ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ಭಾರತ 613 ರನ್​ಗೆ ಡಿಕ್ಲೇರ್: ಶ್ರೀಲಂಕಾಕ್ಕೆ ಆರಂಭಿಕ ಆಘಾತ

news18
Updated:July 25, 2018, 7:06 PM IST
ಭಾರತ-ಶ್ರೀಲಂಕಾ ಅಂಡರ್-19 ಟೆಸ್ಟ್: ಭಾರತ 613 ರನ್​ಗೆ ಡಿಕ್ಲೇರ್: ಶ್ರೀಲಂಕಾಕ್ಕೆ ಆರಂಭಿಕ ಆಘಾತ
news18
Updated: July 25, 2018, 7:06 PM IST
ನ್ಯೂಸ್ 18 ಕನ್ನಡ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್-19 ಎರಡನೇ ಯೂರ್ಥ ಟೆಸ್ಟ್​ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಅಂಡರ್-19 ತಂಡ 8 ವಿಕೆಟ್ ಕಳೆದುಕೊಂಡು 613 ರನ್​ಗೆ ಡಿಕ್ಲೇರ್ ಮಾಡಿದೆ. ಬಳಿಕ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭಿಕ ಆಘಾತ ಎದುರಿಸಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 140 ರನ್​ ಕಲೆಹಾಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ 428 ರನ್​ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಎರಡನೇ ದಿನವಾದ ಇಂದು ಉತ್ತಮ ಬ್ಯಾಟಿಂಗ್ ಆರಂಭಿಸಿತು. ಪವನ್ ಷಾ ಹಾಗೂ ನೇಹಲ್ ಪಡೇರಾ 5ನೇ ವಿಕೆಟ್​ಗೆ 160 ರನ್​ಗಳ ಕಾಣಿಕೆ ನೀಡಿದರು. 64 ರನ್​ ಬಾರಿಸಿ ವಡೇರಾ ಔಟ್ ಆದರೆ, ಬಂದ ಬೆನ್ನಲ್ಲೆ ಆಯುಶ್ ಬಡೊನಿ ಕೇವಲ 1 ರನ್​ಗೆ ನಿರ್ಗಮಿಸಿದರು. ಈ ಮಧ್ಯೆ ಪವನ್ ಷಾ ಅಮೋಘ ದ್ವಿಶತಕದ ಸಂಭ್ರಮ ಹಂಚಿಕೊಂಡರು. ನಂತರ ಕ್ರೀಸ್​ಗೆ ಬಂದ ಅರ್ಜುನ್ ತೆಂಡೂಲ್ಕರ್ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 14 ರನ್​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಅಂತಿಮವಾಗಿ ಪವನ್ ಷಾ ರನೌಟ್​ಗೆ ಬಲಿಯಾದ ವೇಳೆ ತಂಡ ಡಿಕ್ಲೇರ್ ಮಾಡಿತು. ಷಾ 332 ಎಸೆತಗಳಲ್ಲಿ 33 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 282 ರನ್​ ಬಾರಿಸಿದರು. ಶ್ರೀಲಂಕಾ ಪರ ಪರೇರಾ, ನಿಫುಣ್ ಮಲಿಂಗ, ಸೇನರತ್ನೆ ಹಾಗೂ ವಿಜಯಕಾಂತ್ ತಲಾ 1 ವಿಕೆಟ್ ಪಡೆದರು.

ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಶ್ರೀಲಂಕಾ ಅಂಡರ್-19 ತಂಡಕ್ಕೆ ಮೋಹಿತ್ ಜಂಗ್ರ ಆರಂಭಿಕ ಆಘಾತ ನೀಡಿದರು. ನಿಶಾನ್ ಮಧುಶ್ಕ(5), ನಾಯಕ ಧನಂಜಯ(0) ಹಾಗೂ ಫೆರ್ನಾಂಡೊ(5) ಅವರನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗೆ ಅಟ್ಟಿದರು. ಇತ್ತ 44 ರನ್​ಗಳಿಸಿದ್ದ ಕಮಿಲ್ ಮಿಶ್ರಾ ಕೂಡ ಸಿದ್ಧಾರ್ಥ್​ ಎಸೆತದಲ್ಲಿ ಬೌಲ್ಡ್ ಆದರು. ಬಳಿಕ ಒಂದಾದ ಸೂರ್ಯಬಂದರ ಹಾಗೂ ಸೋನಲ್ ದಿನುಶ ಇನ್ನಿಂಗ್ಸ್​ ಕಟ್ಟಲು ಮುಂದಾದರು. ಎಚ್ಚರಿಕೆ ಆಟವಾಡುತ್ತಿರುವ ಈ ಜೋಡಿ 51 ರನ್​ ಬಾರಿಸಿ ಸೂರ್ಯಬಂದರ ಹಾಗೂ 24 ರನ್​ ಗಳಿಸಿ ದಿನುಶ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಮೋಹಿತ್ ಜಂಗ್ರ 3 ವಿಕೆಟ್ ಕಿತ್ತರೆ ಸಿದ್ಧಾರ್ಥ್​ ದೇಸಾಯ್ 1 ವಿಕೆಟ್ ಪಡೆದರು.
First published:July 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ