• Home
  • »
  • News
  • »
  • sports
  • »
  • Rishabh Pant Accident: ರಿಷಭ್​ ಪಂತ್​ ಅಪಘಾತದ ಭಯಾನಕ ವಿಡಿಯೋ, ರಸ್ತೆ ಮಧ್ಯೆ ಪ್ರಜ್ಞಾಹೀನವಾಗಿ ಬಿದ್ದಿದ್ದ ಪಂತ್!

Rishabh Pant Accident: ರಿಷಭ್​ ಪಂತ್​ ಅಪಘಾತದ ಭಯಾನಕ ವಿಡಿಯೋ, ರಸ್ತೆ ಮಧ್ಯೆ ಪ್ರಜ್ಞಾಹೀನವಾಗಿ ಬಿದ್ದಿದ್ದ ಪಂತ್!

ರಿಷಭ್​ ಪಂತ್​

ರಿಷಭ್​ ಪಂತ್​

Rishabh Pant Accident: ಕ್ರಿಕೆಟಿಗ ರಿಷಬ್ ಪಂತ್ ಉತ್ತರಾಖಂಡದಿಂದ ದೆಹಲಿಗೆ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದ ಸಿಸಿ ಟಿವಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

  • Share this:

ಕ್ರಿಕೆಟಿಗ ರಿಷಭ್ ಪಂತ್​ಗೆ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಅವರ ಐಷಾರಾಮಿ ಕಾರು (Car) ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಅಪಘಾತದ ಲೈವ್ ವಿಡಿಯೋದ ಸಿಸಿ ಟಿವಿ (CC TV) ಫುಟೇಜ್​ ಬಂದಿದೆ. ಈ ವಿಡಿಯೋದಲ್ಲಿ ರಿಷಭ್​ ಪಂತ್ (Rishabh Pant)​ ಅತಿಯಾದ ವೇಗವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಅಪಘಾತ ಆಘಾತಕಾರಿ ವಿಡಿಯೋ ಇದೀಗ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಕ್ರಿಕೆಟಿಗ ರಿಷಬ್ ಪಂತ್ ಉತ್ತರಾಖಂಡದಿಂದ ದೆಹಲಿಗೆ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ವ್ಯಾಪಿಸಿದೆ. ಈ ಎಲ್ಲಾ ದೃಶ್ಯಗಳು ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಪಂತ್​ ಐಷಾರಾಮಿ ಕಾರು ಭಸ್ಮ:


ಪಂತ್ ತಮ್ಮ ಐಷಾರಾಮಿ ಕಾರನ್ನು ಚಲಾಯಿಸುತ್ತಿದ್ದರು. ಉತ್ತರಾಖಂಡದ ರೂರ್ಕಿ ಬಳಿ ಬೆಳಗ್ಗೆ 5.15ಕ್ಕೆ ಅಪಘಾತ ಸಂಭವಿಸಿದೆ. ಪಂತ್ ಅವರ ತಲೆ ಮತ್ತು ಬೆನ್ನಿಗೆ ತೀವ್ರ ಪೆಟ್ಟಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ಗೆ ರವಾನಿಸಲಾಗಿದೆ. ರಸ್ತೆಯಲ್ಲಿ ಮಂಜು ಮುಸುಕಿದ ಕಾರಣ ಪಂತ್​ ಅವರಿಗೆ ರಸ್ತೆಯ ಮುಂಭಾಗ ಕಾಣದ ಕಾರಣ ಅಪಘಾತ ನಡೆದಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಆದರೆ ಪಂತ್ ವಾಹನ ಚಲಾಯಿಸುತ್ತಿದ್ದಾಗ ನಿಖರವಾಗಿ ಏನಾಯಿತು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.ಈ ಅಪಘಾತದಲ್ಲಿ ಪಂತ್ ಅವರ ತಲೆಗೆ ಗಾಯವಾಗಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ. ಆದರೆ ಅವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುವುದು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಅಪಘಾತದಿಂದ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ಅವಘಡದಿಂದಾಗಿ ಟೀಂ ಇಂಡಿಯಾ ಕೂಡ ತತ್ತರಿಸಿದೆ. ಪಂತ್ ಅವರನ್ನು ತಂಡದ ಪ್ರಮುಖ ಆಟಗಾರ ಎಂದು ನೋಡಲಾಗುತ್ತದೆ. ಆದರೆ, ಚೇತರಿಸಿಕೊಳ್ಳಲು ಎಷ್ಟು ದಿನ ಬೇಕು ಎಂಬ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ.


ಇದನ್ನೂ ಓದಿ: Rishabh Pant Health Update: ರಿಷಭ್​ ಪಂತ್​ ಆರೋಗ್ಯದ ಬಗ್ಗೆ ಹೊರಬಿತ್ತು ಬಿಗ್​ ಅಪ್​ಡೇಟ್​, ಹೇಗಿದ್ದಾರೆ ಟೀಂ ಇಂಡಿಯಾ ಪ್ಲೇಯರ್​​?


ಪಂತ್​ ಉಪಚರಿಸಿದ ಸ್ಥಳೀಯರು:


ರಿಷಭ ಅಪಘಾತಕ್ಕೀಡಾದಾಗ ರಸ್ತೆಯಲ್ಲಿ ಸಹಾಯ ಮಾಡುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ವೇಗವಾಗಿ ಬಂದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವಿಡಿಯೋದಲ್ಲಿ ಪಂತ್ ಡಿವೈಡರ್ ಮೇಲೆ ಮಲಗಿದ್ದಾರೆ. ಅವರಿಗೆ ಇಬ್ಬರು ವ್ಯಕ್ತಿಗಳು ಸಹಾಯ ಮಾಡುತ್ತಿದ್ದಾರೆ. ಮೂರನೇ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಳಿಗ್ಗೆ 5.30 ರ ಸುಮಾರಿಗೆ ಪಂತ್ ಅವರ ಕಾರು ಅಪಘಾತವಾಗಿದೆ. ಕೊತ್ವಾಲಿ ಮಂಗಳೂರು ವ್ಯಾಪ್ತಿಯ ಮೊಹಮ್ಮದ್‌ಪುರ ಬಳಿ ಅಪಘಾತ ಸಂಭವಿಸಿದೆ. ಪಂತ್ ಹಠಾತ್ತನೆ ನಿದ್ರಿಸಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ತಕ್ಷಣವೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪಂತ್ ಅವರನ್ನು ಮೊದಲು ರೂರ್ಕಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಫೆಬ್ರವರಿ 9 ರಿಂದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಲು ಭಾರತವು ಈ 4 ಟೆಸ್ಟ್ ಸರಣಿಯನ್ನು ಉತ್ತಮ ಅಂತರದಿಂದ ಗೆಲ್ಲಬೇಕಾಗಿದೆ. ಪಂತ್ ಈ ಸರಣಿಗೆ ಫಿಟ್ ಆಗುವ ಸಾಧ್ಯತೆ ಕಡಿಮೆ.

Published by:shrikrishna bhat
First published: