ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj) ತಮ್ಮ ಕಳೆದುಹೋದ ಬ್ಯಾಗ್ ಅನ್ನು ಆದಷ್ಟು ಬೇಗ ಹೈದರಾಬಾದ್ಗೆ (Hyderabad) ತಲುಪಿಸಬೇಕೆಂದು ವಿಸ್ತಾರಾ (Vistara) ಏರ್ಲೈನ್ಸ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿನಂತಿಸಿದ್ದಾರೆ. ಸಿರಾಜ್ ಬಾಂಗ್ಲಾದೇಶ (IND vs BAN) ಪ್ರವಾಸದಿಂದ ಹಿಂತಿರುಗುತ್ತಿದ್ದಾಗ ಅವರ ಒಂದು ಬ್ಯಾಗ್ ನಾಪತ್ತೆಯಾಗಿತ್ತು. ಈ ಬಗ್ಗೆ ಭಾರತೀಯ ವೇಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಟೀಂ ಇಂಡಿಯಾ ಇತ್ತೀಚೆಗೆ ಬಾಂಗ್ಲಾದೇಶವನ್ನು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಲ್ಲಿ ಸೋಲಿಸಿದರೆ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-2 ಅಂತರದಿಂದ ಸೋತಿತ್ತು.
ಬ್ಯಾಗ್ ಕಳೆದುಕೊಂಡ ಸಿರಾಜ್:
28 ವರ್ಷದ ಮೊಹಮ್ಮದ್ ಸಿರಾಜ್ ಅವರು ಢಾಕಾದಿಂದ ದೆಹಲಿ ಮೂಲಕ ಮುಂಬೈಗೆ ವಿಮಾನದಲ್ಲಿ ಬಂದಿದ್ದರು. ಸಿರಾಜ್ ಅವರು 3 ಬ್ಯಾಗ್ಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ಚೆಕ್-ಔಟ್ ಮಾಡಿದರು ಆದರೆ ಈ ಸಮಯದಲ್ಲಿ ಅವರ ಒಂದು ಬ್ಯಾಗ್ ನಾಪತ್ತೆಯಾಗಿದೆ. ಮಂಗಳವಾರ (ಡಿಸೆಂಬರ್ 27) ತಡವಾಗಿ ವಿಸ್ತಾರಾ ಏರ್ಲೈನ್ಸ್ ಅನ್ನು ಟ್ಯಾಗ್ ಮಾಡುವ ಮೂಲಕ ಸಿರಾಜ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಬರೆದಿದ್ದು, 'ಇದು ನನ್ನ ಎಲ್ಲಾ ಅಗತ್ಯಗಳನ್ನು ಹೊಂದಿತ್ತು. ನನ್ನ ಬ್ಯಾಗ್ನ ಹುಡುಕಾಟವನ್ನು ತ್ವರಿತಗೊಳಿಸಿ ಮತ್ತು ಆದಷ್ಟು ಬೇಗ ಬ್ಯಾಗನ್ನು ಹೈದರಾಬಾದ್ಗೆ ತಲುಪಿಸಲು ನಾನು ವಿನಂತಿಸುತ್ತೇನೆ‘ ಎಂದು ಹೇಳಿದ್ದಾರೆ.
It had all my important things. I request you to expedite the process and get the bag delivered to me in Hyderabad Asap. @airvistara
— Mohammed Siraj (@mdsirajofficial) December 27, 2022
ಸಿರಾಜ್ ಟ್ವೀಟ್ಗೆ ಉತ್ತರಿಸಿದ ಏರ್ಲೈನ್ಸ್:
ಮೊಹಮ್ಮದ್ ಸಿರಾಜ್ ಅವರ ಟ್ವೀಟ್ಗೆ ಉತ್ತರಿಸಿದ ವಿಸ್ತಾರ ಏರ್ಲೈನ್ಸ್, ನಿಮ್ಮ ಬ್ಯಾಗ್ ಅನ್ನು ಹುಡುಕಲು ಮತ್ತು ನಿಮಗೆ ತಲುಪಿಸಲು ತಮ್ಮ ಸಿಬ್ಬಂದಿ ಸಂಪೂರ್ಣವಾಗಿ ಸಹಕರಿಸುತ್ತಾರೆ ಎಂದು ವಿಮಾನಯಾನ ಸಂಸ್ಥೆಗಳು ಭರವಸೆ ನೀಡಿವೆ. ಸಿರಾಜ್ ಭಾರತಕ್ಕಾಗಿ 15 ಟೆಸ್ಟ್, 16 ODI ಮತ್ತು 8 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಶ್ರೀಲಂಕಾ ಸರಣಿಗೆ ಭಾರತ ODI ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಇದನ್ನೂ ಓದಿ: Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಶಾಕ್! ಟಿ20 ಕ್ರಿಕೆಟ್ಗೆ ವಿರಾಟ್ ತಾತ್ಕಾಲಿಕ ಬ್ರೇಕ್?
ಶ್ರೀಲಂಕಾ ಸರಣಿಗೆ ಭಾರತದ T20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ ಶಿವಂ ಮಾವಿ, ಮುಖೇಶ್ ಕುಮಾರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ