Ind Vs Aus: ಸ್ಪಿನ್ ಮೋಡಿಗೆ ತತ್ತರಿಸಿದ ಟೀಂ ಇಂಡಿಯಾ; ಆಸೀಸ್​​ಗೆ ಮೇಲುಗೈ!

ಟೀಂ ಇಂಡಿಯಾಗೆ 3ನೇ ಟೆಸ್ಟ್​ನ ಮೊದಲ ದಿನದಾಟದಲ್ಲೇ ಹಿನ್ನಡೆ

ಟೀಂ ಇಂಡಿಯಾಗೆ 3ನೇ ಟೆಸ್ಟ್​ನ ಮೊದಲ ದಿನದಾಟದಲ್ಲೇ ಹಿನ್ನಡೆ

ಸದ್ಯ ಆಸ್ಟ್ರೇಲಿಯಾ ತಂಡ 47 ರನ್​ ಲೀಡ್ ಪಡೆದುಕೊಂಡಿದೆ. ಇದಕ್ಕೂ ಮುನ್ನ ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಇನ್ನಿಂಗ್ಸ್​ನಲ್ಲಿ 109 ರನ್​ಗಳಿಗೆ ಕುಸಿದಿತ್ತು.

  • Share this:

ಆಸ್ಟ್ರೇಲಿಯಾ ಸ್ಪಿನ್ ಮೋಡಿಗೆ ಟೀಂ ಇಂಡಿಯಾ (Team India vs Australia) ತತ್ತರಿಸಿದೆ. ಇಂದೋರ್‌ದಲ್ಲಿ (Indore) ನಡೆಯುತ್ತಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ (Test Match) ಭಾರತ ಕೇವಲ 109 ರನ್‌ಗಳಿಗೆ ಆಲೌಟ್‌ ಆಗಿದೆ. ಆಸ್ಟ್ರೇಲಿಯಾ ಪರ ಮ್ಯಾಥ್ಯೂ ಕುಹ್ನೆಮನ್ (Matthew Kuhnemann) 5 ವಿಕೆಟ್‌ ಕಬಳಿಸಿ ಮಿಂಚಿದರು. ಇನ್ನು ಟಾಸ್ ಗೆದ್ದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ರೋಹಿತ್ ಶರ್ಮಾ (Rohit Sharma) 12 ರನ್‌, ಶುಭಮನ್ ಗಿಲ್ 21 ರನ್‌ಗಳಿಸಿ ಔಟಾದರು. ಇದರಿಂದ ಭಾರತ ಒತ್ತಡಕ್ಕೆ ಸಿಲುಕಿತು. ಕೊನೆಯದಾಗಿ ಟೀಂ ಇಂಡಿಯಾ 33.2 ಓವರ್‌ಗಳಲ್ಲಿ 109 ರನ್‌ಗಳಿಸಿ ಆಲೌಟ್ ಆಯ್ತು.


ಇಂದೋರ್​ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯಲ್ಲಿ ಆಸೀಸ್ ಮೇಲುಗೈ ಸಾಧಿಸಿದೆ. ಮೊದಲ ದಿನ ಆಟದ ಅಂತ್ಯದ ವೇಳೆಗೆ 4 ವಿಕೆಟ್​ ಕಳೆದುಕೊಂಡಿರುವ ಆಸ್ಟ್ರೇಲಿಯಾ 156 ರನ್​​ಗಳು ಗಳಿಸಿದೆ. ಕ್ರೀಸ್​ನಲ್ಲಿ ಗ್ರೀನ್​, ಹ್ಯಾಂಡ್ಸ್‌ಕಾಂಬ್ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ.


ಇದನ್ನೂ ಓದಿ: Virat Kohli: ಮತ್ತೊಮ್ಮೆ ಕೊಹ್ಲಿಯನ್ನು ಟಾರ್ಗೆಟ್ ಮಾಡಿದ್ರಾ ಗಂಗೂಲಿ? ರಾಹುಲ್ ಒಬ್ಬಂಟಿಯಲ್ಲ ಎಂದ ದಾದಾ


ಸದ್ಯ ಆಸ್ಟ್ರೇಲಿಯಾ ತಂಡ 47 ರನ್​ ಲೀಡ್ ಪಡೆದುಕೊಂಡಿದೆ. ಇದಕ್ಕೂ ಮುನ್ನ ಟಾಸ್​ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಇನ್ನಿಂಗ್ಸ್​ನಲ್ಲಿ 109 ರನ್​ಗಳಿಗೆ ಕುಸಿದಿತ್ತು. ಓರ್ವ ಟೀಂ ಇಂಡಿಯಾ ಬ್ಯಾಟರ್ ಕೂಡ ಕ್ರೀಸ್​​ನಲ್ಲಿ ಕಚ್ಚಿ ನಿಲ್ಲಲು ಆಗಲಿಲ್ಲ. ಪಿಚ್​ ಲಾಭವನ್ನು ಆಸೀಸ್​ ಸ್ಪಿನ್ನರ್​​ಗಳು ಸಂಪೂರ್ಣವಾಗಿ ಪಡೆದುಕೊಂಡ ಪರಿಣಾಮ ಟೀಂ ಇಂಡಿಯಾ ಬ್ಯಾಟರ್​​ಗಳು ಸಾಲುಗಟ್ಟಿ ಪೆವಿಲಿಯನ್​ ಪರೇಡ್​ ನಡೆಸಿದರು.




ಟೀಂ ಇಂಡಿಯಾಗೆ ಆಘಾತ ಕೊಟ್ಟ ನೋ ಬಾಲ್​!


ಟೀಂ ಇಂಡಿಯಾ 109 ರನ್​ಗಳಿಗೆ ಆಸ್ಟ್ರೇಲಿಯಾಗೆ ಆರಂಭದಲ್ಲೇ ಜಡೇಜಾ ಶಾಕ್​ ಕೊಟ್ಟರು. ಟ್ರಾವಿಸ್ ಹೆಡ್ 9 ರನ್ ಗಳಿಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ಗೆ ತೆರಳಿದರು. ನಂತರ ಓವರ್​ನಲ್ಲಿ ಮಾರ್ನಸ್ ಲ್ಯಾಬುಶೇನ್ ರನ್ನು ಜಡೇಜಾ ಬೌಲ್ಡ್ ಮಾಡಿದ್ದರು. ಜಡೇಜಾ ಎಸೆದ ಎಸೆತವನ್ನು ಮಾರ್ನಸ್ ಲ್ಯಾಬುಶೇನ್ ಆಫ್​ಸೈಡ್​ ಆಡಲು ಪ್ರಯತ್ನಿಸಿದ್ದರು. ಆದರೆ ಬ್ಯಾಟ್​​ ಇನ್​ಸೈಡ್ ಟಚ್​ ಆದ ಚೆಂಡು ವಿಕೆಟ್​​ಗೆ ಬಡಿದಿತ್ತು. ಇದರೊಂದಿಗೆ ಟೀಂ ಇಂಡಿಯಾ ತಂಡದಲ್ಲಿ ಸಂತಸ ಮನೆ ಮಾಡಿತ್ತು.


ಆದರೆ, ಅಂಪೈರ್ ಜಡೇಜಾ ಎಸೆತವನ್ನು ನೋ ಬಾಲ್​ ನೀಡಿದ್ದರು. ಇದರೊಂದಿಗೆ ಗ್ಯಾಲರಿಯಲ್ಲಿ ನೆರೆದಿದ್ದ ಅಭಿಮಾನಿಗಳು ಗರಂ ಆಗಿದ್ದರು. ಇದೇ ಟೂರ್ನಿಯಲ್ಲಿ ಜಡೇಜಾ ಇದಕ್ಕೂ ಮುನ್ನ ಇದೇ ರೀತಿ ವಿಕೆಟ್ ಪಡೆದ ಎಸೆತವನ್ನೇ ನೋ ಬಾಲ್ ಮಾಡಿದ್ದರು. ಜಡೇಜಾ ಎಸೆದ ನೋ ಬಾಲ್​ನಿಂದ ಜೀವದಾನ ಪಡೆದ ಲ್ಯಾಬುಶೇನ್ ರಕ್ಷಣಾತ್ಮಕವಾಗಿ ಬ್ಯಾಟ್​ ಬೀಸಿ ಆಸೀಸ್​ ಇನ್ನಿಂಗ್ಸ್​ಗೆ ಚೇತರಿಕೆ ಕೊಟ್ಟರು.


ರಿವ್ಯೂ ಪಡೆದುಕೊಳ್ಳದ ಕ್ಯಾಪ್ಟನ್ ರೋಹಿತ್ ಶರ್ಮಾ


ಅಶ್ವಿನ್​ ಎಸೆದ ಇನ್ನಿಂಗ್ಸ್​ನ 11ನೇ ಓವರ್​ನಲ್ಲಿ ರೋಹಿತ್ ಮಾಡಿದ ಒಂದು ತಪ್ಪು ಟೀಂ ಇಂಡಿಯಾ ಭಾರೀ ಹೊಡೆತ ನೀಡಿತು. ಈ ಓವರ್​​ನಲ್ಲಿ ಲ್ಯಾಬುಶೇನ್ ಡಿಫೆನ್ಸ್​​ ಮಾಡುವ ಪ್ರಯತ್ನದಲ್ಲಿ ಚೆಂಡು ಮಿಸ್​ ಮಾಡಿದ್ದರು. ಇದರೊಂದಿಗೆ ಚೆಂಡು ನೇರ ಪ್ಯಾಡ್​​ಗೆ ತಗುಲಿತ್ತು. ಇದರೊಂದಿಗೆ ಟೀಂ ಇಂಡಿಯಾ ಆಟಗಾರರು ಅಂಪೈರ್​ಗೆ ಔಟ್​ಗೆ ಮನವಿ ಮಾಡಿದ್ದರು. ಆದರೆ ಅಂಪೈರ್​ ಮನವಿಯನ್ನು ತಿರಸ್ಕರಿಸಿದ್ದರು.


ಇದರೊಂದಿಗೆ ಕೆಎಸ್​ ಭರತ್​​, ಅಶ್ವಿನ್ ರಿವ್ಯೂ ತೆಗೆದುಕೊಳ್ಳುವಂತೆ ಕ್ಯಾಪ್ಟನ್​ ರೋಹಿತ್​ಗೆ ಮನವಿ ಮಾಡಿದ್ದರು. ಆದರೆ ರೋಹಿತ್ ಇಬ್ಬರ ಮನವಿಗೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ರಿಪ್ಲೇ ಸಂದರ್ಭದಲ್ಲಿ ಚೆಂಡು ಆಫ್​ ಸ್ಟಂಪ್​​ಗೆ ಟಚ್​​ ಆಗಿದ್ದು ಕಂಡು ಬಂತು, ಇದರೊಂದಿಗೆ ಲ್ಯಾಬುಶೇನ್ ಉಸಿರು ತೆಗೆದುಕೊಂಡರೆ ರೋಹಿತ್​ ಶರ್ಮಾ ತಲೆ ಮೇಲೆ ಕೈಇಟ್ಟುಕೊಂಡರು.



ಟೀಂ ಇಂಡಿಯಾ ಕೆಟ್ಟ ದಾಖಲೆ


ಇಂದು ಟೀಂ ಇಂಡಿಯಾಗೆ ಟಾಸ್​ ಗೆದ್ದಿದ್ದು ಬಿಟ್ಟರೆ ಬೇರೆ ಯಾವುದೇ ಅಂಶಗಳು ಪೂರಕವಾಗಿ ಇರಲಿಲ್ಲ. ಪಿಚ್​​ ಮೇಲೆ ಚೆಂಡು ಹೇಗೆ ಟಾರ್ನ್​ ಆಗ್ತಿದೆ ಅಂತ ಅರಿತುಕೊಳ್ಳಲು ಆಗದೆ ಟೀಂ ಇಂಡಿಯಾ ಬ್ಯಾಟರ್ಸ್​ ತಡಬಡಾಯಿಸಿದ್ದರು. ಇದರೊಂದಿಗೆ ಟೀಂ ಇಂಡಿಯಾ ಕಳಪೆ ಮೊತ್ತಕ್ಕೆ ಆಲೌಟ್​ ಆಗಿತ್ತು.


ಇದನ್ನೂ ಓದಿ: Rishabh Pant: ರಿಷಭ್ ಪಂತ್ ಈಗ ಹೇಗಿದ್ದಾರೆ? ಶಾಕಿಂಗ್ ಅಪ್‌ಡೇಟ್ಸ್ ಕೊಟ್ರು ಸೌರವ್ ಗಂಗೂಲಿ!


ಇದರೊಂದಿಗೆ ಟೀಂ ಇಂಡಿಯಾ ಕೆಲ ಕೆಟ್ಟ ದಾಖಲೆಗಳಿಗೆ ಕಾರಣವಾಗಿದೆ. ಟೀಂ ಇಂಡಿಯಾ ಕಳೆದ 15 ವರ್ಷದಲ್ಲಿ ತವರು ನೆಲದಲ್ಲಿ ದಾಖಲಿಸಿದ ಕಡಿಮೆ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 2008ರಲ್ಲಿ ಅಹ್ಮದಬಾದ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 76 ರನ್​​ ಗಳಿಗೆ ಆಲೌಟ್​ ಆಗಿತ್ತು.


ಆ ಬಳಿಕ 2017ರಲ್ಲಿ ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಪಂದ್ಯಲ್ಲಿ 105 ರನ್​ ಗಳಿಗೆ ಆಲೌಟ್​ ಆಗಿತ್ತು. ಆ ಬಳಿಕ ಇದೇ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲೂ 107 ರನ್​ಗಳಿಗೆ ಆಲೌಟ್​ ಆಗಿತ್ತು. ಸದ್ಯ ಇಂದೋರ್​​​ನಲ್ಲಿ 109 ರನ್​​ಗಳಿಗೆ ಆಲೌಟ್​ ಆಗುವ ಮೂಲಕ ಕೆಟ್ಟ ದಾಖಲೆಗೆ ನಿರ್ಮಿಸಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು