• Home
  • »
  • News
  • »
  • sports
  • »
  • Team India: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ ಆರಂಭ?; ಇಲ್ಲಿದೆ ಸಂಪೂರ್ಣ ಮಾಹಿತಿ

Team India: ಟೀಂ ಇಂಡಿಯಾ ಮುಂದಿನ ಸರಣಿ ಯಾರ ವಿರುದ್ಧ? ಯಾವಾಗ ಆರಂಭ?; ಇಲ್ಲಿದೆ ಸಂಪೂರ್ಣ ಮಾಹಿತಿ

IND vs NZ

IND vs NZ

Team India: ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ 3 ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಸರಣಿಯ ಮೊದಲ ಟಿ20 ಪಂದ್ಯ ನವೆಂಬರ್ 18 ರಂದು ವೆಲ್ಲಿಂಗ್ಟನ್‌ ಸ್ಟೇಡಿಯಂನಲ್ಲಿ ನಡೆಯಲಿದೆ.

  • Share this:

ಟಿ20 ವಿಶ್ವಕಪ್ ನಂತರ  ಭಾರತೀಯ ಕ್ರಿಕೆಟ್ ತಂಡವು ಈಗ ನ್ಯೂಜಿಲೆಂಡ್ (IND vs NZ) ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಸೀಮಿತ ಓವರ್ ಸರಣಿಯನ್ನು ಆಡಬೇಕಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆಗಳನ್ನುಮಾಡಲಾಗಿದ್ದು, ಅದರಂತೆ ಕೆಲ ಹಿರಿಯ ಆಟಗಾರರು ಮತ್ತು ಟಿ20 ವಿಶ್ವಕಪ್​ ನಲ್ಲಿ (T20 World Cup) ಭಾಗವಹಿಸಿದ್ದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಟಿ20 ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಏಕದಿನ ಸರಣಿಗೆ ಶಿಖರ್ ಧವನ್ (Shikhar Dhawan) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದರ ನಡುವೆ ಕೋಚ್​ ದ್ರಾವಿಡ್​ ಅವರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.


ಕಿವೀಸ್​ ಸರಣಿಗೆ ಲಕ್ಷ್ಮಣ್ ಕೋಚ್​?:


 ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ‘ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬೌಲಿಂಗ್ ಕೋಚ್ ಪಾರಸ್ ಮಾಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ T20 ವಿಶ್ವಕಪ್‌ನಲ್ಲಿ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಆದರೆ ಈ ಟಿ20 ವಿಶ್ವಕಪ್​ ತಂಡಕ್ಕೆ ವಿಶ್ರಾಂತಿ ನೀಡಲಾಗುವುದು. ವಿಶ್ರಾಂತಿಯ ನಂತರ, ಈ ಎಲ್ಲಾ ಕೋಚಿಂಗ್ ಸಿಬ್ಬಂದಿ ನಂತರ ಭಾರತ ತಂಡದೊಂದಿಗೆ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗುತ್ತಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಜೊತೆಗೆ ಬ್ಯಾಟಿಂಗ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮತ್ತು ಬೌಲಿಂಗ್ ಕೋಚ್ ಸಾಯಿರಾಜ್ ಬಹುಲೆ ಕೋಚಿಂಗ್ ಸಿಬ್ಬಂದಿಯಲ್ಲಿರುತ್ತಾರೆ. ಅದೇ ರೀತಿ ವಿವಿಎಸ್ ಲಕ್ಷ್ಮಣ್ ಅವರು ದ್ರಾವಿಡ್ ಬದಲಿಗೆ ಕೋಚ್​ ಆಗಿ ಕಿವೀಸ್ ಸರಣಿಗೆ ಆಯ್ಕೆ ಆಗಬಹುದು ಎನ್ನಲಾಗುತ್ತದೆ.


ಭಾರತದ- ನ್ಯೂಜಿಲೆಂಡ್ ಸರಣಿ ವೇಳಾಪಟ್ಟಿ


1ನೇ ಟಿ20: ನವೆಂಬರ್ 18, ವೆಲ್ಲಿಂಗ್ಟನ್‌ - ಮಧ್ಯಾಹ್ನ 12 ಗಂಟೆಗೆ ಆರಂಭ (ಭಾರತೀಯ ಕಾಲಮಾನ)
2ನೇ ಟಿ20: ನವೆಂಬರ್ 20, ಮೌಂಟ್ ಮೌಂಗನು - ಮಧ್ಯಾಹ್ನ 12 ಗಂಟೆಗೆ ಆರಂಭ
3ನೇ ಟಿ20: ನವೆಂಬರ್ 22, ನೇಪಿಯರ್‌ - ಮಧ್ಯಾಹ್ನ 12 ಗಂಟೆಗೆ ಆರಂಭ


ಮೊದಲ ODI: ನವೆಂಬರ್ 25, ಆಕ್ಲೆಂಡ್‌ -ಬೆಳಗ್ಗೆ 7 ಗಂಟೆಗೆ ಆರಂಭ
2ನೇ ODI: ನವೆಂಬರ್ 27, ಹ್ಯಾಮಿಲ್ಟನ್‌ - ಬೆಳಗ್ಗೆ 7 ಗಂಟೆಗೆ ಆರಂಭ
3ನೇ ODI: ನವೆಂಬರ್ 30, ಕ್ರೈಸ್ಟ್‌ಚರ್ಚ್‌ - ಬೆಳಗ್ಗೆ 7 ಗಂಟೆಗೆ ಆರಂಭ


ಇದನ್ನೂ ಓದಿ: Team India: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ, ರೋಹಿತ್ ಬದಲು ಟಿ20 ಕ್ರಿಕೆಟ್​ಗೆ ಹೊಸ ನಾಯಕ?


ನ್ಯೂಜಿಲ್ಯಾಂಡ್ ಸರಣಿಗೆ ಭಾರತ ತಂಡ:


ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ), ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಯಾದವ್, ಹರ್ಷಲ್ ಪಟೇಲ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.


ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್ ಮಲಿಕ್, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್ ಮತ್ತು ಅರ್ಷದೀಪ್ ಸಿಂಗ್.

Published by:shrikrishna bhat
First published: