ಭಾರತ-ಇಂಗ್ಲೆಂಡ್ ಟೆಸ್ಟ್​: ಕಠಿಣ ಅಭ್ಯಾಸದಲ್ಲಿ ಟೀಂ ಇಂಡಿಯಾ ಆಟಗಾರರು

news18
Updated:July 24, 2018, 6:55 PM IST
ಭಾರತ-ಇಂಗ್ಲೆಂಡ್ ಟೆಸ್ಟ್​: ಕಠಿಣ ಅಭ್ಯಾಸದಲ್ಲಿ ಟೀಂ ಇಂಡಿಯಾ ಆಟಗಾರರು
news18
Updated: July 24, 2018, 6:55 PM IST
ನ್ಯೂಸ್ 18 ಕನ್ನಡ

ಚೆಮ್ಸ್ ಫೋರ್ಡ್(ಜುಲೈ. 24): ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಈಗಾಗಲೇ ಟಿ-20 ಸರಣಿ ಗೆದ್ದು, ಏಕದಿನ ಸರಣಿಯಲ್ಲಿ ಸೋಲು ಕಂಡಿದೆ. ಸದ್ಯ ಟೆಸ್ಟ್​ ಸರಣಿ ಮೇಲೆ ಕಣ್ಣಿಟ್ಟಿರುವ ಕೊಹ್ಲಿ ಪಡೆ ಮೈದಾನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಭಾರತೀಯ ಆಟಗಾರರು ಚೆಮ್ಸ್ ಫೋರ್ಡ್​ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಕೆಲ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ ನಾಳೆ(ಜುಲೈ. 25) ಭಾರತ ತಂಡ ಇಂಗ್ಲೆಂಡ್​ನ ಕೌಂಟಿ ತಂಡವಾದ ಎಸೆಕ್ಸ್​ ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ ಕೂಡ ಆಡಲಿದೆ.

 


Loading...

  Getting into the groove are our spin duo - @rashwin99 and @royalnavghan . #TeamIndia


A post shared by Team India (@indiancricketteam) on


ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ ಮೊದಲ ಪಂದ್ಯ ಆಗಸ್ಟ್​ 1ರಿಂದ ಆರಂಭವಾಗಲಿದೆ. ಈ ನಡುವೆ ಚೇತೇಶ್ವರ್ ಪೂಜಾರ 'ಭಾರತ ತಂಡ 2014ರ ಇಂಗ್ಲೆಂಡ್ ಪ್ರವಾಸಕ್ಕೆ ಹೋಲಿಸಿದರೆ ಈಗ ಸಾಕಷ್ಟು ಬದಲಾವಣೆ ಆಗಿದ್ದು, ಅನುಭವಿ ಆಟಗಾರರನ್ನು ಹೊಂದ್ದಿದ್ದೇವೆ ಎಂದು ಹೇಳಿದ್ದಾರೆ. ಇಲ್ಲಿನ ವಾತಾವರಣಕ್ಕೆ ನಾವು ಹೊಂದುಕೊಂಡಿದ್ದು, ಉತ್ತಮ ತಯಾರಿಯಲ್ಲೆ ಕಣಕ್ಕಿಳಿಯಲು ಸಿದ್ಧರಿದ್ದೇವೆ' ಎಂದು ತಿಳಿಸಿದ್ದಾರೆ.
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ