VIDEO: ಬುಡಕಟ್ಟು ಜನಾಂಗದಿಂದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ

ನೇಪಿಯರ್​​ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇನ್ ವಿಲಿಯಮ್ಸ್​ ಪಡೆಯನ್ನು ಕೇವಲ 157 ರನ್​ಗಳಿಗೆ ಕಟ್ಟಿ ಹಾಕಿ, ಸುಲಭ ಜಯವನ್ನು ತನ್ನದಾಗಿಸಿಕೊಂಡಿತ್ತು.

zahir | news18
Updated:January 25, 2019, 8:23 PM IST
VIDEO: ಬುಡಕಟ್ಟು ಜನಾಂಗದಿಂದ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ
ನೇಪಿಯರ್​​ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇನ್ ವಿಲಿಯಮ್ಸ್​ ಪಡೆಯನ್ನು ಕೇವಲ 157 ರನ್​ಗಳಿಗೆ ಕಟ್ಟಿ ಹಾಕಿ, ಸುಲಭ ಜಯವನ್ನು ತನ್ನದಾಗಿಸಿಕೊಂಡಿತ್ತು.
  • News18
  • Last Updated: January 25, 2019, 8:23 PM IST
  • Share this:
ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ನಾಳೆ 2ನೇ ಪಂದ್ಯಕ್ಕೆ ಸಜ್ಜಾಗಿದೆ. ಶನಿವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಮೆನ್​ ಇನ್​ ಬ್ಲೂ ಆಟಗಾರರು ಕಿವೀಸ್​ನ ಮೌಂಟ್ ಮೌಂಗನ್ಯುಯಿ ನಗರಕ್ಕೆ  ಬಂದಿಳಿದರು.

ಈ ವೇಳೆ ಅಲ್ಲಿನ ಕ್ರಿಕೆಟ್​ ಮಂಡಳಿ ಟೀಂ ಇಂಡಿಯಾ ಆಟಗಾರರನ್ನು ಸ್ವಾಗತಿಸಲು ವಿಶೇಷ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಮವೊರಿ ಬುಡಕಟ್ಟು ಜನಾಂಗದವರು ಮೈದಾನದಲ್ಲಿದ್ದರು. ಭಾರತ ತಂಡದ ಆಟಗಾರರು ಬರುತ್ತಿದ್ದಂತೆ ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿತು.

ಟೀಂ ಇಂಡಿಯಾ ಆಟಗಾರರು ಕೂಡ ಅಲ್ಲಿನ ಬುಡಕಟ್ಟು ಜನರೊಂದಿಗೆ ಖುಷಿ ಹಂಚಿಕೊಂಡು ಸಂಭ್ರಮಿಸಿದರು. ಇದೇ ವೇಳೆ ಮಾವೊರಿ ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ವಿರಾಟ್​ ಕೊಹ್ಲಿ ಪಡೆ ಕೆಲ ಹೊತ್ತು ಕುಶಲೋಪರಿ ನಡೆಸಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಂಪ್ರದಾಯಿಕ ಸ್ವಾಗತವನ್ನು ಟೀಂ ಇಂಡಿಯಾ ಆಟಗಾರರು ಎಂಜಾಯ್ ಮಾಡಿದರು ಎಂದು ಬರೆದುಕೊಂಡಿದ್ದಾರೆ.


ನೇಪಿಯರ್​​ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೇನ್ ವಿಲಿಯಮ್ಸ್​ ಪಡೆಯನ್ನು ಕೇವಲ 157 ರನ್​ಗಳಿಗೆ ಕಟ್ಟಿ ಹಾಕಿ, ಭಾರತ ಸುಲಭ ಜಯವನ್ನು ತನ್ನದಾಗಿಸಿಕೊಂಡಿತ್ತು. ಶನಿವಾರ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಏಕದಿನ ಪಂದ್ಯ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ನಿರೀಕ್ಷೆಯಿದ್ದು, ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಸಮಬಲಗೊಳಿಸಲು ಕಿವೀಸ್​ ತಂಡ ಸಕಲ ತಯಾರಿಯಲ್ಲಿದೆ. ಇನ್ನು ಮೊದಲ ಏಕದಿನವನ್ನು ಭರ್ಜರಿಯಾಗಿ ಜಯಿಸುವ ಮೂಲಕ ನ್ಯೂಜಿಲ್ಯಾಂಡ್​ ಪ್ರವಾಸ ಆರಂಭಿಸಿರುವ ಟೀಂ ಆಟಗಾರರ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದಾರೆ.
First published:January 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading