ಈಗಾಗಲೇ ನಮಗೆಲ್ಲಾ ಗೊತ್ತಿರುವ ಹಾಗೆ ಭಾರತ (Team India) ಮತ್ತು ಆಸ್ಟ್ರೇಲಿಯಾ (Australia) ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ಭಾರತ ತಂಡವು 2-1 ರಿಂದ ಮುನ್ನಡೆ ಸಾಧಿಸಿದೆ. ಆದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆ (ICC Test Championship) ಅರ್ಹತೆ ಪಡೆಯಲು ಕೊನೆಯ ಪಂದ್ಯವನ್ನು ಗೆಲ್ಲಲೆಬೇಕಾದ ಒತ್ತಡದಲ್ಲಿ ರೋಹಿತ್ ಪಡೆ ಇದೆ ಅಂತ ಹೇಳಬಹುದು. ಈ ವಾರದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ನಲ್ಲಿ (Test Match) ಟೀಮ್ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಿತು. ಸ್ಪಿನ್ನರ್ ಗಳಿಗೆ ಗಮನಾರ್ಹವಾಗಿ ಸಹಾಯ ಮಾಡಿದ ಪಿಚ್ ನಲ್ಲಿ ಭಾರತ ತಂಡವು ಎರಡೂ ಇನ್ನಿಂಗ್ಸ್ ಗಳಲ್ಲಿ 109 ಮತ್ತು 163 ರನ್ ಗಳಿಗೆ ಆಲೌಟ್ ಆಯಿತು, ಆಸ್ಟ್ರೇಲಿಯಾ ತಂಡವೂ ಒಂದು ವಿಕೆಟ್ ನಷ್ಟಕ್ಕೆ ಭಾರತ ನೀಡಿದ 75 ರನ್ ಗಳ ಚಿಕ್ಕ ಗುರಿಯನ್ನು ಬೆನ್ನಟ್ಟಿತು.
4ನೇ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕು
3ನೇ ಟೆಸ್ಟ್ ಪಂದ್ಯದ ಗೆಲುವು ಆಸ್ಟ್ರೇಲಿಯಾಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿದೆ ಮತ್ತು ಸರಣಿಯ ಮೊದಲ ಎರಡು ಟೆಸ್ಟ್ ಗಳನ್ನು ಗೆದ್ದ ಭಾರತ ತಂಡ ಸರಣಿ ಸಮ ಆಗುವುದನ್ನು ತಪ್ಪಿಸಿ, ಸರಣಿ ಗೆಲ್ಲುವ ಶತ ಪ್ರಯತ್ನವನ್ನು ಮಾಡುವ ಸಾಧ್ಯತೆಗಳು ಇವೆ. ಭಾರತದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಮೂರನೇ ಟೆಸ್ಟ್ ಗೆ ಕೊಂಚ ಆಟದಿಂದ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಅವರು ಇಲೆವೆನ್ ನಲ್ಲಿ ಸ್ಥಾನ ನೀಡಿದ್ದರು.
ಇದನ್ನೂ ಓದಿ: Sunil Gavaskar: ಐಸಿಸಿ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಹತ್ವದ ಸೂಚನೆ ನೀಡಿದ ಗವಾಸ್ಕರ್
ಆದಾಗ್ಯೂ, ಉಮೇಶ್ ಮೊದಲ ಇನ್ನಿಂಗ್ಸ್ ನಲ್ಲಿ ಮೂರು ವಿಕೆಟ್ ಗಳನ್ನು ಪಡೆದರು ಮತ್ತು 2ನೇ ದಿನದಂದು ಆಸ್ಟ್ರೇಲಿಯಾದ ಬ್ಯಾಟಿಂಗ್ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸರಣಿಯ ನಿರ್ಣಾಯಕ ಪಂದ್ಯ ಅಹಮದಾಬಾದ್ ಟೆಸ್ಟ್ ಗೆ ಶಮಿಯನ್ನು ಮರಳಿ ಕರೆತರಲು ಭಾರತ ಸಜ್ಜಾಗಿದೆ ಅಂತ ಹೇಳಲಾಗುತ್ತಿದೆ.
ಮೂರನೇ ಟೆಸ್ಟ್ ನಲ್ಲಿ ಶಮಿಗೆ ವಿಶ್ರಾಂತಿ
ಪಿಟಿಐ ವರದಿಯ ಪ್ರಕಾರ, ಭಾರತ ತಂಡದ ಮ್ಯಾನೇಜ್ಮೆಂಟ್ ತನ್ನ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಿ, ಐಪಿಎಲ್ ಆಡಲಿರುವ ಮತ್ತು ಏಕದಿನ ವಿಶ್ವಕಪ್ ಯೋಜನೆಗಳಲ್ಲಿ ಇರುವ ವೇಗದ ಬೌಲರ್ ಗಳನ್ನು ಹೊರಗಿಡಲು ನಿರ್ಧರಿಸಿದೆ.
ಆದ್ದರಿಂದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮತ್ತು ಏಕದಿನ ತಂಡದ ಭಾಗವಾಗಿರುವ ಶಮಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ನಂತರ ಉಮೇಶ್ ಯಾದವ್ ಅವರನ್ನು ಎರಡನೇ ವೇಗಿಯಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಸಿರಾಜ್ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 24 ಓವರ್ ಗಳು ಬೌಲ್ ಮಾಡಿ ಒಂದು ವಿಕೆಟ್ ಪಡೆದಿದ್ದಾರೆ. ಇಂದೋರ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಉಮೇಶ್ ಯಾದವ್, ವೈಟ್ ಬಾಲ್ ಸೆಟ್ಅಪ್ ನ ಭಾಗವಲ್ಲದ ಉಮೇಶ್, ಅಹಮದಾಬಾದ್ ನಲ್ಲಿ ಶಮಿ ಅವರೊಂದಿಗೆ ಹೊಸ ಚೆಂಡನ್ನು ಹಂಚಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
Australia win the Third Test by 9 wickets. #TeamIndia 🇮🇳 will aim to bounce back in the fourth and final #INDvAUS Test at the Narendra Modi Stadium in Ahmedabad 👍🏻👍🏻
Scorecard ▶️ https://t.co/t0IGbs2qyj @mastercardindia pic.twitter.com/M7acVTo7ch
— BCCI (@BCCI) March 3, 2023
ಏಕದಿನ ಸರಣಿಯಲ್ಲಿ ಸಿರಾಜ್ ಆಡುವ ಸಾಧ್ಯತೆ
ಮಾರ್ಚ್ 17 ರಿಂದ 22 ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಆಡುವ ಸಾಧ್ಯತೆಯಿದೆ. ಟೆಸ್ಟ್ ಸರಣಿಯಲ್ಲಿ 30 ಓವರ್ ಗಳನ್ನು ಹಾಕಿ ಏಳು ವಿಕೆಟ್ ಗಳನ್ನು ಪಡೆಯುವ ಮೂಲಕ ಎರಡೂ ತಂಡಗಳ ಪರವೂ ಅತ್ಯುತ್ತಮ ವೇಗದ ಬೌಲರ್ ಆಗಿರುವ ಶಮಿ, ಮೊಟೆರಾ ಮೈದಾನದ ಪಿಚ್ ನಲ್ಲಿ ಭಾರತದ ಯೋಜನೆಗಳಿಗೆ ನಿರ್ಣಾಯಕವಾಗಬಹುದು, ಈ ಪಿಚ್ ರಿವರ್ಸ್ ಸ್ವಿಂಗ್ ಗೆ ತುಂಬಾನೇ ಅನುಕೂಲಕರವಾಗಬಹುದು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ