ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ (Rishabh Pant) ಅವರನ್ನು ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಉವ ಸಾಧ್ಯತೆ ಕಂಡುಬರುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಂತ್ ಗಾಯದ ಬಗ್ಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳುತ್ತಿದೆ. ಮಂಡಳಿಯು ತನ್ನ ಸ್ಟಾರ್ ಆಟಗಾರನನ್ನು ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲಾ ಸಿದ್ಧತೆಯನ್ನು ಮಾಡುತ್ತಿದೆ. ಅಗತ್ಯವಿದ್ದರೆ ವಿದೇಶಕ್ಕೂ ಕಳುಹಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಶುಕ್ರವಾರ (ಡಿಸೆಂಬರ್ 30) ಮುಂಜಾನೆ ದೆಹಲಿ-ಡೆಹ್ರಾಡೂನ್ (Dehradun) ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 25 ವರ್ಷದ ಪಂತ್ ಗಾಯಗೊಂಡಿದ್ದಾರೆ. ಸದ್ಯ ಅವರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂತ್ ಆರೋಗ್ಯದ ಮೇಲೆ ಬಿಸಿಸಿಐ ನಿಗಾ:
ರಿಷಬ್ ಪಂತ್ ಅವರ ಬಲ ಮೊಣಕಾಲಿನ ಅಸ್ಥಿರಜ್ಜು ಹರಿದಿದೆ ಮತ್ತು ಅವರ ಬಲ ಮಣಿಕಟ್ಟು, ಪಾದದ ಬೆರಳಿಗೆ ಗಾಯವಾಗಿದೆ. ರಿಷಬ್ ಪಂತ್ ಅವರ ಅಸ್ಥಿರಜ್ಜು ಗಾಯಕ್ಕೆ ಈಗ ಬಿಸಿಸಿಐ ವೈದ್ಯಕೀಯ ತಂಡದಿಂದ ಚಿಕಿತ್ಸೆ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಿಸಿಸಿಐ ವೈದ್ಯರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೀಗ ಭಾರತೀಯ ಮಂಡಳಿಯು ಮ್ಯಾಕ್ಸ್ ಆಸ್ಪತ್ರೆಗೆ ಅಸ್ಥಿರಜ್ಜುಗೆ ಚಿಕಿತ್ಸೆ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ಇನ್ನು ಮುಂದೆ ಬಿಸಿಸಿಐ ವೈದ್ಯಕೀಯ ತಂಡದ್ದಾಗಿದೆ ಎಂದು ತಿಳಿಸಿದೆ ಎಂದು ವರದಿಯಾಗಿದೆ.
ವಿದೇಶಕ್ಕೆ ಕಳುಹಿಸುವ ಸಾಧ್ಯತೆ:
ಬ್ಯಾಟ್ಸ್ಮನ್ ರಿಷಬ್ ಪಂತ್ ಕೆಲವು ದಿನಗಳ ನಂತರ ಮ್ಯಾಕ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು. ಇದರ ನಂತರ, ಅವರನ್ನು ಮುಂಬೈಗೆ ಸ್ಥಳಾಂತರಿಸಲಾಗುವುದು, ಅಲ್ಲಿ ಬಿಸಿಸಿಐ ವೈದ್ಯರು ಗಾಯಗೊಂಡ ಪಾದ ಮತ್ತು ಅಸ್ಥಿರಜ್ಜು ಸ್ಥಿತಿಯನ್ನು ಪರಿಶೀಲಿಸುತ್ತಾರೆ ಮತ್ತು ಯಾವ ದರ್ಜೆಯ ಅಸ್ಥಿರಜ್ಜು ಗಾಯಗೊಂಡಿದೆ ಎಂಬುದನ್ನು ನೋಡುತ್ತಾರೆ. ನಂತರ ಅವರನ್ನು ವಿದೇಶಕ್ಕೆ ಕಳುಹಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Rishabh Pant: ರಿಷಭ್ ಪಂತ್ ಐಸಿಯುಗೆ ಶಿಫ್ಟ್, ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸಿದ ಕಿಂಗ್ ಕೊಹ್ಲಿ
ಕ್ರಿಕೆಟ್ನಿಂದ ದೂರ ಉಳಿಯಬಹುದು ಪಂತ್:
ಪಂತ್ ಇನ್ನು 1 ವರ್ಷಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿಯಬಹುದು . ಅಸ್ಥಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಅವರು ಸುಮಾರು 9 ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಅಸ್ಥಿರಜ್ಜು ಫೈಬರ್ಗಳ ಅಂತಹ ಒಂದು ಗುಂಪು ಇದೆ, ಇದು ಎರಡು ಮೂಳೆಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ. ಇದು ಮೂಳೆಯ ಮೇಲೆ ಹೆಚ್ಚುವರಿ ಒತ್ತಡವನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಈ ಗಾಯದಿಂದ ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಪಂತ್ ವೃತ್ತಿಪರ ಆಟಗಾರ ಆಗಿರುವುದರಿಂದ ಫಿಟ್ನೆಸ್ ಬಹಳ ಮುಖ್ಯವಾಗುತ್ತದೆ. ಇದರಿಂದಾಗಿ ಪಂತ್ ಸದ್ಯ ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದರೂ ಅಚ್ಚರಿಯಿಲ್ಲ.
ಪಂತ್ ಜೀವ ಉಳಿಸಿದ ಡ್ರೈವರ್:
ಹೌದು, ರಿಷಭ್ ಪಂತ್ ಕಾರು ಇಂದು ಬೆಳಿಗ್ಗೆ ಅಪಘಾತ ಉಂಟಾದಾಗ ಅಲ್ಲೇ ಸಂಚರಿಸುತ್ತಿದ್ದ ಬಸ್ ಚಾಲಕ ಸುಶೀಲ್ ಕುಮಾರ್ ಎಂಬಾತ ವ್ಯಕ್ತಿ ಪಂತ್ ಅವರನ್ನು ಗುರುತಿಸಿ ಅವರನ್ನು ಕಾಪಾಡಿದ್ದಾರೆ. ಈ ಕುರಿತು ಮಾತನಾಡಿರುವ ಸುಶೀಲ್ ಅವರು, ‘ನಾನು ಕಾರಿನ ಬಳಿ ಹೋಗುವಷ್ಟರಲ್ಲಿ ಕಾರಿಗೆ ಬೆಂಕು ಹೊತ್ತಿಕೊಂಡಿತ್ತು. ಆಗ ಅವರು ನಾನು ರಿಷಭ್ ಪಂತ್ ಎಂದು ತನ್ನ ಐಡೆಂಟಿಟಿಯನ್ನು ಹೇಳಿಕೊಂಡರು. ಇದಾದ ಬಳಿಕ ನಾನು ಕಾರಿನ ಗಾಜು ಒಡೆಯಲು ಸಹಾಯ ಮಾಡಿ, ಅವರನ್ನು ಹೊರಗೆ ಎಳೆದು ಕಾರಿನಿಂದ ದೂರ ಕರೆದು ತಂದೆ‘ ಎಂದು ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ