Team India: ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡದ ಮುಂದಿನ ಸರಣಿಗಳ ವೇಳಾಪಟ್ಟಿ

Team India: ಟೀಂ ಇಂಡಿಯಾ ಸದ್ಯ ಏಷ್ಯಾ ಕಪ್​ ಟೂರ್ನಿಯನ್ನು ಮುಗಿಸಿದೆ. ಆದರೆ ಇದೀಗ ಟಿ 20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ (Australia) ಮತ್ತು  ದಕ್ಷಿಣ ಆಫ್ರಿಕಾ (South Africa) ತಂಡಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಭಾರತ (Team India) ಪ್ರವಾಸ ಮಾಡಲಿವೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟೀಂ ಇಂಡಿಯಾ ಸದ್ಯ ಏಷ್ಯಾ ಕಪ್​ ಟೂರ್ನಿಯನ್ನು ಮುಗಿಸಿದೆ. ಆದರೆ ಇದೀಗ ಟಿ 20 ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ (Australia) ಮತ್ತು  ದಕ್ಷಿಣ ಆಫ್ರಿಕಾ (South Africa) ತಂಡಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಭಾರತ (Team India) ಪ್ರವಾಸ ಮಾಡಲಿವೆ. ಇದೇ ವೇಳೆ ಆರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಟಿ20 ಸರಣಿಗಾಗಿ ಆಸ್ಟ್ರೇಲಿಯಾ (Australia) ತಂಡ ಭಾರತಕ್ಕೆ ಬರಲಿದೆ. ಮೂರು ಪಂದ್ಯಗಳ ಸರಣಿಯು ನಾಗ್ಪುರ, ಮೊಹಾಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸರಣಿ ಮುಗಿದ ತಕ್ಷಣ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆಡಲಿದೆ. ಆಪ್ರಿಕಾ ವಿರುದ್ಧ ಮೂರು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಏಷ್ಯಾ ಕಪ್​ ತಂಡವೇ ಈ 2 ಸರಣಿಗಳಿಗೆ?:

ಹೌದು, ಈಗಾಗಲೇ ಟೀಂ ಇಂಡಿಯಾದ ಆಟಗಾರರು ಏಷ್ಯಾ ಕಪ್​ 2022 ಟೂರ್ನಿಯನ್ನು ಮುಗಿಸಿದ್ದಾರೆ. ಅಲ್ಲದೇ ಈ ಟೂರ್ನಿಗಾಗಿ 15 ಜನರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ಆದರೆ ಈವರೆಗೂ ಆಸೀಸ್​ ಮತ್ತು ಆಫ್ರಿಕಾ ಸರಣಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿಲ್ಲ. ಹೀಗಾಗಿ ಮೂಲಗಳ ಪ್ರಕಾರ. ಈ 2 ಪ್ರಮುಖ ಸರಣಿಗಳಿಗೆ ಏಷ್ಯಾ ಕಪ್​ಗೆ ಆಯ್ಕೆ ಆದ ಭಾರತ ತಂಡದ ಸದಸ್ಯರೇ ಇರುತ್ತಾರೆ ಎನ್ನಲಾಗುತ್ತಿದೆ. ಏಕೆಂದರೆ ಮೂಬರುವ ಟಿ20 ವಿಶ್ವಕಪ್​ ಹಿನ್ನಲೆ ಈ ಆಟಗಾರರಲ್ಲಿಯೇ ಆಯ್ಕೆಗಳು ನಡೆಯುವುದರಿಂದಾಗಿ ಈ ಸರಣಿಗಳಿಗೂ ಇದೇ ಆಟಗಾರರು ಆಡುವ ಸಾಧ್ಯತೆ ಹೆಚ್ಚಿದೆ.

ಟೀಂ ಇಂಡಿಯಾದ ಮುಂಬರುವ ಸರಣಿಗಳಿಗಳ ವೇಳಾಪಟ್ಟಿ:

ಭಾರತ Vs ಆಸ್ಟ್ರೇಲಿಯಾ :

ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)
ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)

ಭಾರತ Vs ದಕ್ಷಿಣ ಆಫ್ರಿಕಾ :

ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)

ಇದನ್ನೂ ಓದಿ: Asia Cup 2022: ಯಾರು ಈ ಮಿಸ್ಟರಿ ಗರ್ಲ್, ವೈರಲ್ ಆಗ್ತಿದೆ ಅಫ್ಘಾನ್​ ಬೆಡಗಿಯ ಫೋಟೋಸ್

ಭಾರತ Vs ದಕ್ಷಿಣ ಆಫ್ರಿಕಾ :

ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)

ಏಷ್ಯಾ ಕಪ್​ಗೆ ಆಯ್ಕೆ ಆದ ಆಟಗಾರರು:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌,
ಮೀಸಲು ಆಟಗಾರರು: ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌ ಮತ್ತು ಶ್ರೇಯಸ್‌ ಅಯ್ಯರ್‌.

ಇದನ್ನೂ ಓದಿ: Virat Kohli: ಒಂದೇ ಶತಕಕ್ಕೆ ದಾಖಲೆಗಳೆಲ್ಲಾ ಅಳಿಸಿ ಹಾಕಿದ ವಿರಾಟ್​​, ಕಿಂಗ್​ ಈಸ್​ ಬ್ಯಾಕ್​ ಎಂದ ಫ್ಯಾನ್ಸ್

ಇನ್ನೊಂದು ವಾರದಲ್ಲಿ ವಿಶ್ವಕಪ್​ಗೆ ಟಿಂ ಇಂಡಿಯಾ ಪ್ರಕಟ:

ಹೌದು, ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಇದರ ನಡುವೆ ಬಿಸಿಸಿಐ ಸೆಪ್ಟೆಂಬರ್ 16 ರಂದು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಹೀಗಾಗಿ ರವೀಂದ್ರ ಜಡೇಜಾ, ಬುಮ್ರಾ ಬೇಗ ಗುಣಮುಖರಾಗಿ ಮೈದಾನಕ್ಕೆ ಮರಳಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ರವೀಂದ್ರ ಜಡೇಜಾ ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Published by:shrikrishna bhat
First published: