ಇಂದಿನಿಂದ 4ನೇ ಟೆಸ್ಟ್​: ಸರಣಿ ಗೆಲುವಿಗೆ ಆಂಗ್ಲರ ತಂತ್ರ; ಉಳಿವಿಗೆ ಕೊಹ್ಲಿ ರಣತಂತ್ರ

Vinay Bhat | news18
Updated:August 30, 2018, 2:36 PM IST
ಇಂದಿನಿಂದ 4ನೇ ಟೆಸ್ಟ್​: ಸರಣಿ ಗೆಲುವಿಗೆ ಆಂಗ್ಲರ ತಂತ್ರ; ಉಳಿವಿಗೆ ಕೊಹ್ಲಿ ರಣತಂತ್ರ
Vinay Bhat | news18
Updated: August 30, 2018, 2:36 PM IST
ನ್ಯೂಸ್ 18 ಕನ್ನಡ 

ಭಾರತ-ಇಂಗ್ಲೆಂಡ್ ತಂಡಗಳು ಇಂದು 4ನೇ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಸೌಥಾಂಪ್ಟನ್​ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಈಗಾಗಲೇ ಇಂಗ್ಲೆಂಡ್ ಆಡುವ 11 ಆಟಗಾರರನ್ನು ಪ್ರಕಟಿಸಿದೆ. ಟೀಂ ಇಂಡಿಯಾ ಕೂಡ ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದೆ.

ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್​ಗೆ ಈ ಪಂದ್ಯ ಗೆದ್ದರೆ ಸರಣಿಯನ್ನೇ ಗೆದ್ದಂತೆ. ಮತ್ತೊಂದೆಡೆ ಟೀಂ ಇಂಡಿಯಾ ನಾಟಿಂಗ್​ಹ್ಯಾಮ್​​ ಟೆಸ್ಟ್​ನಲ್ಲಿ 203 ರನ್​ಗಳ ಭರ್ಜರಿ ಜಯ ಸಾಧಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸೃಷ್ಟಿಸಿದೆ.

ಈಗಾಗಲೇ ಆತ್ಮ ವಿಶ್ವಾಸದಲ್ಲಿ ತನ್ನ ಆಡುವ 11 ಆಟಗಾರರನ್ನು ಪ್ರಕಟಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಬದಲಾವಣೆ ಮಾಡಿಕೊಂಡಿದೆ. ಆಲ್ರೌಂಡರ್ ಕ್ರಿಸ್ ವೋಕ್ಸ್​ ಬದಲು ಮೋಯಿನ್ ಅಲಿಗೆ ಮಣೆ ಹಾಕಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ ಒಲ್ಲಿ ಪೋಪ್ ಬದಲು ಬೌಲರ್ ಸ್ಯಾಮ್ ಕುರ್ರನ್​​ಗೆ ಮತ್ತೆ ತಂಡದಲ್ಲಿ ಸ್ಥಾನ ಒದಗಿಸಲಾಗಿದೆ. ಜಾನಿ ಬೈರ್ಸ್ಟ್ರೋವ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಜೋಸ್ ಬಟ್ಲರ್ ನೋಡಿಕೊಳ್ಳಲಿದ್ದಾರೆ.

ಇತ್ತ ಕಳೆದ ಟೆಸ್ಟ್ ಪಂದ್ಯದ ಗೆಲುವಿನ ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಬಹುತೇಕ ಕಳೆದ ಗೆಲುವಿನ ತಂಡವನ್ನೇ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಈಗಾಗಲೇ ಗಾಯಾಳುವಾಗಿ ತಂಡದಿಂದ ಹೊರಬಿದ್ದಿರುವ ಸ್ಪಿನ್ನರ್ ಆರ್. ಅಶ್ವಿನ್ ಬದಲು ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಬಹುತೇಕ ಖಚಿತ. ಇನ್ನು ಟೀಂ ಇಂಡಿಯಾ ಸೇರಿಕೊಂಡಿರುವ ಯುವ ಆಟಗಾರರಾದ ಪೃಥ್ವಿ ಷಾ ಹಾಗೂ ಹನುಮ ವಿಹಾರಿಗೆ ಈ ಪಂದ್ಯದಲ್ಲೇ ಅವಕಾಶ ಸಿಗುವುದು ಅನುಮಾನವಾಗಿದೆ.

ಒಟ್ಟಿನಲ್ಲಿ ಉಭಯ ತಂಡಗಳು ಸೌಂಥಾಪ್ಟನ್ ಟೆಸ್ಟ್​ನಲ್ಲಿ ತಮ್ಮದೇ ಆದ ವಿಭಿನ್ನ ಗೇಮ್​​ಪ್ಲಾನ್​ನೊಂದಿಗೆ ಕಣಕ್ಕಿಳಿಯುತ್ತಿವೆ. ಭರ್ಜರಿ ಫಾರ್ಮ್​​ನಲ್ಲಿರುವ ವಿರಾಟ್ ಕೊಹ್ಲಿ ರನ್ ಹೊಳೆ ಹರಿಸೋಕೆ ತಯಾರಾಗಿದ್ದಾರೆ. ಕಳೆದ ಪಂದ್ಯದಂತೆ ಟೀಂ ಇಂಡಿಯಾದ ಎಲ್ಲಾ ಆಟಗಾರರು ಜವಾಬ್ದಾರಿಯುತ ಆಟವಾಡಿದರೆ,  ಭಾರತ ಸರಣಿ ಸಮಬಲ ಮಾಡಿಕೊಳ್ಳುವ ಎಲ್ಲಾ ಅವಕಾಶಗಳಿವೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...