• Home
  • »
  • News
  • »
  • sports
  • »
  • Dinesh Karthik: ಭಾವನಾತ್ಮಕ ವಿಡಿಯೋ ಹಂಚಿಕೊಂಡ ಕಾರ್ತಿಕ್​, ಕ್ರಿಕೆಟ್​ನಿಂದ ದೂರವಾಗ್ತಾರಾ RCB ಆಟಗಾರ?

Dinesh Karthik: ಭಾವನಾತ್ಮಕ ವಿಡಿಯೋ ಹಂಚಿಕೊಂಡ ಕಾರ್ತಿಕ್​, ಕ್ರಿಕೆಟ್​ನಿಂದ ದೂರವಾಗ್ತಾರಾ RCB ಆಟಗಾರ?

ದಿನೇಶ್ ಕಾರ್ತಿಕ್

ದಿನೇಶ್ ಕಾರ್ತಿಕ್

Dinesh Karthik: ಭಾರತೀಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ತಮ್ಮ ಮನಸ್ಸಿನಲ್ಲಿನ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದು ನಿಜವೇ ಆಗಿದ್ದರೆ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗದ ಸಂಗತಿ ಎನ್ನಲಾಗುತ್ತಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಭಾರತೀಯ ಕ್ರಿಕೆಟಿಗ, ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ನವೆಂಬರ್ 23 ರಂದು ತಮ್ಮ ಇನ್ಸ್ಟಾಗ್ರಾಂನಲ್ಲಿ (Instagram) ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ನಿವೃತ್ತಿ ಕುರಿತು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ 2022ರಲ್ಲಿ (T20 World Cup) ದಿನೇಶ್ ಕಾರ್ತಿಕ್ ಅವರು ತಮ್ಮ ಸಮಯವನ್ನು ಹೇಗೆ ಕಳೆದರು ಮತ್ತು ಕೊನೆಯ ಬಾರಿಗೆ ಆಡಿದ ನಂತರ ಅವರು ತಮ್ಮ ಕುಟುಂಬ ಮತ್ತು ತಂಡದ ಸಹ ಆಟಗಾರರೊಂದಿಗೆ ಗುಣಮಟ್ಟದ ಕ್ಷಣಗಳನ್ನು ಹೇಗೆ ಆನಂದಿಸಿದರು ಎಂಬುದನ್ನು ಈ ವೀಡಿಯೊದಲ್ಲಿ ತೋರಿಸಿದ್ದಾರೆ. ಇದನ್ನು ನೋಡಿದ ಅನೇಕರು ಅವರು ಈಗಲೇ ತಮ್ಮ ನಿವೃತ್ತಿಯ ಬಗ್ಗೆ ಸೂಚನೆ ನೀಡುತ್ತಿದ್ದಾರೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ.


ಭಾವನಾತ್ಮಕ ವಿಡಿಯೋ ಹಂಚಿಕೊಂಡ ಡಿಕೆ:


ಟೀಂ ಇಂಡಿಯಾ ಡ್ಯಾಶಿಂಗ್​ ಫಿನಿಶರ್​ ದಿನೇಶ್ ಕಾರ್ತಿಕ್​ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ವಿಡಿಯೋ ಕೆಳಗೆ ಬರೆದುಕೊಂಡಿದ್ದಾರೆ. ಇನ್ನು, ಟಿ20 ವಿಶ್ವಕಪ್ ತಂಡದಲ್ಲಿ ಇರಬೇಕೆಂಬುದು ನನ್ನ ಕನಸು ಎಂದು ಕಾರ್ತಿಕ್ ಕೆಲ ದಿನಗಳಿಂದ ಹೇಳುತ್ತಿದ್ದರು. ತನ್ನ ದೀರ್ಘಾವಧಿಯ ಗುರಿಯನ್ನು ಸಾಧಿಸಿದ ಕಾರ್ತಿಕ್ ತನ್ನೊಂದಿಗೆ ಪ್ರಯಾಣಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮನ್ನು ರಾಷ್ಟ್ರೀಯ ತಂಡಕ್ಕೆ ಕರೆತಂದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.









View this post on Instagram






A post shared by Dinesh Karthik (@dk00019)





ಕ್ರಿಕೆಟ್​ನಿಂದ ದೂರವಾಗ್ತಾರಾ ಡಿಕೆ?:


ಇನ್ನು, ಈ ಎಮೋಷನಲ್ ವಿಡಿಯೋ ನೋಡಿದರೆ ಮತ್ತೆ ನೀಲಿ ಜರ್ಸಿ ತೊಡುವ ಸಾಧ್ಯತೆಗಳೇ ಇಲ್ಲ ಎನಿಸುತ್ತಿದೆ. ‘ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಆಡಲು ನಾನು ಶ್ರಮಿಸಿದ್ದೇನೆ. ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಇದು ನನ್ನ ಜೀವನದಲ್ಲಿ ಹಲವು ಸಿಹಿ ನೆನಪುಗಳನ್ನು ಉಳಿಸಿದೆ. ನನ್ನ ಸಹ ಆಟಗಾರರು, ತರಬೇತುದಾರರು, ಸ್ನೇಹಿತರು, ವಿಶೇಷವಾಗಿ ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ಧನ್ಯವಾದಗಳು. ಕನಸು ನನಸಾಯಿತು‘ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನು ನೋಡಿದ ಅನೇಕರು ಡಿಕೆ ನಿವೃತ್ತಿಯ ಮುನ್ಸೂಚನೆ ನೀಡುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: IND vs BAN: ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ಜಡೇಜಾ ಔಟ್, ಎಡಗೈ ಆಲ್‌ರೌಂಡರ್‌ಗೆ ಸಿಕ್ತು ಚಾನ್ಸ್ ​


ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಟ್ವೆಂಟಿ-20 ವಿಶ್ವಕಪ್‌ನಲ್ಲಿ 22 ಎಸೆತಗಳನ್ನು ಆಡಿ, ಕೇವಲ 14 ರನ್ ಗಳಿಸಿದ ನಂತರ ಈ ಅನುಭವಿ ಆಟಗಾರನಿಗೆ ಅವಕಾಶ ಸಿಗಲಿಲ್ಲ. ಆದರೆ, ಡಿಕೆಯನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಇನ್ನೂ ಪರಿಗಣಿಸಬಹುದು ಎಂದು ಮಾಜಿ ಆಯ್ಕೆಗಾರ ಚೇತನ್ ಶರ್ಮಾ ಹೇಳಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗಾರರು ತಂಡಕ್ಕೆ ವಾಪಸ್ ತೆಗೆದುಕೊಳ್ಳುತ್ತಾರೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.




ಬಾಂಗ್ಲಾ ಸರಣಿಗೂ ಆಯ್ಕೆ ಆಗದ ಕಾರ್ತಿಕ್:


ಇನ್ನು, ದಿನೇಶ್ ಕಾರ್ತಿಕ್ ಅವರನ್ನು ಮುಂಬರುವ ಬಾಂಗ್ಲಾದೇಶ ಸರಣಿಯಿಂದಲೂ ಕೈಬಿಡಲಾಗಿದೆ. ಬಾಂಗ್ಲಾ ವಿರುದ್ಧದ 3 ಪಂದ್ಯಗಳ  ಏಕದಿನ ಸರಣಿಗೆ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ವಿಕೆಟ್​ ಕೀಪರ್ ಸ್ಥಾನಕ್ಕೆ ಇಶನ್ ಕಿಶನ್ ಮತ್ತು ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದಾಗಿ ಈ ಸರಣಿಯಿಂದಲೂ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಡಲಾಗಿದೆ. ಹೀಗಾಗಿ ಅನೇಕರು ಡಿಕೆ ಸದ್ಯದಲ್ಲಿಯೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಈ ಕುರಿತು ಅವರು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Published by:shrikrishna bhat
First published: