2 ದಿನಗಳಲ್ಲಿ 2 ಅರ್ಧಶತಕ: 3 ಶತಕ: ದಾಖಲೆ ಬರೆದ ಭಾರತ

news18
Updated:October 5, 2018, 6:38 PM IST
2 ದಿನಗಳಲ್ಲಿ 2 ಅರ್ಧಶತಕ: 3 ಶತಕ: ದಾಖಲೆ ಬರೆದ ಭಾರತ
  • Advertorial
  • Last Updated: October 5, 2018, 6:38 PM IST
  • Share this:
ನ್ಯೂಸ್ 18 ಕನ್ನಡ

ರಾಜ್​​ಕೋಟ್​​​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೆಟ್ಟದಂತ ಮೊತ್ತ ಕಲೆಹಾಕಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ 9 ವಿಕೆಟ್ ನಷ್ಟಕ್ಕೆ 649 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತ ದಾಖಲಿಸಿದ ಸಾಧನೆ ಮಾಡಿದೆ.

ಇನ್ನು ಈ 2 ದಿನಗಳ ಆಟದಲ್ಲಿ ಭಾರತೀಯ ಬ್ಯಾಟ್ಸ್​ಮನ್​​ಗಳಿಂದ ಎರಡು ಅರ್ಧಶತಕ ಹಾಗೂ ಎರಡು ಶತಕ ಬಂದಿದೆ. ಮೊದಲು ಸೆಂಚುರಿ ಸಿಡಿಸಿದ್ದು ಪೃಥ್ವಿ ಶಾ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದ ಶಾ 19 ಬೌಂಡರಿ ಸೇರಿ 134 ರನ್ ಕಲೆಹಾಕಿ ಔಟಾದರು. ಜೊತೆಗೆ ಹಲವಾರು ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿದರು. ಇನ್ನು  2ನೇ ದಿನದಾಟದಲ್ಲಿ ತಮ್ಮ ಬೊಂಬಾಟ್ ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ 24ನೇ ಶತಕಕ್ಕೆ ಕೊರಳೊಡ್ಡಿದರು. 10 ಬೌಂಡರಿಯೊಂದಿಗೆ 139 ರನ್ ಕಲೆಹಾಕಿದ ವಿರಾಟ್ ವೇಗವಾಗಿ 24 ಟೆಸ್ಟ್ ಶತಕ ದಾಖಲಿಸಿದ ವಿಶ್ವದ 2ನೇ ಬ್ಯಾಟ್ಸಮನ್​​ ಎಂಬ ಸಾಧನೆ ಮಾಡಿದರು. ಇನ್ನು ಕೆಳಕ್ರಮಾಂಕದಲ್ಲಿ ಅಬ್ಬರಿಸಿದ ಲೋಕಲ್ ಹುಡುಗ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​​ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. 132 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ನೊಂದಿಗೆ ಅಜೇಯ 100 ರನ್ ಜಡ್ಡು ಬಾರಿಸಿದರು. ಇನ್ನು ತವರಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ರಿಷಭ್ ಪಂತ್ ತಮ್ಮ ಎಂದಿನ ಶೈಲಿಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. 84 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 92 ರನ್​​ಗೆ ಔಟ್ ಆಗುವ ಮೂಲಕ ಶತಕ ವಂಚಿತರಾದರು. ಅಂತೆಯೆ ಮೊದಲ ದಿನದಾಟದಲ್ಲಿ ಪೃಥ್ವಿ ಶಾ ಜೊತೆಗೆ ದ್ವಿಶತಕದ ಜೊತೆಯಾಟಕ್ಕೆ ಸಾಥ್ ನೀಡಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 14 ಬೌಂಡರಿಗಳೊಂದಿಗೆ 86 ರನ್ ಗಳಿಸಿ ಔಟ್ ಆದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​​ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ಇನ್ನಷ್ಟು ಬಲಿಷ್ಠವಾಗಿದೆ.

ಶಾಗೆ ಕಾಂಡೋಮ್ ಕಂಪೆನಿ ವಿಶ್

ಸದ್ಯ ಮೊದಲ ಟೆಸ್ಟ್​​ನಲ್ಲಿ ಭಾರತ 649 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡರೆ, ಮೊದಲ ಇನ್ನಿಂಗ್ಸ್​ ಆರಂಭಿಸಿರುವ ವೆಸ್ಟ್​ ಇಂಡೀಸ್ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ಈ ಮೂಲಕ ಕೆರಿಬಿಯನ್ನರು ಇನ್ನೂ 555 ರನ್​​ಗಳ ಹಿನ್ನಡೆಯಲ್ಲಿದ್ದಾರೆ.
First published:October 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...