• Home
  • »
  • News
  • »
  • sports
  • »
  • Team India: ಬಿರಿಯಾನಿಗಾಗಿ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಡಿದ್ದ ಟೀಂ ಇಂಡಿಯಾ ಪ್ಲೇಯರ್ಸ್, ಅಷ್ಟಕ್ಕೂ ಆ ದಿನ ಏನಾಗಿತ್ತು?

Team India: ಬಿರಿಯಾನಿಗಾಗಿ ಹೋಟೆಲ್ ಸಿಬ್ಬಂದಿ ಜೊತೆ ಜಗಳವಾಡಿದ್ದ ಟೀಂ ಇಂಡಿಯಾ ಪ್ಲೇಯರ್ಸ್, ಅಷ್ಟಕ್ಕೂ ಆ ದಿನ ಏನಾಗಿತ್ತು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ಟೀಂ ಇಂಡಿಯಾ ಉಪ್ಪಲ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಡಿಸೆಂಬರ್ 2019 ರಲ್ಲಿ ಆಡಲಾಯಿತು. ಆ ಪಂದ್ಯದಲ್ಲಿ ಭಾರತ ಟಿ20ಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಆ ಬಳಿಕ ಬೇರೆ ಯಾವುದೇ ಪಂದ್ಯ ನಡೆದಿಲ್ಲ.

  • Share this:

ಭಾರತ ಮತ್ತು ಆಸ್ಟ್ರೇಲಿಯಾ (IND v AUS) ನಡುವಿನ 3 ಪಂದ್ಯಗಳ ಸರಣಿಯ ಅಂತಿಮ ಮತ್ತು 3ನೇ ಟಿ20 ಪಂದ್ಯವು ನಾಳೆ ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ (Rajiv Gandhi International Cricket Stadium Hyderabad) ನಡೆಯಲಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ. ನಿನ್ನೆ ಸಂಜೆ ಟೀಂ ಇಂಡಿಯಾ (Team India) ಆಟಗಾರರು ಪಾರ್ಕ್ ಹಯಾತ್ ನಲ್ಲಿ ಹಾಗೂ ಆಸ್ಟ್ರೇಲಿಯಾ ಆಟಗಾರರು ತಾಜ್ ಕೃಷ್ಣಾದಲ್ಲಿ ತಂಗಿದ್ದಾರೆ. ಆದರೆ ಈ ಹಿಂದೆ ಟೀಂ ಇಂಡಿಯಾ ಆಟಗಾರರು ನಗರದ ಖ್ಯಾತ ಹೋಟೆಲ್ ಒಂದರಲ್ಲಿ ಉಳಿದುಕೊಳ್ಳುತ್ತಿದ್ದರು. ಆದ್ರೆ ಬಿರಿಯಾನಿ (Biryani )ಫೈಟ್ ನಿಂದಾಗಿ ಇದೀಗ ಟೀಂ ಇಂಡಿಯಾ ಆಟಗಾರರು ಆ ಹೋಟೆಲ್ ನಲ್ಲಿ ತಂಗುತ್ತಿಲ್ಲ.


2014ರಲ್ಲಿ ಬಿರಿಯಾನಿ ವಿಚಾರದಲ್ಲಿ ಟೀಂ ಇಂಡಿಯಾ ಹಾಗೂ ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎಂದು ಹಲವು ಮಾಧ್ಯಮ ಸಂಸ್ಥೆಗಳಲ್ಲಿ ವರದಿಯಾಗಿತ್ತು. ಈ ವಿಷಯವನ್ನು ಆ ಸಮಯದಲ್ಲಿ ಧೋನಿ ಗಂಭೀರವಾಗಿ ಪರಿಗಣಿಸಿದ್ದರು. ಹೀಗಾಗಿ ಇಂದಿಗೂ ಟೀಂ ಇಂಡಿಯಾ ಆ ಒಂದು ಹೋಟೆಲ್​ನಲ್ಲಿ ತಂಗುತ್ತಿಲ್ಲ.


ಅಷ್ಟಕ್ಕೂ ಆ ದಿನ ಏನಾಯಿತು?:


2014 ಸೆಪ್ಟೆಂಬರ್ 17 ರಂದು ಹೈದರಾಬಾದ್ ನಲ್ಲಿ CLT ಲೀಗ್ ಪಂದ್ಯಾವಳಿಯ ಭಾಗವಾಗಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು. ಆ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ನಗರದ ಪ್ರಸಿದ್ಧ ಹೋಟೆಲ್‌ನಲ್ಲಿ ತಂಗಿದ್ದರು. ಹೈದರಾಬಾದ್‌ನ ಅಂಬಟಿ ರಾಯುಡು ಅವರು ಟೀಂ ಇಂಡಿಯಾದಲ್ಲಿ ತಮ್ಮ ಸಹ ಆಟಗಾರರಿಗಾಗಿ ವಿಶೇಷ ಹೈದರಾಬಾದ್ ಬಿರಿಯಾನಿಯನ್ನು ಮನೆಯಿಂದ ಮಾಡಿಸಿಕೊಂಡು ತಂದಿದ್ದರು.


ಇದನ್ನೂ ಓದಿ: IND vs AUS: ಭಾರತ- ಆಸ್ಟ್ರೇಲಿಯಾ ಅಂತಿಮ ಹಣಾಹಣಿ, ಇಲ್ಲಿದೆ ಹವಾಮಾನ ವರದಿ, ಪಿಚ್ ರಿಪೋರ್ಟ್


ಬಿರಿಯಾನಿ ತೆಗೆದುಕೊಂಡು ಹೋಟೆಲ್‌ಗೆ ಹೋದಾಗ ಸಿಬ್ಬಂದಿ ಅವಕಾಶ ನೀಡಲಿಲ್ಲ. ಹೊರಗಿನಿಂದ ತಂದ ಆಹಾರ ಪದಾರ್ಥಗಳನ್ನು ಹೋಟೆಲ್‌ಗೆ ಬಿಡುವುದಿಲ್ಲ ಎಂದು ಹೇಳಲಾಗಿತ್ತಂತೆ. ಆದರೆ ಇದಕ್ಕೆ ಆಟಗಾರರು ಅನೇಕ ಬಾರಿ ಮನವಿಯನ್ನೂ ಮಾಡಿಕೊಂಡರೂ ಅದನ್ನು ಬಿಡಲಿಲ್ಲ. ಕೊನೆಗೆ ಕ್ಯಾಪ್ಟನ್ ಧೋನಿ ಬಂದು ಮಾತಾಡಿದರೂ ಹೋಟೆಲ್​ ಸಿಬ್ಬಂದಿ ಒಪ್ಪಲಿಲ್ಲ. ಹೋಟೆಲ್ ಮ್ಯಾನೇಜ್‌ಮೆಂಟ್‌ನ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ಎಂಎಸ್ ಧೋನಿ, ಹೋಟೆಲ್ ಖಾಲಿ ಮಾಡಿ ಬೇರೆ ಹೋಟೆಲ್‌ಗೆ ತೆರಳಿದ್ದಾರೆ. ಅಂದಿನಿಂದ.. ಟೀಂ ಇಂಡಿಯಾ ಸದಸ್ಯರು ಬಂದಾಗಲೆಲ್ಲಾ ಅಲ್ಲಿ ಉಳಿಯುವುದಿಲ್ಲವಂತೆ.


ಇಂದು ಭಾರತ-ಆಸೀಸ್​ ಪಂದ್ಯ:


ಇದೇ ವೇಳೆ ಇಂದು ಸಂಜೆ ಹೈದರಾಬಾದ್​ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. 2019ರ ಡಿಸೆಂಬರ್‌ನಲ್ಲಿ ಉಪ್ಪಲ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ ಟಿ20ಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಿತ್ತು. ಆ ಬಳಿಕ ಬೇರೆ ಯಾವುದೇ ಪಂದ್ಯ ನಡೆದಿಲ್ಲ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗಿಲ್ಲ.


ಇದನ್ನೂ ಓದಿ: IND vs SA: ಭಾರತ-ದಕ್ಷಿಣ ಆಫ್ರಿಕಾ ಸರಣಿ; ವೇಳಾಪಟ್ಟಿ, ತಂಡ-ಲೈವ್ ಸ್ಟ್ರೀಮಿಂಗ್ ಸಂಪೂರ್ಣ ವಿವರ


ಐಪಿಎಲ್ 2020 ಮತ್ತು 2021 ಸೀಸನ್‌ಗಳು ಯುಎಇಯಲ್ಲಿ ನಡೆದವು. 2022 ರ ಸೀಸನ್ ಅಹಮದಾಬಾದ್ ಮತ್ತು ಮುಂಬೈನಲ್ಲಿ ನಡೆದಿರುವುದು ತಿಳಿದಿದೆ. ಸುಮಾರು ಮೂರು ವರ್ಷಗಳ ನಂತರ ಉಪ್ಪಲ್​ದಲ್ಲಿ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಇಡೀ ಕ್ರೀಡಾಂಗಣ ಭರ್ತಿಯಾಗಲಿದೆ. ಅದರಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಪಂದ್ಯವು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ.

Published by:shrikrishna bhat
First published: