• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • WTC 2023 Final: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಬುಮ್ರಾ ಔಟ್​! ಯಾರಿಗೆ ಸಿಗಲಿದೆ ಸ್ಟಾರ್​ ಬೌಲರ್​ ಸ್ಥಾನ?

WTC 2023 Final: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಿಂದ ಬುಮ್ರಾ ಔಟ್​! ಯಾರಿಗೆ ಸಿಗಲಿದೆ ಸ್ಟಾರ್​ ಬೌಲರ್​ ಸ್ಥಾನ?

ಬುಮ್ರಾ

ಬುಮ್ರಾ

WTC 2023 Final: ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದೆ. ಜೂನ್ 7 ರಂದು ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ.

  • Share this:

ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ (WTC 2023 Final) ತಲುಪಿದೆ. ಜೂನ್ 7 ರಂದು ಇಂಗ್ಲೆಂಡ್‌ನ ಓವಲ್‌ನಲ್ಲಿ (The Oval ) ನಡೆಯಲಿರುವ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇಂಗ್ಲೆಂಡ್​ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯದ ಸವಾಲನ್ನು ಜಯಿಸುವುದು ಟೀಂ ಇಂಡಿಯಾಗೆ (Team India) ಸುಲಭವಲ್ಲ. ಎಲ್ಲವೂ ಸರಿಯಾಗಿ ನಡೆದರೆ, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಜೊತೆಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪ್ರವೇಶಿಸಲಿದೆ. ಮತ್ತೊಂದೆಡೆ, ಟೀಂ ಇಂಡಿಯಾ ತನ್ನ ಟ್ರಂಪ್ ಕಾರ್ಡ್ ಅಂದರೆ ಜಸ್ಪ್ರೀತ್ ಬುಮ್ರಾ (Jasprit Bumrah) ಇಲ್ಲದೆ ಈ ಶ್ರೇಷ್ಠ ಪಂದ್ಯವನ್ನು ಆಡಬೇಕಿದೆ.


ಭಾರತಕ್ಕೆ ಬುಮ್ರಾ ಏಕೆ ಮುಖ್ಯ?:


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಚಕ್ರದಲ್ಲಿ (2021-2023) ಅವರ ಪ್ರದರ್ಶನದಿಂದ ಇದನ್ನು ಅರ್ಥಮಾಡಿಕೊಳ್ಳಬಹುದು. ಗಾಯದ ಸಮಸ್ಯೆಯಿಂದ ಬುಮ್ರಾ ಕೇವಲ 10 ಟೆಸ್ಟ್‌ಗಳಲ್ಲಿ ಮಾತ್ರ ಆಡಿದ್ದರು. ಆದರೆ, ಅವರು 19.73 ರ ಸರಾಸರಿಯಲ್ಲಿ ಒಟ್ಟು 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಬುಮ್ರಾ ಕೂಡ 3 ಬಾರಿ ಐದು ವಿಕೆಟ್ ಪಡೆದಿದ್ದಾರೆ. ಡಬ್ಲ್ಯುಟಿಸಿಯ ಎರಡನೇ ಚಕ್ರದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್-5 ಬೌಲರ್‌ಗಳ ಪೈಕಿ ಆರ್ ಅಶ್ವಿನ್ (19.67) ಮಾತ್ರ ಜಸ್ಪ್ರೀತ್ ಬುಮ್ರಾ ಅವರಿಗಿಂತ ಉತ್ತಮ ಸರಾಸರಿ ಹೊಂದಿದ್ದಾರೆ. ಅರ್ಥಾತ್, ಬುಮ್ರಾ ಇರುವಿಕೆಯಿಂದ ಟೀಂ ಇಂಡಿಯಾದ ಬಲ ಬಹುಮಟ್ಟಿಗೆ ಹೆಚ್ಚುತ್ತದೆ ಮತ್ತು ಅವರು ತಂಡದಲ್ಲಿ ಇಲ್ಲದಿದ್ದರೆ, ಒತ್ತಡ ಹೆಚ್ಚಾಗುವುದು ಖಚಿತ ಎನ್ನಲಾಗಿದೆ.


ಬುಮ್ರಾ ಕಂಬ್ಯಾಕ್​ ಸದ್ಯವಿಲ್ಲ:


ಜಸ್ಪ್ರೀತ್ ಬುಮ್ರಾ ಅವರು ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರು ಆಗಸ್ಟ್‌ಗಿಂತ ಮೊದಲು ತರಬೇತಿಯನ್ನು ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ. ಬುಮ್ರಾ ಐಪಿಎಲ್ 2023 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಏಕದಿನ ವಿಶ್ವಕಪ್ ವರೆಗೆ ಅವರನ್ನು ಸಂಪೂರ್ಣ ಫಿಟ್ ಆಗಿ ರೂಪಿಸಲು ಬಿಸಿಸಿಐ ಒತ್ತು ನೀಡಿದೆ. ಬೆನ್ನುನೋವಿನ ಕಾರಣ ಬುಮ್ರಾ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಆಡಲಿಲ್ಲ ಮತ್ತು ಭಾರತವು ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು.


ಇದನ್ನೂ ಓದಿ: IPL 2023: ಈ ಸಲ RCB ಕಪ್​ ಗೆಲ್ಲೋದು ಫಿಕ್ಸ್, ಇಲ್ಲಿದೆ ನೋಡಿ 3 ಪ್ರಮುಖ ರೀಸನ್​​!


2022ರಲ್ಲಿ ಬುಮ್ರಾ ಕೊನೆಯ ಪಂದ್ಯ:


ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಬುಮ್ರಾ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಯಿತು. ಇಲ್ಲಿಂದ ಫಿಟ್ ಎಂದು ಘೋಷಿಸಿದ ನಂತರ, ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬುಮ್ರಾ ಅವರನ್ನು ತಂಡಕ್ಕೆ ಸೇರಿಸಲಾಯಿತು. ಆದರೆ, 6 ದಿನಗಳ ಬಳಿಕ ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ಶ್ರೀಲಂಕಾ ಸರಣಿಯಿಂದ ಹಿಂದೆ ಸರಿದಿದ್ದರು. ಬುಮ್ರಾ ವಾಪಸಾತಿ ಕಳೆದ ವರ್ಷದಂತೆ ತರಾತುರಿಯಲ್ಲಿತ್ತು ಎಂಬುದು ಸ್ಪಷ್ಟವಾಯಿತು.
ವಾಸ್ತವವಾಗಿ, ಕಳೆದ ವರ್ಷ ಟಿ 20 ವಿಶ್ವಕಪ್‌ಗೆ ಮೊದಲು, ಬುಮ್ರಾ ಅವರು ಮ್ಯಾಚ್ ಫಿಟ್ ಆಗುವ ಉದ್ದೇಶದಿಂದ ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ, 2 ಪಂದ್ಯಗಳನ್ನು ಆಡಿದ ನಂತರ ಮತ್ತೆ ಅವರ ಬೆನ್ನುನೋವು ಮರುಕಳಿಸಿತು. ಇದೇ ಕಾರಣಕ್ಕೆ ಬುಮ್ರಾ ಜೊತೆ ರಿಸ್ಕ್ ತೆಗೆದುಕೊಳ್ಳಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಬಯಸಿರಲಿಲ್ಲ. ಈ ಕಾರಣಕ್ಕಾಗಿ, ಅವರು ಶ್ರೀಲಂಕಾ, ನಂತರ ನ್ಯೂಜಿಲೆಂಡ್ ಮತ್ತು ಬಾರ್ಡರ್-ಗವಾಸ್ಕರ್ ಸರಣಿಗೆ ಆಯ್ಕೆಯಾಗಲಿಲ್ಲ.


ಬುಮ್ರಾ ಇಲ್ಲದ WTC ಫೈನಲ್‌:


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವು ಜೂನ್‌ನಲ್ಲಿ ಓವಲ್‌ನಲ್ಲಿ ನಡೆಯಲಿದೆ. ಆಗ ಇಂಗ್ಲೆಂಡ್‌ನಲ್ಲಿನ ಪರಿಸ್ಥಿತಿಗಳು ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿವೆ. ಭಾರತವು 2021ರಲ್ಲಿ 3 ವೇಗದ ಬೌಲರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರೊಂದಿಗೆ WTC ಫೈನಲ್‌ ಆಡಿತ್ತು. ಆದರೆ, ಈ ತಂತ್ರ ಫಲಿಸಲಿಲ್ಲ. ನ್ಯೂಜಿಲೆಂಡ್ ಭಾರತವನ್ನು ಸೋಲಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧವೂ ಓವಲ್‌ನಲ್ಲಿ ಭಾರತ ಹೊಸ ತಂತ್ರವನ್ನು ಅನುಸರಿಸಬೇಕಾಗಿದೆ. ಏಕೆಂದರೆ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಹವಾಮಾನ ತಂಪಾಗಿರುತ್ತದೆ. ಆದರೆ, ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ, ಅಂತಹ 4 ವೇಗದ ಬೌಲರ್‌ಗಳನ್ನು ಕಣಕ್ಕಿಳಿಸಬೇಕಿದೆ. ವೇಗದ ಬೌಲರ್​ಗಳ ನೆರವಿನಿಂದ ಭಾರತವು 2021ರಲ್ಲಿ ಲಾರ್ಡ್ಸ್ ಮತ್ತು ಓವಲ್‌ನಲ್ಲಿ ಟೆಸ್ಟ್ ಗೆದ್ದಿತು.


4 ವೇಗದ ಬೌಲರ್‌ಗಳು ಯಾರು?:


ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಫಿಟ್ ಆಗಿ ಉಳಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಮೊದಲ ಆಯ್ಕೆ ಆಗಲಿದ್ದಾರೆ. ಅದೇ ಸಮಯದಲ್ಲಿ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್ ಮತ್ತು ಜಯದೇವ್ ಉನದ್ಕತ್ ಅವರಲ್ಲಿ ಯಾರಾದರೂ ಮೂರನೇ ವೇಗಿಯಾಗಿ ಅವಕಾಶ ಪಡೆಯಬಹುದು. 2018ರಲ್ಲಿ ಕೊನೆಯದಾಗಿ ಟೆಸ್ಟ್ ಆಡಿದ್ದ ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗದ ಬೌಲರ್‌ಗೆ ಆಯ್ಕೆಯಾಗಬಹುದು. ಆದರೆ, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶಮಿ, ಸಿರಾಜ್ ಮತ್ತು ಉಮೇಶ್ ಯಾದವ್ ಹೆಚ್ಚು ಬೌಲಿಂಗ್ ಮಾಡದಿರುವುದು ಭಾರತದ ಸಮಸ್ಯೆಯಾಗಿದೆ. ಶಾರ್ದೂಲ್ ಮತ್ತು ಜೈದೇವ್ ಒಂದೇ ಒಂದು ಟೆಸ್ಟ್ ಕೂಡ ಆಡಲಿಲ್ಲ. ಇಂದಿನಿಂದ ಡಬ್ಲ್ಯುಟಿಸಿ ಫೈನಲ್ ತನಕ ಟೀಂ ಇಂಡಿಯಾ ರೆಡ್ ಬಾಲ್ ಕ್ರಿಕೆಟ್ ಆಡುವುದಿಲ್ಲ. ಐಪಿಎಲ್ 2023ರ ನಂತರ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುತ್ತದೆ.

Published by:shrikrishna bhat
First published: