ಎರಡೂ ಕೈಗಳಲ್ಲೂ ಒಂದೇ ಶೈಲಿಯಲ್ಲಿ ಬೌಲಿಂಗ್: ಕ್ರಿಕೆಟ್​ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ ಭಾರತದ ಬೌಲರ್

news18
Updated:July 24, 2018, 8:01 PM IST
ಎರಡೂ ಕೈಗಳಲ್ಲೂ ಒಂದೇ ಶೈಲಿಯಲ್ಲಿ ಬೌಲಿಂಗ್: ಕ್ರಿಕೆಟ್​ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ ಭಾರತದ ಬೌಲರ್
news18
Updated: July 24, 2018, 8:01 PM IST
ಸಾಗರ್​ ಕನ್ನೆಮನೆ, ನ್ಯೂಸ್ 18 ಕನ್ನಡ

ವಿಶ್ವ ಕ್ರಿಕೆಟ್​ನಲ್ಲಿ ದಿನದಿಂದ ದಿನಕ್ಕೆ ನಾನಾ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ವಿಭಿನ್ನ ರೀತಿಯ ಬ್ಯಾಟಿಂಗ್ ಶೈಲಿ, ಆಶ್ಚರ್ಯಕರ ರೀತಿಯ ಬೌಲಿಂಗ್​​​​​​​​ ಮಾಡುವ ಆಟಗಾರರನ್ನು ಕ್ರಿಕೆಟ್ ಜಗತ್ತು ಕಂಡಿದೆ. ಇದೇ ಸಾಲಿಗೀಗ ಭಾರತದ ಬೌಲರ್​​ವೊಬ್ಬ ಗುರುತಿಸಿಕೊಂಡಿದ್ದಾರೆ.

ಈತನ ಹೆಸರು ಮೋಕಿತ್ ಹರಿಹರನ್.. ಸದ್ಯ ತಮಿಳುನಾಡಿನಲ್ಲಿ ನಡೆಯುತ್ತಿರುವ ಟಿಎನ್​​ಪಿಎಲ್​(ತಮಿಳುನಾಡು ಪ್ರೀಮಿಯರ್ ಲೀಗ್) ಟಿ-20 ಟೂರ್ನಮೆಂಟ್​​ನಲ್ಲಿ ಆಡುತ್ತಿರುವ ಕ್ರಿಕೆಟ್ ಪ್ಲೇಯರ್​​. ವಿಬಿ ಕಾಂಚಿ ವೀರನ್ಸ್ ತಂಡದ ಪರ ಆಡುವ ಈ ಯುವ ಕ್ರಿಕೆಟಿಗ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಅದರಲ್ಲೂ ಎರಡೂ ಕೈಗಳಲ್ಲಿ ಒಂದೇ ಶೈಲಿಯಲ್ಲಿ ಬೌಲಿಂಗ್ ಮಾಡಿ ಕ್ರಿಕೆಟ್​ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾನೆ. ರೈಟ್​​​ ಹ್ಯಾಂಡ್​ ಬ್ಯಾಟ್ಸ್​ಮನ್​ಗಳಿಗೆ ಲೆಫ್ಟ್​ ಹ್ಯಾಂಡ್​ನಲ್ಲಿ ಬೌಲಿಂಗ್ ಮಾಡುವ ಈತ, ಲೆಫ್ಟ್​ ಹ್ಯಾಂಡ್​ ಬ್ಯಾಟ್ಸ್​ಮನ್​ಗಳಿಗೆ ರೈಟ್​ ಹ್ಯಾಂಡ್​​ನಲ್ಲಿ ಬೌಲಿಂಗ್ ಮಾಡುವ ಮೂಲಕ ಸಖತ್​ ಕನ್ಫ್ಯೂಸ್ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಇಷ್ಟಲ್ಲದೆ ಬ್ಯಾಟಿಂಗ್​ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದ್ದಾನೆ. ಇದೀಗ ಈತನ ಬೌಲಿಂಗ್​ ಕುರಿತಾದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

 


Loading...ಇನ್ನು ಈ ರೀತಿ ಎರಡೂ ಕೈಗಳಲ್ಲಿ ಬೌಲಿಂಗ್​ ಮಾಡುವ ಈತ 2ನೇ ಭಾರತೀಯ ಬೌಲರ್​ ಎಂಬುದು ವಿಶೇಷ. ಈ ಹಿಂದೆ 2015-16ನೇ ಸಾಲಿನ ಸೈಯದ್​ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲಿ ವಿದರ್ಭ ತಂಡದ ಅಕ್ಷಯ್​ ಕರ್ನೆವಾರ್​ ಎರಡೂ ಕೈನಲ್ಲಿ ಬೌಲಿಂಗ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಈತನ ಬಳಿಕ ಇದೀಗ ಎರಡು ಕೈನಲ್ಲಿ ಬೌಲಿಂಗ್ ಮಾಡುವ ಭಾರತದ 2ನೇ ಪ್ರತಿಭೆ ಮೋಕಿತ್​​ ಹರಿಹರನ್ ಆಗಿದ್ದಾರೆ​.

 ಭಾರತದಲ್ಲಿ ಅಷ್ಟೇ ಅಲ್ಲದೆ ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲೂ ಈ ವಿಭಿನ್ನ ರೀತಿಯ ಬೌಲಿಂಗ್ ಶೈಲಿ ಹೊಂದಿರುವ ಬೌಲರ್​ಗಳಿದ್ದಾರೆ. ಶ್ರೀಲಂಕಾದಲ್ಲಿ ಕಮಿಂಡು ಮೆಂಡೀಸ್ ಹಾಗೂ ಪಾಕಿಸ್ತಾನದ ಯಾಸಿರ್​ ಜಾನ್ ಎಂಬ ಯುವ ಕ್ರಿಕೆಟಿಗ ಎರಡೂ ಕೈನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವುಳ್ಳವರಾಗಿದ್ದಾರೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...