• Home
  • »
  • News
  • »
  • sports
  • »
  • Team India: 30 ದಿನಗಳಲ್ಲಿ 12 ಪಂದ್ಯಗಳು, ಇಲ್ಲಿದೆ ಟೀಂ ಇಂಡಿಯಾದ 2023ರ ವೇಳಾಪಟ್ಟಿ

Team India: 30 ದಿನಗಳಲ್ಲಿ 12 ಪಂದ್ಯಗಳು, ಇಲ್ಲಿದೆ ಟೀಂ ಇಂಡಿಯಾದ 2023ರ ವೇಳಾಪಟ್ಟಿ

ಟೀಂ ಇಂಡಿಯಾ

ಟೀಂ ಇಂಡಿಯಾ

Team India: ಟೀಂ ಇಂಡಿಯಾ ಹೊಸ ವರ್ಷವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಇದೇ ಜನವರಿ 3ರಿಂದ ಟಿ20 ಪಂದ್ಯದ ಸರಣಿ ಆರಂಭವಾಗಲಿದೆ. ಬಳಿಕ 3 ಪಂದ್ಯದ ಏಕದಿನ ಸರಣಿಯನ್ನು ಭಾರತ ತಂಡ ಆಡಲಿದೆ.

  • Share this:

ಹಾರ್ದಿಕ್ ಪಾಂಡ್ಯ ನಾಯಕನಾಗಿ 2023ರ ಹೊಸ ವರ್ಷವನ್ನು ಪ್ರಾರಂಭಿಸಲಿದ್ದಾರೆ. ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ 3 ಪಂದ್ಯಗಳ T20 ಸರಣಿ  ಜನವರಿ 3 ರಿಂದ ಪ್ರಾರಂಭವಾಗಲಿದೆ. ಈ ಸರಣಿಗೆ ಪಾಂಡ್ಯ (Hardik Pandya) ಅವರಿಗೆ ನಾಯಕತ್ವ ನೀಡಲಾಗಿದೆ. ಇದಾದ ಬಳಿಕ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ. ಇದಾದ ಬಳಿಕ ಭಾರತ ತಂಡ ತವರಿನಲ್ಲಿ ನ್ಯೂಜಿಲೆಂಡ್‌ (IND vs NZ) ವಿರುದ್ಧ ಟಿ20 ಮತ್ತು ಏಕದಿನ ಸರಣಿಯನ್ನು ಆಡಲಿದೆ. ಈ ಮೂಲಕ 30 ದಿನಗಳಲ್ಲಿ ಒಟ್ಟು 12 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ನಾಯಕತ್ವವನ್ನು ರೋಹಿತ್ ಶರ್ಮಾ (Rohit Sharma) ವಹಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ರೋಹಿತ್, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರಿಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ನ್ಯೂಜಿಲೆಂಡ್ ಸರಣಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಹೊಸ ಆಯ್ಕೆ ಸಮಿತಿ ಈ ಸರಣಿಗೆ ತಂಡವನ್ನು ಪ್ರಕಟಿಸಲಿದೆ.


ಭಾರತ-ಶ್ರೀಲಂಕಾ ಸರಣಿ:


ಜನವರಿ 3 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಮೊದಲ ಟಿ20 ಪಂದ್ಯದ ಮೂಲಕ ಎದುರಿಸಲಿದೆ. ಎರಡನೇ ಟಿ20 ಜನವರಿ 5 ರಂದು ಪುಣೆಯಲ್ಲಿ ನಡೆಯಲಿದ್ದು, ಕೊನೆಯ ಟಿ20 ಜನವರಿ 7 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಭಾರತ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ODI ಜನವರಿ 10 ರಂದು ಗುವಾಹಟಿಯಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜನವರಿ 12 ರಂದು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಮೂರನೇ ಮತ್ತು ಅಂತಿಮ ಏಕದಿನ ಜನವರಿ 15 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.


ಭಾರತ-ನ್ಯೂಜಿಲ್ಯಾಂಡ್​ ಸರಣಿ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯು ಜನವರಿ 18ರಿಂದ ಪ್ರಾರಂಭವಾಗಲಿದೆ . ಮೊದಲು ಉಭಯ ದೇಶಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ಪಂದ್ಯ ಜನವರಿ 18 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜನವರಿ 21 ರಂದು ರಾಯ್‌ಪುರದಲ್ಲಿ ನಡೆಯಲಿದ್ದು, ಮೂರನೇ ಮತ್ತು ಅಂತಿಮ ಏಕದಿನ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ. ಟಿ20 ಸರಣಿಯ ಮೊದಲ ಪಂದ್ಯ ಜನವರಿ 27 ರಂದು ರಾಂಚಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜನವರಿ 29 ರಂದು ಲಕ್ನೋದಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಫೆಬ್ರವರಿ 1 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರ ನಂತರ ಭಾರತ ಫೆಬ್ರವರಿ 9 ರಿಂದ ಆಸ್ಟ್ರೇಲಿಯಾದಿಂದ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರಾರಂಭವಾಗಲಿದೆ.


ಇದನ್ನೂ ಓದಿ: Rishabh Pant: ಮುಂಬೈಗೆ ಶಿಫ್ಟ್​ ಆಗ್ತಾರಾ ರಿಷಭ್​ ಪಂತ್​? ಹೆಚ್ಚಿನ ಚಿಕಿತ್ಸೆಗೆ ಮುಂದಾದ BCCI


ಶ್ರೀಲಂಕಾ ಸರಣಿಗೆ ಭಾರತೀಯ ತಂಡ:


ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ರಿತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಅರ್ಶ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಹರ್ಷಲ್ ಪಟೇಲ್.


ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

Published by:shrikrishna bhat
First published: