• Home
  • »
  • News
  • »
  • sports
  • »
  • Team India 2023: ಮುಂದಿನ ವರ್ಷದ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ

Team India 2023: ಮುಂದಿನ ವರ್ಷದ ಟೀಂ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India 2023: ಮುಂದಿನ ವರ್ಷ ಎಂಟು ಟೆಸ್ಟ್‌ಗಳು, 18 ODIಗಳು ಮತ್ತು 17 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಭಾರತ ಸಿದ್ಧವಾಗಿದೆ. ಇದರ ಸಂಪೂರ್ಣ ವೇಳಾಪಟ್ಟಿ ಈ ರೀತಿ ಇದೆ.

  • Share this:

ಇತ್ತೀಚೆಗಷ್ಟೇ ಭಾರತದ ನ್ಯೂಜಿಲೆಂಡ್ ಪ್ರವಾಸ ಮುಕ್ತಾಯಗೊಂಡಿದೆ. ಮಳೆಯಿಂದಾಗಿ ಈ ಪ್ರವಾಸದ ಟಿ20 ಸರಣಿಯನ್ನು ಭಾರತ ಗೆದ್ದಿದ್ದರೆ, ಏಕದಿನ ಸರಣಿಯಲ್ಲಿ ಸೋಲನ್ನು ಎದುರಿಸಬೇಕಾಯಿತು. ನ್ಯೂಜಿಲೆಂಡ್ (IND sv NZ) ಪ್ರವಾಸದ ನಂತರ ಇದೀಗ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ (IND vs BAN) ಪ್ರವಾಸಕ್ಕೆ ಆಗಮಿಸಿದೆ. ಭಾರತ ಇಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಬೇಕಿದೆ. ಈ ಸರಣಿ ಭಾರತ ತಂಡಕ್ಕೆ (Team India) ಈ ವರ್ಷದ ಕೊನೆಯ ಸರಣಿ ಆಗಿರಲಿದೆ. ಇದಾದ ಬಳಿಕ ಮುಂದಿನ ವರ್ಷ 2023ರಲ್ಲಿ ಭಾರತ ಸಾಲು ಸಾಲು ಸರಣಿಗಳಲ್ಲಿ ಭಾಗಿಯಾಗಲಿದೆ. ಮುಂದಿನ ವರ್ಷ ಭಾರತ ತಂಡ 8 ಟೆಸ್ಟ್‌ಗಳು, 18 ODIಗಳು ಮತ್ತು 17 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದರ ಸಂಪೂರ್ಣ ವೇಳಾಪಟ್ಟಿ ಈ ರೀತಿ ಇದೆ.


ಬಾಂಗ್ಲಾ ಪ್ರವಾಸದಲ್ಲಿರುವ ಟೀಂ ಇಂಡಿಯಾ:


ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ನಿರ್ಗಮನದ ನಂತರ, ಟೀಂ ಇಂಡಿಯಾ ಮುಂದಿನ ಎಲ್ಲಾ ಹಿರಿಯ ಆಟಗಾರರೊಂದಿಗೆ ಬಾಂಗ್ಲಾದೇಶಕ್ಕೆ ಪ್ರವಾಸದಲ್ಲಿದೆ. ರೋಹಿತ್ ಶರ್ಮಾ ತಂಡದ ನಾಯಕನಾಗಿ ಮತ್ತೆ ಪುನರಾಗಮನ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರು ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ 2 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ.


ಬಾಂಗ್ಲಾ ಸರಣಿ ವೇಳಾಪಟ್ಟಿ:


ಭಾರತ ತಂಡ ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರವಾಸವನ್ನು ಪ್ರಾರಂಭಿಸಲಿದೆ. ಮೂರು ODIಗಳ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಚಟ್ಟೋಗ್ರಾಮ್‌ನಲ್ಲಿ ಆರಂಭವಾಗಲಿದೆ. ಬಾಂಗ್ಲಾದೇಶ ಪ್ರವಾಸದ ನಂತರ, ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರು ಸ್ವದೇಶಿ ODIಗಳನ್ನು ಮತ್ತು T20 ಪಂದ್ಯಗಳನ್ನು ಆಡಲಿದೆ, ಇದು ಜನವರಿ 2023ರಲ್ಲಿ ಆರಂಭವಾಗಲಿದೆ.


ಭಾರತ ತಂಡ


ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸರಣಿಯ ನಂತರ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತಕ್ಕೆ ಬರಲಿದೆ. ಕಿವೀಸ್ ತಂಡವು ಜನವರಿ ಅಂತ್ಯದ ವೇಳೆಗೆ ಭಾರತದಲ್ಲಿ ಮೂರು ODI ಮತ್ತು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ ಮತ್ತು ಸರಣಿಯು ಫೆಬ್ರವರಿ 2023ರ ವರೆಗೆ ಮುಂದುವರಿಯುತ್ತದೆ. ನ್ಯೂಜಿಲೆಂಡ್ ಸರಣಿಯ ನಂತರ, ಫೆಬ್ರವರಿ-ಮಾರ್ಚ್ 2023ರಲ್ಲಿ, ಭಾರತವು ತವರಿನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದು 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವೂ ಆಗಿರುತ್ತದೆ.


ಇದನ್ನೂ ಓದಿ: Women Cricketer: ಸುಖ ಸಂಸಾರಕ್ಕೆ ಸಖಿಯರೇ ಸಾಕಂತೆ! ಗೆಳತಿಯರ ಜೊತೆ ಸಪ್ತಪದಿ ತುಳಿದ ಮಹಿಳಾ ಕ್ರೀಡಾಪಟುಗಳು ಇವರು!


ಭಾರತದ 2023 ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿ:


ಭಾರತ ವಿರುದ್ಧ ಶ್ರೀಲಂಕಾ: ಜನವರಿ 2023
ಭಾರತ ವಿರುದ್ಧ ನ್ಯೂಜಿಲೆಂಡ್: ಜನವರಿ–ಫೆಬ್ರವರಿ 2023
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಫೆಬ್ರವರಿ–ಮಾರ್ಚ್ 2023
ವೆಸ್ಟ್ ಇಂಡೀಸ್ ವಿರುದ್ಧ ಭಾರತ: ಜುಲೈ–ಆಗಸ್ಟ್ 2023 ( ಎರಡು ಟೆಸ್ಟ್‌ಗಳು, ಮೂರು ODIಗಳು ಮತ್ತು ಮೂರು T20 ಅಂತರಾಷ್ಟ್ರೀಯ ಪಂದ್ಯಗಳು)
ಏಷ್ಯಾ ಕಪ್ 2023 (ಪಾಕಿಸ್ತಾನ): ಸೆಪ್ಟೆಂಬರ್ 2023
ಭಾರತ vs ಆಸ್ಟ್ರೇಲಿಯಾ: ಸೆಪ್ಟೆಂಬರ್ 2023 (3 ODIಗಳು)
ICC ಪುರುಷರ ಕ್ರಿಕೆಟ್ ವಿಶ್ವಕಪ್ 2023: ಅಕ್ಟೋಬರ್ - ನವೆಂಬರ್ 2023
ಭಾರತ vs ಆಸ್ಟ್ರೇಲಿಯಾ: ನವೆಂಬರ್ - ಡಿಸೆಂಬರ್ 2023 (5 T20Is)
ಭಾರತ vs ದಕ್ಷಿಣ ಆಫ್ರಿಕಾ: ಡಿಸೆಂಬರ್ 2023 - ಜನವರಿ 2024ರಂದು (2 ಟೆಸ್ಟ್, 3 ODIಗಳು ಮತ್ತು 3 T20) ನಡೆಯಲಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು