Rahul Sharma: ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಟಗಾರ

Rahul Sharma: ಪಂಜಾಬ್​ ಮೂಲಕ ಟೀಂ ಇಂಡಿಯಾ ಆಟಗಾರರಾಗಿದ್ದ ರಾಹುಲ್ ಶರ್ಮಾ ಅವರು ಇದೀಗ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. 

ರಾಹುಲ್ ಶರ್ಮಾ

ರಾಹುಲ್ ಶರ್ಮಾ

  • Share this:
ಏಷ್ಯಾ ಕಪ್​ 2022ರ (Asia Cup 2022) 15ನೇ ಆವೃತ್ತಿಯು ದುಬೈನಲ್ಲಿ (Dubai) ನಡೆಯುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಸದ್ಯ ಟೀಂ ಇಂಡಿಯಾ (Team India) ಆಟಗಾರರು ಬ್ಯುಸಿಯಾಗಿದ್ದಾರೆ. ಇದರ ನಡುವೆ ಭಾರತದ ಆಟಗಾರರೊಬ್ಬರು ತಮ್ಮ ಕ್ರಿಕೆಟ್​ನ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಹೌದು, ಪಂಜಾಬ್‌ನ ಸ್ಪಿನ್ನರ್ ರಾಹುಲ್ ಶರ್ಮಾ (Rahul Sharma) ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆಯ ಎಲ್ಲಾ ಮಾದರಿಗಳಿಗೂ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಶರ್ಮಾ ಅವರು ತಮ್ಮ ನಿವೃತ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ವೇಳೆ ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಟೀಂ ಇಂಡಿಯಾ ಮತ್ತು ಐಪಿಎಲ್​ ನಲ್ಲಿ ತಮ್ಮ ಸ್ಪಿನ್​ ಮೂಲಕ ಸಖತ್ ಮೋಡಿ ಮಾಡಿದ್ದರು. ಆದರೆ ಮುಖದ ಪಾರ್ಶ್ವವಾಯು ಕಾರಣ ಅವರು ಕ್ರಿಕೆಟ್​ನಿಂದ ದೂರ ಉಳಿಯಬೇಕಾಯಿತು.

ಕ್ರಿಕೆಟ್​ಗೆ ವಿದಾಯ ಹೇಳಿದ ರಾಹುಲ್ ಶರ್ಮಾ:

ಪಂಜಾಬ್​ ಮೂಲಕ ಟೀಂ ಇಂಡಿಯಾ ಆಟಗಾರರಾಗಿದ್ದ ರಾಹುಲ್ ಶರ್ಮಾ ಅವರು ಇದೀಗ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. 2011ರಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ ರಾಹುಲ್ ಶರ್ಮಾ ಅವರಿಗೆ ಬೆಲ್ ಪಾಲ್ಸಿ (ಮುಖದ ಪಾರ್ಶ್ವವಾಯು) ಸಮಸ್ಯೆಗೀಡಾಗಿದ್ದರು. ಹೀಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಾಗೂ ಐಪಿಎಲ್​ನಿಂದ ಕೂಡ ಹೊರಗುಳಿಯಬೇಕಾಯಿತು. ಇವರು ಭಾರತದ ಪರ 4 ಏಕದಿನ ಮತ್ತು 2 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಒಟ್ಟು 9 ವಿಕೆಟ್​ಗಳನ್ನು ಪಡೆದಿದ್ದರು.

ಇನ್ನು, ತಮ್ಮ ನಿವೃತ್ತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುವ ಅವರು, ‘ಈ ಅದ್ಭುತ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಅಭಿಮಾನಿಗಳು ಮತ್ತು ಬಿಸಿಸಿಐಗೆ ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ. ಶರ್ಮಾ ರಾಹುಲ್ ದ್ರಾವಿಡ್, ಗೌತಮ್ ಗಂಭೀರ್​ ಸೆಹ್ವಾಗ್​ ಮಹೇಂದ್ರ ಸಿಂಗ್ ಧೋನಿ ಅಂತಹ ಗಿಗ್ಗಜ ಆಟಗಾರರೊಂದಿಗೆ ಆಡಿದ್ದಾರೆ.

ಇದನ್ನೂ ಓದಿ:Asia Cup 2022: ದಾಖಲೆ ಬರೆದ ಇಂಡೋ-ಪಾಕ್​ ಕದನ, ಆದ್ರೂ RCB ರೆಕಾರ್ಡ್​ ಹತ್ರ ಬರೋಕೇ ಎರಡು ಗುಂಡಿಗೆ ಬೇಕು!

ರಾಹುಲ್ ಶರ್ಮಾ ವೃತ್ತಿ ಜೀವನ:

ರಾಹುಲ್ ಶರ್ಮಾ ಅವರು 2011ರಲ್ಲಿ ಭಾರತದ ಪರ ಕಣಕ್ಕಿಳಿದರು. ಅವರು ಟೀಂ ಇಂಡಿಯಾ ಪರ ಒಟ್ಟು 4 ಏಕದಿನ ಮತ್ತು 2 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಒಟ್ಟು 9 ವಿಕೆಟ್​ಗಳನ್ನು ಪಡೆದಿದ್ದರು. 2010ರಲ್ಲಿ ಐಪಿಎಲ್​ನಲ್ಲಿ ಆಟವಾಡಿದ ಅವರು ಡೆಕ್ಕನ್ ಚಾರ್ಜರ್ಸ್ ಪರ ಆಟವಾಡಿದರು. ಬಳಿಕ ಪುಣೆ ವಾರಿಯರ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು. ಈ ವೇಳೆ ಒಟ್ಟು 44 ಐಪಿಎಲ್ ಪಂದ್ಯವಾಡಿದ್ದಾರೆ. ಒಟ್ಟು 40 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: Virat Kohli: ಪಾಕ್​ ಆಟಗಾರನ ಆಸೆ ಈಡೇರಿಸಿದ ಕೊಹ್ಲಿ, ವಿಶೇಷ ಉಡುಗೊರೆ ನೀಡಿದ ವಿಡಿಯೋ ವೈರಲ್

ಮಾದಕ ವಸ್ತು ಸೇವನೆ ಪ್ರಕರಣ ಎದುರಿಸಿದ್ದ ರಾಹುಲ್:

ಇನ್ನು, ರಾಹುಲ್ ಶರ್ಮಾ ಅವರು, ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ಬರೋಬ್ಬರಿ 1 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಕೊನೆಗೂ ನಿರಪರಾಧಿ ಎಂದು ಸಾಬೀತುಪಡಿಸಿದರು. ಇದಾದ ಬಳಿಕ ಅವರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ದೊರೆಯಲಿಲ್ಲ. 2014ರಲ್ಲಿ ತಮ್ಮ ಅಂತಿಮ ಐಪಿಎಲ್ ಪಂದ್ಯವನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರವಾಗಿ ಆಡಿದರು. 2014ರ ಬಳಿಕ ರಾಹುಲ್ ಶರ್ಮಾ ದೇಶೀಯ ಕ್ರಿಕೆಟ್ ಅಥವಾ ಲಿಸ್ಟ್ ಎ ಪಂದ್ಯದಲ್ಲಿಯೂ ತಮ್ಮ ರಾಜ್ಯ ತಂಡವಾದ ಪಂಜಾಬ್ ಅನ್ನು ಪ್ರತಿನಿಧಿಸಿಲ್ಲ.
Published by:shrikrishna bhat
First published: