• Home
  • »
  • News
  • »
  • sports
  • »
  • Mohammad Azharuddin: ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಅಜರುದ್ದೀನ್ ತಂದೆ ನಿಧನ

Mohammad Azharuddin: ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಅಜರುದ್ದೀನ್ ತಂದೆ ನಿಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Mohammad Azharuddin: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹೈದರಾಬಾದ್ (Hyderabad ) ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ (Mohammad Azharuddin) ಅವರ ತಂದೆ ಮೊಹಮ್ಮದ್ ಅಜೀಜುದ್ದೀನ್ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹೈದರಾಬಾದ್ (Hyderabad ) ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ (Mohammad Azharuddin) ಅವರ ತಂದೆ ಮೊಹಮ್ಮದ್ ಅಜೀಜುದ್ದೀನ್ ಅವರು ಮಂಗಳವಾರ ಸಂಜೆ ನಿಧನರಾಗಿದ್ದಾರೆ. ಅಜೀಜುದ್ದೀನ್ ಬಹಳ ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದ ಅಜೀಜುದ್ದೀನ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಜೀಜುದ್ದೀನ್‌ನ ಸಾವಿಗೆ ಕುಟುಂಬಸ್ಥರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಏತನ್ಮಧ್ಯೆ, ಅಜರ್ ತಂದೆಯ ಅಂತ್ಯಕ್ರಿಯೆಯು ಇಂದು ಜುಹರ್ ಪ್ರಾರ್ಥನೆಯ ನಂತರ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಮಸ್ಜಿದ್ ಇ ಬಕಿಯಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಇನ್ನು, ಈ ಕುರಿತು ಮುಹಮ್ಮದ್ ಅಜರುದ್ದೀನ್ ಅವರ ಸೋದರ ಮಾವ ಮುಹಮ್ಮದ್ ಖಲೀಕುರ್ ರೆಹಮಾನ್ ಮಾಹಿತಿ ನೀಡಿದ್ದಾರೆ.


ಮೊಹಮ್ಮದ್ ಅಜರುದ್ದೀನ್ ತಂದೆ ವಿಧಿವಶ:


ಹೌದು, ಟೀಂ ಇಂಡಿಯಾದ ಖ್ಯಾತ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ತಂದೆ ಮೊಹಮ್ಮದ್ ಅಜೀಜುದ್ದೀನ್ ಅವರು ಮಂಗಳವಾರ ಸಂಜೆ ಕೊನೆಯುಸಿರೆಳೆದಿದ್ದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ, ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ರಾತ್ರಿ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಇಂದು ಅವರ ಧರ್ಮದ ವಿಧಿವಿಧಾನಗಳ ಮೂಲಕ ಜರುಗಲಿದೆ ಎಂದು ಕುಟುಂಬದ ಮೂಲಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅವರ ಸಾವಿಗೆ ಅನೇಕ ಕ್ರಿಕೆಟಿಗರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಕಳೆದ ದಿನವಷ್ಟೇ ಬಿಸಿಸಿಐ ಸಭೆಯಲ್ಲಿ ಭಾಗಿಯಾಗಿದ್ದ ಅಜರುದ್ದೀನ್:


ಬಿಸಿಸಿಐ 36ನೇ BCCI ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ ಆಗಿದ್ದಾರೆ. ಅದರಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಸತತ ಎರಡನೇ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಉಳಿದಂತೆ ರಾಜೀವ್‌ ಶುಕ್ಲಾ ಉಪಾಧ್ಯಕರಾಗಿ, ಜಂಟಿ ಕಾರ್ಯದರ್ಶಿ ಆಗಿ ದೇವಜಿತ್‌ ಸಾಯ್ಕಿಯ ಮತ್ತು
ಐಪಿಎಲ್‌ ಮುಖ್ಯಸ್ಥರಾಗಿ ಅರುಣ್ ಧುಮಾಲ್‌ ಆಯ್ಕೆ ಆಗಿದ್ದಾರೆ. ಈ ನಿರ್ಣಯವನ್ನು ನಿನ್ನೆ ನಡೆದ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (MGM) ತೆಗೆದುಕೊಳ್ಳಲಾಯಿತು. ಈ ವಿಚಾರವಾಗಿ ಸಭೆಯಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಅಜರುದ್ದೀನ್ ಮಾಹಿತಿ ನೀಡಿದ್ದರು. ಅಲ್ಲದೇ ಸಭೆಯ ಅನೇಕ ವಿಚಾರಗಳನ್ನೂ ಮಾಧ್ಯಮದ ಜೊತೆ ಹಂಚಿಕೊಂಡಿದ್ದರು.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ಮೂಲದ ಬೌಲರ್


ರೋಜರ್ ಬಿನ್ನಿ ಬಹಳ ಒಳ್ಳೆಯ ಮನುಷ್ಯ:


 ಬಿಸಿಸಿಐ ನೂತನ ಅಧ್ಯಕ್ಷರಾದ ರೋಜರ್ ಬಿನ್ನಿ ಕುರಿತು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮಾತನಾಡಿದ್ದು, ‘ರೋಜರ್ ಬಿನ್ನಿ ಬಹಳ ಒಳ್ಳೆಯ ಮನುಷ್ಯ. ನಾನು ಅವರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ ಮತ್ತು ನಮ್ಮಲ್ಲಿ ಉತ್ತಮ ನೆನಪುಗಳಿವೆ. ಐಸಿಸಿ ಅಧ್ಯಕ್ಷ ಸ್ಥಾನದ ಕುರಿತು ಇಂದು ಯಾವುದೇ ಚರ್ಚೆ ನಡೆದಿಲ್ಲ, ಮಂಡಳಿ ನಂತರ ನಿರ್ಧರಿಸಲಿದೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: T20 World Cup 2022: ಆಸೀಸ್​ ನೆಲದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ? ಏನು ಹೇಳುತ್ತೆ ಬೌನ್ಸಿ ಪಿಚ್​ ರೆಕಾರ್ಡ್ಸ್?


ಟೀಂ ಇಂಡಿಯಾ ಪರ ಮೊಹಮ್ಮದ್ ಅಜರುದ್ದೀನ್:


ಇನ್ನು, ಮೊಹಮ್ಮದ್ ಅಜರುದ್ದೀನ್ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಭಾರತದ ಪರ 99 ಟೆಸ್ಟ್ ಪಂದ್ಯದಿಂದ 22 ಶತಕ ಮತ್ತು 21 ಅರ್ಧಶತಕದ ನೆರವಿನಿಂದ 6215 ರನ್ ಗಳಿಸಿದ್ದರು. ಅಲ್ಲದೇ 334 ಏಕದಿನ ಪಂದ್ಯಗಳಿಂದ 7 ಶತಕ ಸಿಡಿಸಿ 9378 ರನ್ ಗಳಿಸಿದ್ದರು. ಜೊತೆಗೆ 12 ವಿಕೆಟ್ ಸಹ ಪಡೆದಿದ್ದಾರೆ.

Published by:shrikrishna bhat
First published: