• Home
  • »
  • News
  • »
  • sports
  • »
  • Team India: ಅಕ್ಟೋಬರ್​ ತಿಂಗಳಲ್ಲಿನ ಟೀಂ ಇಂಡಿಯಾದ ವೇಳಾಪಟ್ಟಿ, ಇಲ್ಲಿದೆ ಲೈವ್​ ಸ್ಟ್ರೀಮಿಂಗ್​ ಸಂಪೂರ್ಣ ವಿವರ

Team India: ಅಕ್ಟೋಬರ್​ ತಿಂಗಳಲ್ಲಿನ ಟೀಂ ಇಂಡಿಯಾದ ವೇಳಾಪಟ್ಟಿ, ಇಲ್ಲಿದೆ ಲೈವ್​ ಸ್ಟ್ರೀಮಿಂಗ್​ ಸಂಪೂರ್ಣ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ಭಾರತ ತಂಡ ಅಕ್ಟೋಬರ್​ ತಿಂಗಳಿನಲ್ಲಿ ಸಾಲು ಸಾಲು ಪಂದ್ಯಗಳನ್ನಾಡಲಿದೆ. ಅದರಲ್ಲಿಯೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ನಂತರ ಟಿ20 ವಿಶ್ವಕಪ್​ ನಂತಹ ಮೆಗಾ ಟೂರ್ನಿಗಳನ್ನು ಆಡಲಿದ್ದು, ಅದರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

  • Share this:

ಟೀಂ ಇಂಡಿಯಾವು (Team India) ಸದ್ಯ ಬಿಡುವಿಲ್ಲದ ವೇಳಾಪಟ್ಟಿಯಿಂದ ಕೂಡಿದೆ. ಸತತ ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ಭಾರತ ತಂಡದ ಆಟಗಾರರು ತೊಡಗಿಕೊಂಡಿದ್ದಾರೆ. ಅದರ ಭಾಗವಾಗಿ ಅಕ್ಟೋಬರ್​ ತಿಂಗಳಲ್ಲಿ ಟೀಂ ಇಂಡಿಯಾವು ದಕ್ಷಿಣ ಆಫ್ರಿಕಾ (IND vs SA) ವಿರುದ್ಧದ ಟಿ20 ಸರಣಿ ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಬಳಿಕ ICC ಟಿ20 ವಿಶ್ವಕಪ್​ಗಾಗಿ (T20 World Cup) ಆಸ್ಟ್ರೇಲಿಯಾಗೆ ತೆರಳಲಿದ್ದು, ಅಲ್ಲಿಯೂ ಇದೇ ತಿಂಗಳಿನಲ್ಲಿ ತನ್ನ ವಿಶ್ವಕಪ್​ ಪ್ರಯಾಣವನ್ನು ಆರಂಭಿಸಲಿದೆ. ಅದರಲ್ಲಿಯೂ ಅಕ್ಟೋಬರ್ 23ರಂದು ಪಾಕಿಸ್ತಾನ ಎದುರು ತನ್ನ ಮೊದಲ ಪಂದ್ಯ ಆಡಲಿದ್ದು, ಇದೊಂದು ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಹಾಗಿದ್ದರೆ ಈ ತಿಂಗಳಲ್ಲಿನ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್​ ಸ್ಟ್ರೀಮಿಂಗ್​ ನ ವಿವರಗಳನ್ನು ತಿಳಿಯೋಣ ಬನ್ನಿ.


ಅಕ್ಟೋಬರ್ ತಿಂಗಳ ಟೀಂ ಇಂಡಿಯಾದ ವೇಳಾಪಟ್ಟಿ:


ಅಕ್ಟೋಬರ್ 2: ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20
ಅಕ್ಟೋಬರ್ 4: ಭಾರತ vs ದಕ್ಷಿಣ ಆಫ್ರಿಕಾ, 3ನೇ ಟಿ20
ಅಕ್ಟೋಬರ್ 6: ಭಾರತ vs ದಕ್ಷಿಣ ಆಫ್ರಿಕಾ, 1ನೇ ಏಕದಿನ
ಅಕ್ಟೋಬರ್ 9: ಭಾರತ vs ದಕ್ಷಿಣ ಆಫ್ರಿಕಾ, 2 ನೇ ಏಕದಿನ
ಅಕ್ಟೋಬರ್ 11: ಭಾರತ vs ದಕ್ಷಿಣ ಆಫ್ರಿಕಾ, 3ನೇ ಏಕದಿನ


ಅಕ್ಟೋಬರ್ 17: ಆಸ್ಟ್ರೇಲಿಯಾ vs ಭಾರತ ಟಿ20 ವಿಶ್ವಕಪ್​ ಅಭ್ಯಾಸ ಪಂದ್ಯ
ಅಕ್ಟೋಬರ್ 19: ನ್ಯೂಜಿಲೆಂಡ್ vs ಭಾರತ ಟಿ20 ವಿಶ್ವಕಪ್​ ಅಭ್ಯಾಸ ಪಂದ್ಯ
ಅಕ್ಟೋಬರ್ 23: ಭಾರತ vs ಪಾಕಿಸ್ತಾನ, ಸೂಪರ್ 12 ಪಂದ್ಯ ಟಿ20 ವಿಶ್ವಕಪ್​
ಅಕ್ಟೋಬರ್ 27: ಭಾರತ vs A2 (ಕ್ವಾಲಿಫೈಯರ್) ಸೂಪರ್ 12 ಪಂದ್ಯ ಟಿ20 ವಿಶ್ವಕಪ್​
ಅಕ್ಟೋಬರ್ 30: ಭಾರತ vs ದಕ್ಷಿಣ ಆಫ್ರಿಕಾ ಸೂಪರ್ 12 ಪಂದ್ಯ ಟಿ20 ವಿಶ್ವಕಪ್​


ಇದನ್ನೂ ಓದಿ: IND vs SA 2nd T20: ಇಂದು ಭಾರತ-ಆಫ್ರಿಕಾ ಪಂದ್ಯ, ಐತಿಹಾಸಿಕ ದಾಖಲೆ ನಿರ್ಮಿಸುತ್ತಾ ಟೀಂ ಇಂಡಿಯಾ? ಇಲ್ಲಿದೆ ಪ್ಲೇಯಿಂಗ್​ 11


ಟೀಂ ಇಂಡಿಯಾ ಪಂದ್ಯಗಳನ್ನು ಎಲ್ಲಿ ವೀಕ್ಷಿಸಬಹುದು:


ಟೀಂ ಇಂಡಿಯಾವು ಅಕ್ಟೋಬರ್​ ತಿಂಗಳಲ್ಲಿ ಅನೇಕ ದಕ್ಷಿಣ ಆಫ್ರಿಕಾ ಸರಣಿ ಮತ್ತು ಟಿ20 ವಿಶ್ವಕಪ್​ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರದಲ್ಲಿ ನೋಡಬಹುದು.ಅಲ್ಲದೇ ನೀವು ಈ ಪಂದ್ಯಗಳನ್ನು ಲೈವ್ ಆಗಿ ಡಿಸ್ನಿ+ ಹಾಟ್‌ಸ್ಟಾರ್ ಗಳಲ್ಲಿ ಲೈವ್ ಸ್ಟ್ರೀಮ್ ಮಾಡುತ್ತದೆ.


ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ:


ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಅಶ್ವಿನ್, ಅರ್ಷದೀಪ್, ಹರ್ಷಲ್ ಪಟೇಲ್, ದೀಪಕ್ ಚಹಾರ್.


ಇದನ್ನೂ ಓದಿ: Sarfaraz Khan: ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಮತ್ತೊಬ್ಬ ಯಂಗ್​ ಪ್ಲೇಯರ್​, 29 ಪಂದ್ಯಗಳಲ್ಲಿ 10 ಶತಕ


2022ರ ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ (ಗಾಯದ ಸಮಸ್ಯೆ ಕಾರಣ ಇವರ ಆಯ್ಕೆ ಬಗ್ಗೆ ಈವರೆಗೂ ಯಾವ ಅಧಿಕೃತ ಮಾಹಿತಿ ಇಲ್ಲ), ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Published by:shrikrishna bhat
First published: