ಪದಾರ್ಪಣೆ ಪಂದ್ಯದಲ್ಲೇ ಶಾ ಶತಕದ ಮಿಂಚು: ದಾಖಲೆಗಳ ಸರಮಾಲೆ ತೊಟ್ಟ ಜ್ಯೂ. ಸಚಿನ್

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ವೆಸ್ಟ್​​ ಇಂಡೀಸ್ ವಿರುದ್ಧದ ಟೆಸ್ಟ್​ ಪಂದ್ಯದ ಮೂಲಕ ಭಾರತದ 293ನೇ ಟೆಸ್ಟ್​ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮುಂಬೈ ಯುವ ಪ್ರತಿಭೆ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 99 ಎಸೆತಗಳಲ್ಲಿ ಶತಕ ಪೂರೈಸಿದ ಶಾ, ಕ್ರಿಕೆಟ್ ಪಂಡಿತರಿಂದ ಭಾರಿ ಶ್ಲಾಘನೆಗಳಿಗೆ ಪಾತ್ರರಾಗಿದ್ದಾರೆ.

  ಈ ಮೂಲಕ ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಅತಿ ಕಿರಿಯ ಬ್ಯಾಟ್ಸ್​ಮನ್​​ ಎಂಬ ಕೀರ್ತಿಗೆ 18 ವರ್ಷ ಪ್ರಾಯದ ಪೃಥ್ವಿ ಶಾ ಪಾತ್ರರಾಗಿದ್ದಾರೆ. ಇದರ ಜೊತೆಗೆ ಪದಾರ್ಪಣೆ ಪಂದ್ಯದಲ್ಲೇ ಅತಿವೇಗದ ಶತಕ ಸಿಡಿಸಿದ ವಿಶ್ವದ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಭಾರತದ 15ನೇ ಬ್ಯಾಟ್ಸ್​ಮನ್​​​ ಶಾ ಆಗಿದ್ದಾರೆ.

     ಇದಷ್ಟೇ ಅಲ್ಲದೆ ಈ ಹಿಂದೆ ತಾನಾಡಿದ ರಣಜಿ ಕ್ರಿಕೆಟ್, ದುಲಿಪ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಶಾ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಸದ್ಯ ಇದೇ ಸಾಧನೆಯನ್ನು ಅಂತರಾಷ್ಟ್ರೀಯ ಪಂದ್ಯದಲ್ಲೂ ಮುಂದುವರೆಸಿರುವ ಜ್ಯೂನಿಯನ್ ಸಚಿನ್ ತಾನಾಡಿದ ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲೂ ಶತಕ ಸಿಡಿಸಿ ದಾಖಲೆಗಳ ಸರಮಾಲೆ ತೊಟ್ಟಿದ್ದಾರೆ.

     ದೇಶಿ ಕ್ರಿಕೆಟ್​ನಲ್ಲಿ ಪೃಥ್ವಿ ಶಾ ಅವರ ಸಾಧನೆ ನೋಡುವುದಾದರೆ:

  First published: