Team India ಆಟಗಾರರ ಊಟದ ಮೆನುನಲ್ಲಿ ಏನೆಲ್ಲಾ ಇರುತ್ತೆ ಗೊತ್ತೇ? ಪೋಟೋ ಸಕತ್ ವೈರಲ್

ಅನೇಕ ಕ್ಯಾಮೆರಾಗಳು ಆಟಗಾರರು ಮತ್ತು ಡ್ರೆಸ್ಸಿಂಗ್ ಕೋಣೆಯ ಮೇಲೆ ಹಲವಾರು ಬಾರಿ ಝೂಮ್ ಮಾಡಲಾಯಿತು ಮತ್ತು ಹೀಗೆ ಮಾಡುವಾಗ ಒಂದು ಕ್ಷಣ, ಎಲ್ಲರ ಗಮನವನ್ನು ಸೆಳೆದಿದ್ದು ಭಾರತ ತಂಡದ ಆಟಗಾರರ ಊಟದ ಮೆನು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವೈರಲ್‌ ಆದ ಮೆನು ಪಟ್ಟಿ

ವೈರಲ್‌ ಆದ ಮೆನು ಪಟ್ಟಿ

  • Share this:
ಸಾಮಾನ್ಯವಾಗಿ ಕ್ರಿಕೆಟ್ ಆಟದ ಮತ್ತು ಆಟಗಾರರ (Cricket Players) ಅಭಿಮಾನಿ ನೀವಾಗಿದ್ದರೆ, ಖಂಡಿತವಾಗಿಯೂ ನಿಮಗೆ ಕೆಲವೊಂದು ಮಾಹಿತಿಯನ್ನು (Information) ತಿಳಿದುಕೊಳ್ಳಬೇಕೆಂಬ ಕುತೂಹಲ (Curious)ಇದ್ದೇ ಇರುತ್ತದೆ. ಅದರಲ್ಲಿ ನಿಮ್ಮ ನೆಚ್ಚಿನ (Favorite players) ಆಟಗಾರರ ಡ್ರೆಸ್ಸಿಂಗ್ (Dressing room) ರೂಮ್ ಹೇಗಿರುತ್ತೆ ಮತ್ತು ಅವರು ಊಟದಲ್ಲಿ (Lunch) ಏನನ್ನು ತಿನ್ನುತ್ತಾರೆ ಹೀಗೆ ಹತ್ತು ಹಲವು ಮಾಹಿತಿಗಳನ್ನು ತಿಳಿದುಕೊಳ್ಳಲು ತುಂಬಾನೇ ಕುತೂಹಲ ಇರುತ್ತದೆ.

ಫೋಟೋ ವೈರಲ್
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಇಲ್ಲೊಂದು ಫೋಟೋ ವೈರಲ್ ಆಗಿದೆ ನೋಡಿ, ಇದು ನಿಮ್ಮ ಕುತೂಹಲವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು ಎಂದು ನಾವು ಅಂದುಕೊಂಡಿದ್ದೇವೆ.

ಇದನ್ನೂ ಓದಿ: IND vs SA: ಭಾರತ 4-5 ಸೆಷನ್ಸ್ ಬ್ಯಾಟ್ ಮಾಡಲಿಲ್ಲವೆಂದರೆ ಗೆಲ್ಲೋದು ಕಷ್ಟ: ಚೋಪ್ರಾ

ಸೆಂಚುರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನ ಎರಡನೇ ದಿನದ ಆಟವನ್ನು ಅವಿರತ ಮಳೆಯಿಂದಾಗಿ ನಿಲ್ಲಿಸಿದ್ದರಿಂದ ಅಭಿಮಾನಿಗಳು ಮತ್ತು ಕ್ರಿಕೆಟಿಗರಿಗೆ ಇದು ದೀರ್ಘ ಮತ್ತು ನಿರಾಶಾದಾಯಕ ದಿನವಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಳೆ ದಿನವಿಡೀ ಕಣ್ಣಾಮುಚ್ಚಾಲೆ ಆಡಿತು ಮತ್ತು ಅಂತಿಮವಾಗಿ ಅಂಪೈರ್ ಗಳು ದಿನದ ಪಂದ್ಯವನ್ನು ನಿಲ್ಲಿಸಲು ನಿರ್ಧರಿಸಿದರು.

ಆಟಗಾರರ ಊಟದ ಮೆನು
ಆ ಅವಧಿಯಲ್ಲಿ, ಆಟದ ಮೈದಾನದಲ್ಲಿರುವ ಅನೇಕ ಕ್ಯಾಮೆರಾಗಳು ಆಟಗಾರರು ಮತ್ತು ಡ್ರೆಸ್ಸಿಂಗ್ ಕೋಣೆಯ ಮೇಲೆ ಹಲವಾರು ಬಾರಿ ಝೂಮ್ ಮಾಡಲಾಯಿತು ಮತ್ತು ಹೀಗೆ ಮಾಡುವಾಗ ಒಂದು ಕ್ಷಣ, ಎಲ್ಲರ ಗಮನವನ್ನು ಸೆಳೆದಿದ್ದು ಭಾರತ ತಂಡದ ಆಟಗಾರರ ಊಟದ ಮೆನು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆ ಮೆನುನಲ್ಲಿ ಏನಿತ್ತು ಗೊತ್ತೇ? ಚಿಕನ್ ಚೆಟ್ಟಿನಾಡ್ ನಿಂದ ಹಿಡಿದು ಬ್ರೊಕೋಲಿ ಸೂಪ್ ಮತ್ತು ಪನ್ನೀರ್ ಟಿಕ್ಕಾವರೆಗೆ ಎಲ್ಲವೂ ಇತ್ತು. ಇದು ಆಟಗಾರರಿಗಿಂತ ಹೆಚ್ಚಾಗಿ, ಸಾಮಾಜಿಕ ಮಾಧ್ಯಮದಲ್ಲಿ ಈ ವೈರಲ್ ಆಗಿರುವ ಫೋಟೋ ನೋಡಿ ಅಭಿಮಾನಿಗಳು ಮೆನುವಿನಲ್ಲಿರುವ ಭಕ್ಷ್ಯಗಳ ಹೆಸರನ್ನು ನೋಡಿ ಆನಂದಿಸಿದರು ಎಂದು ಹೇಳಬಹುದು.

ನೆಟ್ಟಿಗರು ಸಂತಸ
ಈ ಊಟದ ಮೆನುವಿನ ಫೋಟೋ ಉಲ್ಲಾಸದ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಿದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರದಲ್ಲಿಯೇ ಇದು ಸಿಕ್ಕಾಪಟ್ಟೆ ವೈರಲ್ ಆಯಿತು. ಅನೇಕರು ತಮ್ಮ ಆಯ್ಕೆಯ ಆಹಾರ ಪದಾರ್ಥಗಳನ್ನು ಸೂಚಿಸಿದರೆ, ಕೆಲವರು ಕ್ರಿಕೆಟ್ ಆಟ ನಡೆಯದೆ ಇರದ ಕಾರಣ ಪರದೆಯ ಮೇಲೆ ಏನನ್ನಾದರೂ ನೋಡಲು ಸಿಕ್ಕಿದೆ ಎಂದು ಸಂತೋಷ ಪಟ್ಟರು.

ಮಳೆಯ ಕಾಟ
ದಕ್ಷಿಣ ಆಫ್ರಿಕಾದಲ್ಲಿ ಮೊತ್ತಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಆಶಯ ಇಟ್ಟುಕೊಂಡಿರುವ ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ 3 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ನಿನ್ನೆ ಎರಡನೇ ದಿನದ ಆಟ ಸಂಪೂರ್ಣವಾಗಿ ಮಳೆಗೆ ಬಲಿಯಾಯಿತು. ಇಂದು ಮೂರನೇ ದಿನವಾದರೂ ಮಳೆಯ ಕಾಟ ಇಲ್ಲದೇ ಆಟ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಭಾರತ ಇದೆ.

ಇದನ್ನೂ ಓದಿ: Inspiring- ಟೀಮ್ ಇಂಡಿಯಾಗೆ ಸೇರಿ ವರ್ಷದಲ್ಲೇ ಊರಲ್ಲಿ ಕ್ರಿಕೆಟ್ ಗ್ರೌಂಡ್ ಕಟ್ಟಲು ಹೊರಟ ಬೌಲರ್

ಟಾಸ್ ಗೆದ್ದ ನಂತರ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಕೆ. ಎಲ್. ರಾಹುಲ್ 117 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಬಲ ನೀಡಿದರು. ಅಗರ್ವಾಲ್ ಅವರನ್ನು ಆಫ್ರಿಕಾದ ಬೌಲರ್ ಲುಂಗಿ ಎನ್ಗಿಡಿ 60 ರನ್ ಗೆ ಔಟ್ ಮಾಡಿದರು. ಆದರೆ ರಾಹುಲ್ ಹಾಗೆಯೇ ತಮ್ಮ ಬ್ಯಾಟಿಂಗ್ ಮುಂದುವರಿಸಿ ಅದ್ಭುತ ಶತಕ ಗಳಿಸಿದರು. ನಂತರ ಕಣಕ್ಕೆ ಇಳಿದ ಚೇತೇಶ್ವರ ಪೂಜಾರ ಬೇಗನೆ ಔಟಾದರು ಮತ್ತು ನಾಯಕ ವಿರಾಟ್ ಕೊಹ್ಲಿ ಕೂಡ 35 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಇದ್ದಾರೆ.
Published by:vanithasanjevani vanithasanjevani
First published: