಿ ಜಯ ಸಾಧಿಸಿದರು.

ಒಟ್ಟಾರೆ ಭಾರತ 7 ಚಿನ್ನದ ಪದಕ,  5 ಬೆಳ್ಳಿ ಹಾಗೂ 17 ಕಂಚಿನ ಪದಕಗಳನ್ನ ಗೆದ್ದಿದ್ದು, ಒಟ್ಟಾರೆ 29 ಪದಕಗಳೊಂದಿಗೆ 8 ಸ್ಥಾನಕ್ಕೆ ಕುಸಿದಿದೆ.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...