T20 World Cup: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾದ ನೂತನ ಜೆರ್ಸಿ ಬಿಡುಗಡೆ, ಇಲ್ಲಿದೆ ನೋಡಿ ಫೋಟೋ

T20 World Cup: ಬಿಸಿಸಿಐ ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಹೊಸ ಟಿ20 ಜೆರ್ಸಿಯನ್ನು ಅನಾವರಣಗೊಳಿಸಿದೆ. ಆದ್ದರಿಂದ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡವು ಈ ಹೊಸ ಜೆರ್ಸಿಯಲ್ಲಿ (jersey)  ಕಣಕ್ಕಿಳಿಯಲಿದೆ. 

ಭಾರತ ತಂಡದ ನೂತನ ಜೆರ್ಸಿ

ಭಾರತ ತಂಡದ ನೂತನ ಜೆರ್ಸಿ

  • Share this:
ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ (T20 World Cup) ಆಯೋಜಿಸಲಾಗಿದೆ. ಈ ಬಾರಿಯ ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು (Team India) ಬಿಸಿಸಿಐ (BCCI) ಈಗಾಗಲೇ ಪ್ರಕಟಿಸಿದೆ. ಇದೀಗ ಬಿಸಿಸಿಐ ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಹೊಸ ಟಿ20 ಜೆರ್ಸಿಯನ್ನು ಅನಾವರಣಗೊಳಿಸಿದೆ. ಆದ್ದರಿಂದ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡವು ಈ ಹೊಸ ಜೆರ್ಸಿಯಲ್ಲಿ (jersey)  ಕಣಕ್ಕಿಳಿಯಲಿದೆ. ಇನ್ನು, ಭಾರತ ತಂಡದ ಪ್ರಾಯೋಜಕ MPL ಸ್ಪೋರ್ಟ್ಸ್ ಈ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ಹಿಂದಿನ ಜೆರ್ಸಿಗಿಂತ ಈ ಬಾರಿ ಬಿಡುಗಡೆ ಆದ ಜೆರ್ಸಿ ತುಂಬಾ ಭಿನ್ನವಾಗಿದ್ದು, ಹಳೆಯ ಟೀಂ ಇಂಡಿಯಾದ ಜೆರ್ಸಿ ರೀತಿ ಕಾಣಿಸುತ್ತಿದೆ.

ನ್ಯೂ ಜೆರ್ಸಿ ಹೇಗಿದೆ?:

ಕಳೆದ ವರ್ಷ ಟಿ 20 ವಿಶ್ವಕಪ್‌ಗಾಗಿ 1992 ರ ಭಾರತೀಯ ತಂಡದ ಜೆರ್ಸಿಯಂತೆಯೇ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಈ ಬಾರಿ ಬಿಸಿಸಿಐ ಹೊಸ ಜೆರ್ಸಿ ಬಿಡುಗಡೆ ಮಾಡಿದೆ. ಇದು ಆಕಾಶ ನೀಲಿ ಬಣ್ಣದ ಜರ್ಸಿ. ಅದರ ಮೇಲೆ ಮುಖ್ಯ ಪ್ರಾಯೋಜಕ ಬೈಜುಜ್ ಮತ್ತು MPL ನ ಲೋಗೋ ಮಧ್ಯದಲ್ಲಿ ಭಾರತ ಎಂದು ಬರೆಯಲ್ಪಟ್ಟಿದ್ದು, ಬಿಸಿಸಿಐ ಲೋಗೋ ಎದೆಯ ಮೇಲಿದೆ. ಅಲ್ಲದೇ ಭುಜ ಮತ್ತು ತೋಳುಗಳ ಮೇಲೆ ಗಾಢ ನೀಲಿ ಬಣ್ಣವಿದೆ. ಮುಂದಿನ ತಿಂಗಳು ನಡೆಯುವ ಐಸಿಸಿ ಟಿ20 ವಿಶ್ವಕಪ್​ನಲ್ಲಿಯೂ ಭಾರತ ತಂಡ ಇದೇ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.





ಅಕ್ಟೋಬರ್ 5 ರಂದು ಆಸೀಸ್​ಗೆ ತೆರಳಲಿರುವ ಭಾರತ:

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಅಕ್ಟೋಬರ್ 5 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಅಕ್ಟೋಬರ್ 16 ರಿಂದ ವಿಶ್ವಕಪ್ ಪಂದ್ಯಗಳು ಆರಂಭವಾಗಲಿವೆ. ಭಾರತ ತನ್ನ ಆರಂಭಿಕ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ICC T20 WC 2022 IND vs PAK: ಭಾರತ-ಪಾಕ್​ ಪಂದ್ಯ, ತಿಂಗಳ ಮುಂಚೆಯೇ ಟಿಕೆಟ್​ಗಳು ಸೋಲ್ಡ್ ಔಟ್

ಟಿ20 ವಿಶ್ವಕಪ್ ಟೀಂ ಇಂಡಿಯಾ ವೇಳಾಪಟ್ಟಿ:

ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ: ಅಕ್ಟೋಬರ್ 23
ಭಾರತ vs ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ: ಅಕ್ಟೋಬರ್ 27
ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ: ಅಕ್ಟೋಬರ್ 30
ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್: ನವೆಂಬರ್ 2
ಭಾರತ vs ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್: ನವೆಂಬರ್ 6

ಇದನ್ನೂ ಓದಿ: T20 World Cup 2022: ವಿಶ್ವಕಪ್​ನಲ್ಲಿ ರೋಹಿತ್​ ಜೊತೆ ಕೊಹ್ಲಿ ಓಪನರ್? ಮಹತ್ವದ ಹೇಳಿಕೆ ನೀಡಿದ ಹಿಟ್​ಮ್ಯಾನ್​

ಟಿ20 ವಿಶ್ವಕಪ್‌ಗೆ ಭಾರತೀಯ ತಂಡ:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಅರ್ಶ್ದೀಪ್ ಸಿಂಗ್
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ದೀಪಕ್ ಚಹಾರ್
Published by:shrikrishna bhat
First published: