• Home
  • »
  • News
  • »
  • sports
  • »
  • Rishabh Pant: ಕಾರಿನೊಳಗೆ ಸಿಲುಕಿದ್ದ ಪಂತ್‌ ಜೀವ ಉಳಿಸಿದವರು ಇವರೇ! ಪ್ರತ್ಯಕ್ಷದರ್ಶಿಯ ಮಾತು ಕೇಳಿದ್ರೆ ಮೈ ಜುಂ ಅನಿಸುತ್ತೆ!

Rishabh Pant: ಕಾರಿನೊಳಗೆ ಸಿಲುಕಿದ್ದ ಪಂತ್‌ ಜೀವ ಉಳಿಸಿದವರು ಇವರೇ! ಪ್ರತ್ಯಕ್ಷದರ್ಶಿಯ ಮಾತು ಕೇಳಿದ್ರೆ ಮೈ ಜುಂ ಅನಿಸುತ್ತೆ!

ರಿಷಭ್ ಪಂತ್

ರಿಷಭ್ ಪಂತ್

Rishabh Pant: ರಿಷಭ್​ ಪಂತ್​ ಕಾರು ಇಂದು ಬೆಳಿಗ್ಗೆ ಅಪಘಾತ ಉಂಟಾದಾಗ ಅಲ್ಲೇ ಸಂಚರಿಸುತ್ತಿದ್ದ ಬಸ್​ ಚಾಲಕ ಸುಶೀಲ್​ ಕುಮಾರ್ ಎಂಬಾತ ವ್ಯಕ್ತಿ ಪಂತ್​ ಅವರನ್ನು ಗುರುತಿಸಿ ಅವರನ್ನು ಕಾಪಾಡಿದ್ದಾರೆ.

  • Share this:

ಕ್ರಿಕೆಟಿಗ ರಿಷಭ್ ಪಂತ್​ಗೆ ಇಂದು ಭೀಕರ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದು ರಿಷಭ್ ಪಂತ್ (Rishabh Pan) ಅವರ ಐಷಾರಾಮಿ ಕಾರು (Car) ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ. ಆದರೆ ಪವಾಡ ಎಂಬಂತೆ ಪಂತ್​ ಬದುಕುಳಿದಿದ್ದಾರೆ. ಅವರನ್ನು ಜೀವಂತವಾಗಿ ಉಳಿಸಿದ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಷ್ಟರಲ್ಲಿ ಹರಿಯಾಣ (Haryana) ರೋಡ್‌ವೇಸ್‌ ಬಸ್‌ನ ಚಾಲಕ ಸುಶೀಲ್‌ ಕುಮಾರ್‌ ಎಂಬುವವರು ಪಂತ್​ ಅವರನ್ನು ಕಾಪಾಡಿದ್ದಾರೆ. ಅವರು ಮೊದಲು ರಿಷಬ್ ನನ್ನು ಹೊತ್ತಿ ಉರಿಯುತ್ತಿದ್ದ ಕಾರಿನಿಂದ ದೂರ ಕರೆದೊಯ್ದರು. ಬಳಿಕ ಕ್ರಿಕೆಟಿಗನನ್ನು ಆಸ್ಪತ್ರೆಗೆ ಕರೆದೊಯ್ದರು. ಈ ಅಪಘಾತದಲ್ಲಿ ರಿಷಭ್ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ (Dehradun ) ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.


ಪಂತ್​ ಜೀವ ಉಳಿಸಿದ ಡ್ರೈವರ್​:


ಹೌದು, ರಿಷಭ್​ ಪಂತ್​ ಕಾರು ಇಂದು ಬೆಳಿಗ್ಗೆ ಅಪಘಾತ ಉಂಟಾದಾಗ ಅಲ್ಲೇ ಸಂಚರಿಸುತ್ತಿದ್ದ ಬಸ್​ ಚಾಲಕ ಸುಶೀಲ್​ ಕುಮಾರ್ ಎಂಬಾತ ವ್ಯಕ್ತಿ ಪಂತ್​ ಅವರನ್ನು ಗುರುತಿಸಿ ಅವರನ್ನು ಕಾಪಾಡಿದ್ದಾರೆ. ಈ ಕುರಿತು ಮಾತನಾಡಿರುವ ಸುಶೀಲ್​ ಅವರು, ‘ನಾನು ಕಾರಿನ ಬಳಿ ಹೋಗುವಷ್ಟರಲ್ಲಿ ಕಾರಿಗೆ ಬೆಂಕು ಹೊತ್ತಿಕೊಂಡಿತ್ತು. ಆಗ ಅವರು ನಾನು ರಿಷಭ್​ ಪಂತ್​ ಎಂದು ತನ್ನ ಐಡೆಂಟಿಟಿಯನ್ನು ಹೇಳಿಕೊಂಡರು. ಇದಾದ ಬಳಿಕ ನಾನು ಕಾರಿನ ಗಾಜು ಒಡೆಯಲು ಸಹಾಯ ಮಾಡಿ, ಅವರನ್ನು ಹೊರಗೆ ಎಳೆದು ಕಾರಿನಿಂದ ದೂರ ಕರೆದು ತಂದೆ‘ ಎಂದು ಹೇಳಿಕೊಂಡಿದ್ದಾರೆ.


ರಿಷಭ್​ ಅಪಘಾತದ ಬಗ್ಗೆ ಪೊಲೀಸ್​ ವರದಿ:


ಅಪಘಾತದ ಬಗ್ಗೆ ಹರಿದ್ವಾರದ ಎಸ್‌ಎಸ್‌ಪಿ ಅಜಯ್ ಸಿಂಗ್ ಅವರು, ಕ್ರಿಕೆಟಿಗ ರಿಷಭ್ ಪಂತ್ ಅವರು ಹರಿದ್ವಾರ ಜಿಲ್ಲೆಯ ಮಂಗಳೂರಿನಲ್ಲಿ ಬೆಳಿಗ್ಗೆ 5:30ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅವರು ನಿದ್ರಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರು. ಅಪಘಾತದ ಸಮಯದಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಅಲ್ಲಿಂದ ಹಾದು ಹೋಗುತ್ತಿತ್ತು ಎಂದು ಅವರು ಹೇಳಿದರು. ಅದರ ಚಾಲಕ ತಕ್ಷಣ ಬಸ್ ನಿಲ್ಲಿಸಿ ರಿಷಬ್ ಪಂತ್ ಅವರನ್ನು ರಕ್ಷಿಸಿದ್ದಾರೆ. ಇದಾದ ನಂತರ ಪಂತ್ ಅವರನ್ನು ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ಪ್ರಥಮ ಚಿಕಿತ್ಸೆಯ ನಂತರ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Rishabh Pant: ಮೈಮೇಲೆ ಗಾಯ, ರಸ್ತೆ ಮೇಲೆ ಹರಿದ ರಕ್ತ! ಅಪಘಾತದ ಬಳಿಕ ರಿಷಬ್ ಪಂತ ನರಳಾಡಿದ ವಿಡಿಯೋ ವೈರಲ್


ಪಂತ್ ತನ್ನ ತಾಯಿಗೆ ಸರ್​​ಪ್ರೈಸ್​ ನೀಡಲು ನಿರ್ಧರಿಸಿದ್ರು:


ಪಂತ್ ಅವರ ತಲೆ, ಬೆನ್ನು ಮತ್ತು ಕಾಲುಗಳ ಮೇಲೆ ಗಾಯಗಳಾಗಿವೆ ಎಂದು ಎಸ್‌ಎಸ್‌ಪಿ ಹೇಳಿದರು. ಅವರ ಸ್ಥಿತಿ ಸ್ಥಿರವಾಗಿದೆ. ಈ ಅಪಘಾತದ ಬಗ್ಗೆ ಪಂತ್ ಅವರ ತಾಯಿಗೆ ಮಾಹಿತಿ ನೀಡಲಾಗಿದೆ. ಏತನ್ಮಧ್ಯೆ, ಐಸಿಯುನಲ್ಲಿ ಪಂತ್‌ಗೆ ಚಿಕಿತ್ಸೆ ನೀಡುತ್ತಿರುವ ಡಾ. ಸುಶೀಲ್ ನಗರ್, ಪಂತ್‌ಗೆ ತಲೆ ಮತ್ತು ಮೊಣಕಾಲು ಗಾಯಗಳಾಗಿವೆ ಎಂದು ಹೇಳಿದರು. ಆಸ್ಪತ್ರೆಗೆ ಕರೆತಂದಾಗ ಸಂಪೂರ್ಣ ಪ್ರಜ್ಞೆ ಬಂದಿತ್ತು. ಮನೆಗೆ ಹೋಗುವ ಮೂಲಕ ತನ್ನ ತಾಯಿಯನ್ನು ಆಶ್ಚರ್ಯಗೊಳಿಸಬೇಕೆಂದು ಪಂತ್ ವೈದ್ಯರಿಗೆ ಹೇಳಿದ್ದರು. ಅಲ್ಲದೇ ತನಗೆ ಚಿಕ್ಕ ದಾಗಿ ನಿದ್ರೆ ಬಂದ ಕಾರಣ ಈ ಅಪಘಾತ ನಡೆಯಿತು ಎಂದು ಹೇಳಿಕೊಂಡಿದ್ದಾರಂತೆ.


ಮತ್ತೆ ಕ್ರಿಕೆಟ್​ ಆಡ್ತಾರಾ ಪಂತ್​?:


ಪಂತ್​ ಮೊಣಕಾಲಿನ ಇಂಜುರಿಗೆ ಒಳಗಾಗಿದ್ದು, ಲಂಕಾ ಸರಣಿಯಿಂದ ಹೀಗಾಗಿ ದೂರ ಉಳಿಸಿದ್ದರು. ಇದರಿಂದಾಗಿ ಅವರು ಮುಂದಿನ ನ್ಯೂಜಿಲ್ಯಾಂಡ್​ ಸರಣಿಗೆ ಮರಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಅವರ ಕಾಲು ಮುರಿತವಾಗಿರುವುದರಿಂದ ಅವರ ಈ ವರ್ಷದ ಕ್ರಿಕೆಟ್​ ವೃತ್ತಿ ಜೀವನದ ಬಗ್ಗೆ ಅನುಮಾನಗಳು ಮೂಡಿದೆ. ಅಲ್ಲದೇ ಈ ಬಾರಿಯ ಏಕದಿನ ವಿಶ್ವಕಪ್​ಗೆ ಮರಳುತ್ತಾರೆಯೇ ಎಂಬ ಪ್ರಶ್ನೆ ಮೂಡದೆ.

Published by:shrikrishna bhat
First published: