Team India: ಆಸೀಸ್- ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ತಂಡದಿಂದ ಸ್ಟಾರ್​ ಆಲ್​ರೌಂಡರ್​ ಔಟ್​

Team India: ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದ್ದು, ಇದೀಗ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಟಿ20 ವಿಶ್ವಕಪ್ (T20 World Cup) ಮುನ್ನ ಭಾರತ ತಂಡವು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈಗಾಗಲೇ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾವನ್ನು (Team India) ಪ್ರಕಟಿಸಲಾಗಿದ್ದು, ಇದೀಗ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಮುಂಬರುವ ವಿಶ್ವಕಪ್​ ಹಿನ್ನಲೆ ಈ 2 ಪ್ರಮುಖ ಸರಣಿಗಳಿಗೆ ಯಾವುದೇ ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿಲ್ಲ ಎನ್ನುವುದೇ ವೀಶೇಷವಾಗಿದೆ. ಟಿ20 ವಿಶ್ವಕಪ್​ನಂತೆ ಆಸೀಸ್​ ಮತ್ತು ಆಫ್ರಿಕಾ ಸರಣಿಗೂ ರೋಹಿತ್ ಶರ್ಮಾ (Rohit Sharma) ನೇತೃತ್ವದಲ್ಲಿ 16 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಆಫ್ರಿಕಾ ಸರಣಿಗೆ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ.

AUS-SA ಟಿ20 ಸರಣಿಗೆ ಟೀಂ ಇಂಡಿಯಾ:

ಸೌತ್​ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ ಟಿ20 ಸರಣಿಗೆ  ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್ ಮತ್ತು ಜಸ್ಪ್ರೀತ್ ಬುಮ್ರಾ.

ಇದನ್ನೂ ಓದಿ: Veda Krishnamurthy: ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ, ಲೇಡಿ ಕ್ರಿಕೆಟರ್‌ಗೆ ಬೋಲ್ಡ್ ಆದ ಕರುನಾಡ ಆಟಗಾರ!

ಟೀಂ ಇಂಡಿಯಾದ ಮುಂಬರುವ ಸರಣಿಗಳಿಗಳ ವೇಳಾಪಟ್ಟಿ:

ಭಾರತ Vs ಆಸ್ಟ್ರೇಲಿಯಾ :

ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)
ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)

ಭಾರತ Vs ದಕ್ಷಿಣ ಆಫ್ರಿಕಾ :

ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)

ಭಾರತ Vs ದಕ್ಷಿಣ ಆಫ್ರಿಕಾ :

ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)

ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾ ಕುರಿತು ಕೊನೆಗೂ ಮೌನ ಮುರಿದ ಪಾಕ್​ ಆಟಗಾರ, ಇವರಿಬ್ಬರ ನಡುವಿನ ಸಂಬಂಧ ನಿಜಾನಾ?

ಟಿ20 ವಿಶ್ವಕಪ್​ ಆಯ್ಕೆ ಆದ ತಂಡದವರೇ ಪ್ರಮುಖ ಸರಣಿಗೂ ಆಯ್ಕೆ:

ಇನ್ನು, ಅಕ್ಟೋಬರ್​ ತಿಂಗಳಿಂದ ಆರಂಭವಾಗಲಿರುವ ಟಿ20 ವಿಶ್ವಕಪ್​ ಟೂರ್ನಿಗಾಗಿ ಈಗಾಗಲೇ ತಂಡವನ್ನು ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೂ ಮುನ್ನ ಆಸೀಸ್​ ಮತ್ತು ಆಫ್ರೀಕಾ ಸರಣಿಗೆ ಆಯ್ಕೆ ಆದ ಆಟಗಾರರೂ ಸಹ ವಿಶ್ವಕಪ್​ ತಂಡದಲ್ಲಿರುವ ಆಟಗಾರರೇ ಹೆಚ್ಚಾಗಿದ್ದು, ಈ 2 ಸರಣಿಗಳು ವಿಶ್ವಕಪ್​ ತಯಾರಿ ಎಂಬಂತೆ ಬಿಂಬಿತವಾಗಿದೆ.

ಟಿ20 ವಿಶ್ವಕಪ್​ 2022 ಭಾರತ ತಂಡ: ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
Published by:shrikrishna bhat
First published: