• Home
  • »
  • News
  • »
  • sports
  • »
  • Sanju Samson: ಐರ್ಲೆಂಡ್​ ಕ್ರಿಕೆಟ್​ನಿಂದ ಸಂಜು ಸ್ಯಾಮ್ಸ​ನ್​ಗೆ ಆಫರ್​! ಟೀಂ ಇಂಡಿಯಾಗೆ ಗುಡ್​ ಬೈ ಹೇಳ್ತಾರಾ ಸ್ಟಾರ್​ ಪ್ಲೇಯರ್​?

Sanju Samson: ಐರ್ಲೆಂಡ್​ ಕ್ರಿಕೆಟ್​ನಿಂದ ಸಂಜು ಸ್ಯಾಮ್ಸ​ನ್​ಗೆ ಆಫರ್​! ಟೀಂ ಇಂಡಿಯಾಗೆ ಗುಡ್​ ಬೈ ಹೇಳ್ತಾರಾ ಸ್ಟಾರ್​ ಪ್ಲೇಯರ್​?

 ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

Sanju Samson: ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದಂತೆ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ವೃತ್ತಿಜೀವನಕ್ಕಾಗಿ ತಮ್ಮ ದೇಶಕ್ಕೆ ಬಂದಲ್ಲಿ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದೆ.

  • Share this:

ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ (Sanju Samson) ಉತ್ತಮ ಪ್ರದರ್ಶನದ ನಂತರವೂ ಭಾರತೀಯ ಕ್ರಿಕೆಟ್ ತಂಡದಲ್ಲಿ (Team India) ನಿಯಮಿತ ಅವಕಾಶ ಸಿಕ್ಕುತ್ತಿಲ್ಲ. ಸಂಜು 2015ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ನಂತರದ ಏಳು ವರ್ಷಗಳಲ್ಲಿ ಅವರು ಕೇವಲ 27 ಪಂದ್ಯಗಳನ್ನು ಆಡಿದರು. ಅವರನ್ನು ತಂಡದಿಂದ ನಿರಂತರವಾಗಿ ಹೊರಗಿಡುವುದರಿಂದ ಭಾರತೀಯ ತಂಡದ ನಿರ್ವಹಣೆ ಮತ್ತು ಬಿಸಿಸಿಐ (BCCI) ಟೀಕೆಗಳನ್ನು ಎದುರಿಸುತ್ತಿದೆ. ಈಗ ಮಾಧ್ಯಮ ವರದಿಗಳ ಪ್ರಕಾರ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು (Ireland cricket team) ಸ್ಯಾಮ್ಸನ್‌ಗೆ ತಮ್ಮ ತಂಡದಲ್ಲಿ ಆಡಲು ಅವಕಾಶ ನೀಡಿದೆ ಎಂದು ವರದಿಯಾಗಿದೆ.


ಐರಿಶ್​ ಆಫರ್​ ತಿರಸ್ಕರಿಸಿದ ಸಂಜು:


ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದಂತೆ, ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಸಂಜು ಸ್ಯಾಮ್ಸನ್ ಅವರ ಕ್ರಿಕೆಟ್ ವೃತ್ತಿಜೀವನಕ್ಕಾಗಿ ತಮ್ಮ ದೇಶಕ್ಕೆ ಬಂದಲ್ಲಿ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದೆ. ಐರಿಶ್ ಕ್ರಿಕೆಟ್ ಮಂಡಳಿಯ ಪ್ರಸ್ತಾಪವನ್ನು ಸ್ಯಾಮ್ಸನ್ ತಿರಸ್ಕರಿಸಿದ್ದಾರೆ. ಸ್ಯಾಮ್ಸನ್ ನೀಡಿದ ಉತ್ತರ ಚರ್ಚೆಯಲ್ಲಿದೆ. ಭಾರತವನ್ನು ಪ್ರತಿನಿಧಿಸುವ ಇಚ್ಛೆ ಇರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಯಾವುದೇ ದೇಶದ ಪರ ಆಡುವ ಯೋಚನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ.


ಐರಿಶ್ ಕ್ರಿಕೆಟ್ ಮಂಡಳಿಯು ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ನಾಯಕನಾಗಬಲ್ಲ ಆಟಗಾರನನ್ನು ಹುಡುಕುತ್ತಿದೆ. ಸಂಜು ಸ್ಯಾಮ್ಸನ್ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದರೆ, ಅವರು ಭಾರತೀಯ ಕ್ರಿಕೆಟ್ ತಂಡವನ್ನು ತೊರೆಯಬೇಕಾಗಿತ್ತು. ಭಾರತದ U-19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಂದ್ ಇದೇ ರೀತಿಯ ಪ್ರಸ್ತಾಪವನ್ನು ಒಪ್ಪಿಕೊಂಡರು. ಸದ್ಯ ಅಮೆರಿಕದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ.


ಸಂಜು ಸ್ಯಾಮ್ಸನ್​ರನ್ನು ನಿರ್ಲಕ್ಷಿಸಿದ ಬಿಸಿಸಿಐ:


ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ 2022ರಲ್ಲಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಆಯ್ಕೆಯಾಗಿರಲಿಲ್ಲ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತೀಯ ತಂಡದಲ್ಲೂ ಅವರು ಇರಲಿಲ್ಲ. ನ್ಯೂಜಿಲೆಂಡ್ ವಿರುದ್ಧದ T20 ಸರಣಿಯ ತಂಡದಲ್ಲಿ ಅವರನ್ನು ಸೇರಿಸಲಾಯಿತು. ಆದರೆ ಒಂದೇ ಒಂದು ಪಂದ್ಯವನ್ನು ಆಡಲು ಆಗಲಿಲ್ಲ.


ಇದನ್ನೂ ಓದಿ: FIFA World Cup 2022: ಫುಟ್ಬಾಲ್‌ ಸೆಮೀಸ್​ವರೆಗೆ ಎಣ್ಣೆ ಪ್ರಿಯರಿಗೆ ಹಬ್ಬ! ಬೆಂಗಳೂರಲ್ಲಿ ಮುಂಜಾನೆವರೆಗೂ ಸಿಗುತ್ತೆ ಮದ್ಯ!


ಈ ವರ್ಷದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಉತ್ತಮವಾಗಿ ಆಡಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 86 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಉಳಿದ ಎರಡು ODIಗಳಲ್ಲಿ ಔಟಾಗದೆ 30 ಮತ್ತು 2 ಗಳಿಸಿದರು. ಆ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿತ್ತು.


ಸಂಜು ಸ್ಯಾಮ್ಸನ್​ ದಾಖಲೆ:


28ರ ಹರೆಯದ ಸಂಜು ಸ್ಯಾಮ್ಸನ್ ಇದುವರೆಗೆ 16 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 21.14 ಸರಾಸರಿ ಮತ್ತು 135.15 ಸ್ಟ್ರೈಕ್ ರೇಟ್‌ನಲ್ಲಿ 296 ರನ್ ಗಳಿಸಿದ್ದಾರೆ. ಅವರು ಕೇವಲ 11 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 66ರ ಸರಾಸರಿಯಲ್ಲಿ 330 ರನ್ ಗಳಿಸಿದ್ದಾರೆ. ಅವರ ಪ್ರತಿಭೆಗೆ ಈವರೆಗೂ ಸರಿಯಾದ ಅವಕಾಶ ದೊರಕಿಲ್ಲ.


ಸ್ಯಾಮ್ಸನ್​ ಆಯ್ಕೆ ಆಗದಿರಲು ಕಾರಣವೇನು?:


ಇದೀಗ ಎಲ್ಲರಲ್ಲಿಯೂ ಮೂಡಿರುವ ಸಾಮಾನ್ಯ ಪ್ರಶ್ನೆ ಎಂದರೆ ಅದು ಸಂಜು ಸ್ಯಾಮ್ಸನ್​ ಆಯ್ಕೆ ಆಗದಿರಲು ಕಾರಣವೇನು ಎಂದು. ಅದಕ್ಕೆ ಉತ್ತರ ಹುಡುಕುತ್ತಾ ಹೋದಲ್ಲಿ ಸಿಲ್ಲಿ ಉತ್ತರಗಳೇ ದೊರಕುತ್ತದೆ ಎಂದು ಹೇಳಬಹುದು. ಅದರಲ್ಲಿ ಪ್ರಮುಖವಾಗಿ ರಿಷಭ್ ಪಂತ್​ ಈಗಾಗಲೇ ತಂಡದ ಉಪನಾಯಕರಾಗಿರುವುದರಿಂದ ಅವರನ್ನು ಕಿವೀಸ್ ವಿರುದ್ಧ ತಂಡದಿಂದ ಕೈಬಿಡಲಾಗದು. ಅದರಂತೆ ಕಳೆದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ಉತ್ತಮವಾಗಿ ಕಂಡಬಂದರೂ ಸಹ ಬೌಲಿಂಗ್​ನಲ್ಲಿ ಎಡವಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅರನೇ ಬೌಲರ್ ಅಗತ್ಯವಿದ್ದ ಕಾರಣ ಓರ್ವ ಬ್ಯಾಟರ್ ಅನ್ನು ಹೊರಗಿಡುವುದು ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸುತ್ತಿವೆ. ಇದರಿಂದ ಸಂಜು ಅವಕಾಶ ವಂಚಿತರಾದರು.

Published by:shrikrishna bhat
First published: