IND vs ZIM: ಭಾರತ-ಜಿಂಬಾಬ್ವೆ ಏಕದಿನ ಸರಣಿ; ವೇಳಾಪಟ್ಟಿ, ಸಂಪೂರ್ಣ ತಂಡದ ಕುರಿತು ಇಲ್ಲಿದೆ ಮಾಹಿತಿ

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇದೇ ತಿಂಗಳು ಆಗಸ್ಟ್ 18 ರಂದು ಆರಂಭವಾಗಲಿದ್ದು, ಆಗಸ್ಟ್ 22 ರಂದು ಕೊನೆಗೊಳ್ಳಲಿದೆ.

IND vs ZIM

IND vs ZIM

  • Share this:
ಭಾರತ ತಂಡ ಸದ್ಯ ಬಿಡುವಿಲ್ಲದೇ ಸರಣಿಗಳಲ್ಲಿ ಆಟವಾಡುತ್ತಿದೆ. ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ತೊಡಗಿಕೊಳ್ಳುತ್ತಿರುವ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸವನ್ನೂ ಮಾಡಲಿದೆ. ಈಗಾಗಲೇ ಬಿಸಿಸಿಐ (BCCI) ಟಿಂ ಇಂಡಿಯಾವನ್ನು (Team India) ಪ್ರಕಟಿಸಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ಮತ್ತೆ ನಾಯಕನಾಗಿ ಶಿಖರ್ ಧವನ್ (Shikhar Dhawan) ಮುಂದುವರೆಯಲಿದ್ದಾರೆ. ಆದರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.  ಸರಣಿಯೊಂದಿಗೆ ವೇಗದ ಬೌಲರ್ ದೀಪಕ್ ಚಹಾರ್ ಕೂಡ ಪುನರಾಗಮನ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಪಂದ್ಯದ ವೇಳಾಪಟ್ಟಿ, ಎಲ್ಲಿ, ಎಷ್ಟು ಗಂಟೆಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಪಂದ್ಯದ ವಿವರ:

ಭಾರತ ಮತ್ತು ಜಿಂಬಾಬ್ವೆ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಇದೇ ತಿಂಗಳು ಆಗಸ್ಟ್ 18 ರಂದು ಆರಂಭವಾಗಲಿದ್ದು, ಆಗಸ್ಟ್ 22 ರಂದು ಕೊನೆಗೊಳ್ಳಲಿದೆ. ಅಲ್ಲದೇ 3 ಏಕದಿನ ಪಂದ್ಯಗಳೂ ಸಹ ಹರಾರೆ ಮೈದಾನದಲ್ಲಿ ನಡೆಯಲಿದೆ.

ಭಾರತ-ಜಿಂಬಾಬ್ವೆ ಪಂದ್ಯದ ವಿಕ್ಷಣೆ ಹೇಗೆ?:

ಇನ್ನು, ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ 3 ಪಂದ್ಯಗಳ ODI ಸರಣಿಯನ್ನು ನೀವು ಸೋನಿ ನೆಟ್‌ವರ್ಕ್ ಸ್ಪೋರ್ಟ್ಸ್‌ ಮತ್ತು ಡಿಡಿ ಸ್ಪೋರ್ಟ್ಸ್‌  ವಾಹಿನಿಗಳಲ್ಲಿ ಅಂದರೆ ಟಿವಿ ಅಲ್ಲಿ ನೋಡಬಹುದಾಗಿ. ಅಲ್ಲದೇ  ಲೈವ್ ಸ್ಟ್ರೀಮಿಂಗ್ S ಲೈವ್ ಸ್ಟ್ರೀಮಿಂಗ್ ಸೋನಿ ಲೀವ್​ ನಲ್ಲಿ ನೇರ ಪ್ರಸಾರ ಲಭ್ಯವಿದೆ.

ಇದನ್ನೂ ಓದಿ: IND vs ZIM: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ಕೊಹ್ಲಿಗೆ ಮತ್ತೆ ವಿಶ್ರಾಂತಿ

IND vs ZIM ಏಕದಿನ ಸರಣಿಯ ವೇಳಾಪಟ್ಟಿ:

ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ - 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ - 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ - 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್

ಭಾರತ ಮತ್ತು ಜಿಂಬಾಬ್ವೆ ತಂಡಗಳ ಬಲಾಬಲ:

ಭಾರತ ಮತ್ತು ಜಿಂಬಾಬ್ವೆ ತಂಡಗಳು ಒಟ್ಟು 63 ಏಕದಿನ ಪಂದ್ಯಗಳಲ್ಲಿ ಸೆಣಸಾಡಿವೆ. ಇದರಲ್ಲಿ ಭಾರತ 51 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳನ್ನು ಗೆದ್ದಿದೆ. ಉಳಿದ 2 ಪಂದ್ಯಗಳು ಟೈ ನಲ್ಲಿ ಕೊನೆಗಂಡಿವೆ. 2016ರಲ್ಲಿ ಭಾರತ ಮತ್ತು ಜಿಂಬಾಬ್ವೆ  ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು.

ವಿರಾಟ್ ಕೊಹ್ಲಿಗೆ ಮತ್ತೆ ವಿಶ್ರಾಂತಿ:

ಹೌದು, ಈಗಾಗಲೇ ವೆಸ್ಟ್ ಇಂಡೀಸ್ ನಡುವಿನ ಸರಣಿಯಿಂದ ಸಂಪೂರ್ಣವಾಗಿ ದೂರವಾಗಿದ್ದ ವಿರಾಟ್ ಕೊಹ್ಲಿ ಜಿಂಬಾಬ್ವೆ ವಿರುದ್ಧದ ತಂಡದಿಂದಲೂ ದೂರವಾಗಿದ್ದಾರೆ. ಈ ಬಾರಿಯೂ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ ಕೊಹ್ಲಿ ಮಾತ್ರವಲ್ಲದೆ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಅನೇಖ ದಿನಗಳಿಂದ ಟೀಂ ಇಂಡಿಯಾದಿಂದ ದೂರವಿದ್ದ ಮಧ್ಯಮ ವೇಗಿ ದೀಪಕ್ ಚಹಾರ್ ತಂಡಕ್ಕೆ ಮರಳಿದ್ದಾರೆ. ಇವರ ಜೊತೆ ವಾಷಿಂಗ್ಟನ್ ಸುಂದರ್ ಸಹ ಸರಣಿಗೆ ಆಯ್ಕೆ ಆಗಿದ್ದಾರೆ.

ಇದನ್ನೂ ಓದಿ: Asia Cup 2022: ಭಾರತ-ಪಾಕ್​ ಪಂದ್ಯಕ್ಕೆ ಹೇಗಿರಲಿದೆ ಟೀಂ ಇಂಡಿಯಾ ಸಂಭಾವ್ಯ ತಂಡ

ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ:

ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.
Published by:shrikrishna bhat
First published: