ಟೀಂ ಇಂಡಿಯಾ ಲಂಡನ್ ಹೈಕಮಿಶನ್ ಭೇಟಿ; ವಿರುಷ್ಕಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಕಿಡಿ

news18
Updated:August 8, 2018, 4:34 PM IST
ಟೀಂ ಇಂಡಿಯಾ ಲಂಡನ್ ಹೈಕಮಿಶನ್ ಭೇಟಿ; ವಿರುಷ್ಕಾ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಕಿಡಿ
news18
Updated: August 8, 2018, 4:34 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್​ ಆರಂಭಕ್ಕೂ ಮುನ್ನ ಲಂಡನ್​ನಲ್ಲಿರುವ ಭಾರತೀಯ ಹೈಕಮಿಶನ್ ಕಚೇರಿಗೆ ಭೇಟಿ ನೀಡಿದೆ. ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೇರಿದಂತೆ ಇಡೀ ಭಾರತ ತಂಡವೇ ಭಾರತದ ಹೈಕಮಿಷನ್ ಕಚೇರಿಗೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದೆ.

ಆದರೆ ಕೊಹ್ಲಿ ಜೊತೆಯಲ್ಲಿ ಅನುಷ್ಕಾ ಕೂಡ ಕಾಣಿಸಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮೂರನೇ ಟೆಸ್ಟ್ ಮುಗಿಯುವ ವರೆಗೆ ಟೀಂ ಇಂಡಿಯಾ ಆಟಗಾರರು ತನ್ನ ಪ್ರೇಯಸಿ ಅಥವಾ ಪತ್ನಿಯಿಂದ ದೂರವಿರಬೇಕೆಂದು ಬಿಸಿಸಿಐ ಸೂಚಿಸಿತ್ತು. ಆದರೆ ಅನುಷ್ಕಾ ಅವರು ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಹಿಂದಕ್ಕೆ ಸರಿಸಿ ಕೊಹ್ಲಿ ಜೊತೆ ಅನುಷ್ಕಾ ಅವರು ಮೊದಲ ಸ್ಥಾನದಲ್ಲಿ ನಿಂತು ಫೋಟೋಕ್ಕೆ ಪೋಸ್ ನೀಡಿದ್ದಕ್ಕೆ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 


Loading...ಸದ್ಯ ಮೊದಲ ಟೆಸ್ಟ್​​ನಲ್ಲಿ ಸೋಲುಂಡು ನಾಳೆಯಿಂದ ಲಾರ್ಡ್ಸ್​​ನಲ್ಲಿ ಆರಂಭವಾಗುವ ದ್ವಿತೀಯ ಟೆಸ್ಟ್​ಗೆ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ